ಮೈಸೂರು: ಡಿಸಿ ಬಿ.ಶರತ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
![IAS officer Rohini sindhuri appointed as Mysore DC](https://etvbharatimages.akamaized.net/etvbharat/prod-images/kn-mys-5-mysuru-dc-transfer-news-7208092_28092020193545_2809f_1601301945_287.jpg)
ಕಳೆದ ಒಂದು ತಿಂಗಳ ಹಿಂದೆ ಕಲಬುರಗಿಯಿಂದ ವರ್ಗಾವಣೆಯಾಗಿದ್ದ ಐಎಎಸ್ ಅಧಿಕಾರಿ ಬಿ.ಶರತ್ ಅವರನ್ನು ಒಂದು ತಿಂಗಳು ಕಳೆಯುವಷ್ಟರಲ್ಲೇ ಸ್ಥಳ ನಿಗದಿ ಪಡಿಸದೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ನೂತನ ಜಿಲ್ಲಾಧಿಕಾರಿಯಾಗಿ ರೋಹಿಣಿ ಸಿಂಧೂರಿಯವರನ್ನು ನೇಮಕ ಮಾಡಿದೆ.