ETV Bharat / city

ಆನ್​ಲೈನ್ ಪಾಠ ಆರಂಭಿಸದಂತೆ ಪಿಎಂ, ಸಿಎಂಗೆ ಪತ್ರ ಬರೆಯುತ್ತೇನೆ: ಹೆಚ್‌.ವಿಶ್ವನಾಥ್ - ಮಾಜಿ ಸಚಿವ ಎಚ್.ವಿಶ್ವನಾಥ್ ನ್ಯೂಸ್​

ಪ್ರಧಾನ ಮಂತ್ರಿ, ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಮಕ್ಕಳಿಗೆ ಆನ್​ಲೈನ್​ ನಲ್ಲಿ ಪಾಠ ಆರಂಭಿಸದಂತೆ ಪತ್ರ ಬರೆಯುತ್ತೇನೆ ಎಂದು ಮಾಜಿ ಸಚಿವ ಹೆಚ್‌.ವಿಶ್ವನಾಥ್ ತಿಳಿಸಿದ್ದಾರೆ.

ಎಚ್‌.ವಿಶ್ವನಾಥ್​ ಸುದ್ದಿಗೋಷ್ಟಿ
ಎಚ್‌.ವಿಶ್ವನಾಥ್​ ಸುದ್ದಿಗೋಷ್ಟಿ
author img

By

Published : May 17, 2020, 12:23 PM IST

Updated : May 17, 2020, 1:23 PM IST

ಮೈಸೂರು: ಮಕ್ಕಳಿಗೆ ಆನ್​ಲೈನ್​ ನಲ್ಲಿ ಪಾಠ ಆರಂಭಿಸದಂತೆ ಪ್ರಧಾನ ಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆಯುತ್ತೀನಿ ಎಂದು ಮಾಜಿ ಸಚಿವ ಹೆಚ್‌.ವಿಶ್ವನಾಥ್ ತಿಳಿಸಿದರು.

ಹೆಚ್‌.ವಿಶ್ವನಾಥ್​ ಸುದ್ದಿಗೋಷ್ಟಿ

ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನ ಮಂತ್ರಿ, ಸಿಎಂ ಹಾಗೂ ಶಿಕ್ಷಣ ಸಚಿವರಿಗೆ ಈ ಕುರಿತು ಪತ್ರ ಬರೆಯುತ್ತೇನೆ. ಕೊರೊನಾ ಜೊತೆ ಶಿಕ್ಷಣ ವ್ಯವಸ್ಥೆ ಹೇಗೆ ಇರಬೇಕು ಎಂಬುವುದರ ಬಗ್ಗೆ ಬರೆಯುತ್ತೇನೆ. ನಾನು ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೀನಿ, ನನ್ನ ಅನುಭವ ಹಂಚಿಕೊಳ್ಳುತ್ತೀನಿ ಎಂದರು.

ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಾಲೆ ತೆರೆಯಲು ಅವಸರ ಬೇಡ ಹಾಗೂ ಆನ್ ಲೈನ್ ನಲ್ಲಿ ಪಾಠ ಮಾಡುವುದೂ ಬೇಡ. ಮಕ್ಕಳ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕಿದೆ. ಶಾಲೆ ತೆರೆದರೆ ಪ್ರತಿ ಮಗುವಿಗೆ ಕೋವಿಡ್ ಟೆಸ್ಟ್ ಆಗಬೇಕು. ಒಂದು ಮಗುವಿಗೆ ಬಂದರೆ, ಉಳಿದ ಮಕ್ಕಳಿಗೂ ಬರಲಿದೆ. ಅಲ್ಲದೇ ಕುಟುಂಬ, ಶಾಲೆಯನ್ನು ಸಹ ಕ್ವಾರಂಟೈನ್ ಮಾಡಬೇಕಾಗುತ್ತದೆ. ವರ್ಷದಲ್ಲಿ 222 ದಿನ ಶಾಲೆ ನಡೆಯಲಿದೆ. ಇಂತಹ ಸಂದರ್ಭದಲ್ಲಿ 200 ದಿನ ಶಾಲೆ ನಡೆದರೆ ತೊಂದರೆ ಇಲ್ಲ ಎಂದು ಹೇಳಿದರು.

1 ರಿಂದ 7 ನೇ ತರಗತಿವರೆಗೆ ಮನೆಯಲ್ಲಿ ಪಾಠ ಮಾಡಬಹುದು. ಬೇರೆ ದೇಶದಲ್ಲಿ ಸಿಲಬಸ್ ಕಡಿಮೆ, ಹೆಚ್ಚು ಬುದ್ಧಿವಂತಿಕೆಗೆ ಆದ್ಯತೆ ಕೊಡ್ತಾರೆ. ಅದೇ ರೀತಿ ನಮ್ಮ ದೇಶದಲ್ಲಿ ಮಾಡಬೇಕು ಎಂದು ತಿಳಿಸಿದರು. ಜಯಂತಿ, ಬೇರೆ ರಜಾ ದಿನಗಳನ್ನು ಕಟ್ ಮಾಡಿ, ಜಯಂತಿ ಮಾಡದಿದ್ದರೆ ಜಗತ್ತು ಮುಳುಗುವುದಿಲ್ಲ. ರಾಷ್ಟ್ರಪತಿ ಅವರು ರಾಷ್ಟ್ರಪತಿ ಭವನದಲ್ಲಿ ಶೇ.30 ರಷ್ಟು ವೆಚ್ಚ ಕಡಿತ ಮಾಡಿದ್ದಾರೆ. ಶಿಕ್ಷಣ ಇಲಾಖೆ ಬೇರೆ ಇಲಾಖೆ ತರವಲ್ಲ ಎಂದು ಹೇಳಿದರು.

ಮಾಜಿ ಪ್ರಧಾನಿಗೆ ಶುಭಾಶಯ:

ನಾಳೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಹುಟ್ಟುಹಬ್ಬ ಇದೆ. ಅವರಿಗೆ ಶುಭಾಶಯ ಕೋರುತ್ತೇನೆ ಎಂದು ತಿಳಿಸಿದರು.

Last Updated : May 17, 2020, 1:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.