ETV Bharat / city

ಮ್ಯಾಗಿಯಿಂದ ಬೇಸತ್ತು ಪತ್ನಿಗೆ ವಿಚ್ಛೇದನ ನೀಡಿದ ಪತಿ: ಸಂದರ್ಭ ಸಹಿತ ವಿವರಿಸಿದ ನ್ಯಾಯಾಧೀಶರು

ಬ್ಯುಸಿ ಲೈಫ್​ನಿಂದಾಗಿ ಯುವ ದಂಪತಿಗಳು ರೆಡಿ ಟು ಈಟ್ ಫುಡ್​ಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಆದರೆ, ಇಂತಹ ಬೆಳವಣಿಗೆ ಕೆಲವರಲ್ಲಿ ಕಸಿವಿಸಿಯನ್ನುಂಟು ಮಾಡಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದಾಳೆ ಎಂಬ ಕಾರಣಕ್ಕೆ ಬೇಸತ್ತು ವಿಚ್ಛೇದನ ನೀಡಿದ್ದಾನೆ ಎಂದು ಬಳ್ಳಾರಿಯಲ್ಲಿ ನ್ಯಾಯಾಧೀಶರಾಗಿದ್ದಾಗ ನಡೆದ ಘಟನೆಯನ್ನ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶರಾದ ಎಂ ರಘುನಾಥ್ ವಿವರಿಸಿದರು.

author img

By

Published : May 28, 2022, 11:25 AM IST

ಮ್ಯಾಗಿ
ಮ್ಯಾಗಿ

ಮೈಸೂರು: ಬೆಳಗಿನ ತಿಂಡಿ, ಮಧ್ಯಾಹ್ನದ ಊಟ, ರಾತ್ರಿಯ ಊಟ ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದರಿಂದ ಬೇಸತ್ತ ಪತಿಯೊಬ್ಬ ಪತ್ನಿಗೆ ವಿಚ್ಛೇದನ ನೀಡಿದ್ದ ಹಳೇ ಘಟನೆಯನ್ನ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶರಾದ ಎಂ ರಘುನಾಥ್ ಅವರು ವಿವರಿಸಿದರು.

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ನ್ಯಾ. ಎಂ ರಘುನಾಥ್, ಬ್ಯುಸಿ ಲೈಫ್​ನಿಂದಾಗಿ ಯುವ ದಂಪತಿಗಳು ರೆಡಿ ಟು ಈಟ್ ಫುಡ್​ಗಳ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದಾರೆ. ಆದರೆ, ಇಂತಹ ಬೆಳವಣಿಗೆ ಕೆಲವರಲ್ಲಿ ಕಸಿವಿಸಿಯನ್ನುಂಟು ಮಾಡಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ಪತ್ನಿ ಬೆಳಗಿನ ತಿಂಡಿ, ಮಧ್ಯಾಹ್ನದ ಊಟ ಎಲ್ಲದಕ್ಕೂ ಮ್ಯಾಗಿ ಮಾಡಿ ಕೊಡುತ್ತಿದ್ದಾಳೆ ಎಂಬ ಕಾರಣಕ್ಕೆ ಬೇಸತ್ತು ವಿಚ್ಛೇದನ ನೀಡಿದ್ದಾನೆ ಎಂದು ಬಳ್ಳಾರಿಯಲ್ಲಿ ನ್ಯಾಯಾಧೀಶರಾಗಿದ್ದಾಗ ನಡೆದ ಘಟನೆಯನ್ನ ಹೇಳಿದರು.

ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶರಾದ ಎಂ ರಘುನಾಥ್

ನಾನು ಬಳ್ಳಾರಿಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿದ್ದ ವೇಳೆ ಮ್ಯಾಗಿ, ನೂಡಲ್​ ಹೊರತುಪಡಿಸಿ ಬೇರೆ ಯಾವುದೇ ಅಡುಗೆಯನ್ನು ಮಾಡಲು ನನ್ನ ಹೆಂಡತಿಗೆ ಗೊತ್ತಿಲ್ಲ. ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟಕ್ಕೆ ಪ್ರತಿದಿನ ಮ್ಯಾಗಿ, ನೂಡಲ್ಸ್ ಮಾಡುತ್ತಿದ್ದಳು. ಪ್ರಾವಿಷನ್ ಸ್ಟೋರ್​ಗೆ ಹೋದರೆ ರೇಷನ್​ ತರುತ್ತಿರಲಿಲ್ಲ ಎಂದು ಹೇಳಿಕೊಂಡಿದ್ದ. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿತ್ತು. ವಾದ-ಪ್ರತಿವಾದ ಅಲಿಸಿದ ಬಳಿಕ ಅಂತಿಮವಾಗಿ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಂಡಿದ್ದರು ಎಂದು ಮೈಸೂರಿನಲ್ಲಿ ನಡೆದ ಲೋಕ್ ಅದಾಲತ್ ಸಂದರ್ಭದಲ್ಲಿ ಹೇಳಿದರು.

ನಗರ ಪ್ರದೇಶಗಳಲ್ಲೇ ವಿಚ್ಛೇದನ ಹೆಚ್ಚು: ಗ್ರಾಮೀಣ ಭಾಗಗಳಿಗಿಂತ ನಗರ ಪ್ರದೇಶಗಳಿಂದಲೇ ಹೆಚ್ಚು ವಿಚ್ಛೇದನ ಅರ್ಜಿಗಳು ಬರುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸುತ್ತವೆ. ಮಹಿಳೆಯರಿಗೆ ಸ್ವಾತಂತ್ರ್ಯವಿಲ್ಲ , ಸಮಾಜದ ಬಗ್ಗೆ ಅವರ ಭಯ ಮತ್ತು ಕುಟುಂಬದ ಭಾವನೆಗಳು ಪರಿಸ್ಥಿತಿಯನ್ನು ನಿಭಾಯಿಸಲು ಅವರನ್ನು ಒತ್ತಾಯಿಸುತ್ತವೆ. ಆದರೆ, ನಗರಗಳಲ್ಲಿ ಮಹಿಳೆಯರು ಶಿಕ್ಷಣ ಪಡೆದು ಆರ್ಥಿಕವಾಗಿ ಸ್ವಾವಲಂಬಿಗಳಾಗಿರುತ್ತಾರೆ. ಹೀಗಾಗಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲು ಆತಂಕ ಪಡುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಅವಳಲ್ಲ ಅವನು.. ಆರತಕ್ಷತೆ ಪಾರ್ಟಿಯಲ್ಲಿ ಹೊರಬಿತ್ತು ನವವಿವಾಹಿತೆಯ ನಾಟಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.