ETV Bharat / city

ಸದನದೊಳಗೆ ತಪ್ಪುಗಳು ಆಗುತ್ತಿರುತ್ತವೆ, ಕ್ಷಮೆ ಕೇಳಿ ಮುಂದೆ ಹೋಗಬೇಕು.. ಹೆಚ್ ವಿಶ್ವನಾಥ್ - congress protest against eshwarappa statemen

ಪ್ರತಿಭಟನೆಯ ಹೆಸರಲ್ಲಿ ಕಾಂಗ್ರೆಸ್ ಸದನದ ಸಮಯವನ್ನು ಹಾಳು ಮಾಡುತ್ತಿರವುದಾಗಿ ಹೆಚ್ ವಿಶ್ವನಾಥ್ ಹೇಳಿದರು. ಪ್ರತಿಭಟನೆಯೇ ಸಮಸ್ಯೆಗೆ ಪರಿಹಾರವಲ್ಲ ಎಂದು ಹೇಳಿದ್ದಾರೆ..

h-vishvanath-defended-the-eshvarappa
ಎಚ್.ವಿಶ್ವನಾಥ್
author img

By

Published : Feb 19, 2022, 3:43 PM IST

ಮೈಸೂರು : ಸಚಿವ ಕೆ ಎಸ್‌ ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ ಎಂದು ಸಚಿವ ಕೆ ಎಸ್ ಈಶ್ವರಪ್ಪ ಪರ ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಹೆಚ್ ವಿಶ್ವನಾಥ್ ಬ್ಯಾಟಿಂಗ್ ಮಾಡಿದರು.

ಸದನದಲ್ಲಿ ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ಹೇಳಿಕೆಯನ್ನು ಹಿಡಿದುಕೊಂಡು ಕಾಂಗ್ರೆಸ್ ಈ ರೀತಿ ಸದನದ ಸಮಯ‌ ಹಾಳು‌ ಮಾಡುತ್ತಿರುವುದು ತಪ್ಪು. ಸಿದ್ದರಾಮಯ್ಯನಂತಹ ಹಿರಿಯ ನಾಯಕರು ಇಂತಹ ನಡುವಳಿಕೆ ಪ್ರದರ್ಶಿಸಬಾರದಿತ್ತು.

ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದ ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳನ್ನು ಪ್ರದರ್ಶಿಸಬೇಕು ಎಂದು ಸಲಹೆ ನೀಡಿದರು.

ಸ್ವಪಕ್ಷೀಯ ಸಚಿವ ಕೆ ಎಸ್‌ ಈಶ್ವರಪ್ಪ ಪರ ಎಂಎಲ್‌ಸಿ ಹೆಚ್ ವಿಶ್ವನಾಥ್ ಬ್ಯಾಟ್‌ ಬೀಸಿರುವುದು..

ಮುಖ್ಯಮಂತ್ರಿಗಳು, ಎರಡೂ ಸದನಗಳ ನಾಯಕರು ಹಾಗೂ ಸ್ಪೀಕರ್‌ಗಳು ತುರ್ತಾಗಿ ಸಭೆ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು.

ಮುಂದೆ ಚುನಾವಣೆ ಇರೋದ್ರಿಂದ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ರೀತಿ ಮಾಡುತ್ತಿದ್ದಾರೆ. ಜನ‌ ಎಲ್ಲವನ್ನು ಹೊರಗಡೆ ನೋಡುತ್ತಿದ್ದಾರೆ‌. ಪ್ರತಿಭಟನೆಯೇ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ಕುಟುಕಿದರು.

ಓದಿ : ಸಚಿವ ಕೆ.ಎಸ್.ಈಶ್ವರಪ್ಪ ಭಾವಚಿತ್ರಕ್ಕೆ ಹಾಲಿನ ಅಭಿಷೇಕ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.