ETV Bharat / city

ಕುಟುಂಬಸ್ಥರಿಗೆ ಗುಂಡಿಕ್ಕಿ ಉದ್ಯಮಿ ಆತ್ಮಹತ್ಯೆ ಕೇಸ್​: ಮೂವರು ಗನ್​ಮ್ಯಾನ್​ಗಳ ವಿಚಾರಣೆ

ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಗುಂಡ್ಲುಪೇಟೆಯಲ್ಲಿ ಐವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಚುರುಕುಗೊಂಡಿದ್ದು, ಮೂವರು ಖಾಸಗಿ ಗನ್​ಮ್ಯಾನ್​ಗಳನ್ನು​ ಪೊಲೀಸರು​ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಗುಂಡ್ಲುಪೇಟೆ ಆತ್ಮಹತ್ಯೆ ಪ್ರಕರಣ
author img

By

Published : Aug 17, 2019, 12:59 PM IST

Updated : Aug 17, 2019, 1:40 PM IST

ಮೈಸೂರು: ಗುಂಡ್ಲುಪೇಟೆಯಲ್ಲಿ ಉದ್ಯಮಿವೋರ್ವ ತನ್ನ ಕುಟುಂಬಸ್ಥರಿಗೆ ಗುಂಡಿಕ್ಕಿ ಬಳಿಕ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಖಾಸಗಿ ಮ್ಯಾನ್​ಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ನಡೆದ ಬಳಿಕ ಸೂಕ್ತ ತನಿಖೆ ಮಾಡುವಂತೆ ಮೃತ ಓಂ ಪ್ರಕಾಶ್ ಅವರ ಮಾವ ಶಾಂತರಾಮ್ ಚಾಮರಾಜನಗರ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಈ ಪ್ರಕರಣವನ್ನು ತನಿಖೆ ಮಾಡಲು ಡಿವೈಎಸ್ಪಿ, ಜಿ. ಮೋಹನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಗುಂಡ್ಲುಪೇಟೆ ಆತ್ಮಹತ್ಯೆ ಪ್ರಕರಣ

ಮೃತ ಓಂಪ್ರಕಾಶ್ ಬಳಸುತ್ತಿದ್ದ ದೂರವಾಣಿ ಸಂಖ್ಯೆಯ ಕಾಲ್​ ಲಿಸ್ಟ್​ ಪಡೆದು ಮತ್ತು ಖಾಸಗಿ ಗನ್ ​ಮ್ಯಾನ್​ಗಳನ್ನು ಇಟ್ಟುಕೊಳ್ಳಲು ಇವರಿಗೆ ಯಾರಿಂದಲಾದ್ರೂ ಜೀವ ಭಯವಿತ್ತೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:ಮೈಸೂರು: ಗುಂಡಿಕ್ಕಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬಗ್ಗೆ ನನಗೆ ಅನುಮಾನ ಇದೆ, ಸೂಕ್ತ ತನಿಖೆ ಮಾಡುವಂತೆ ಮೃತ ಓಂಪ್ರಕಾಶ್ ಮಾವ ಚಾಮರಾಜನಗರ ಎಸ್ಪಿ ಕಚೇರಿಗೆ ದೂರು ದಾಖಲಿಸಿದ್ದಾರೆ.Body:ನೆನ್ನೆ ಗುಂಡ್ಲುಪೇಟೆಯ ಖಾಸಗಿ ಜಮೀನಿನಲ್ಲಿ ಶವದ ರೀತಿ ಪತ್ತೆಯಾದ ಓಂಪ್ರಕಾಶ್ ಪತ್ನಿ ನಿಖಿತಾ, ತಂದೆ‌ ನಾಗರಾಜ್ ಭಟ್ಟಾಚಾರ್ಯ, ತಾಯಿ ಹೇಮಲಾತ, ಮಗ ಆರ್ಯ ಎಂಬುವರ ಸಾವು ಅಥವಾ ಆತ್ಮಹತ್ಯೆ ಎಂಬ ಬಗ್ಗೆ ನನಗೆ ಅನುಮಾನ ಇದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅವರ ಮಾವ ಶಾಂತರಾಮ್ ನೆನ್ನೆ ಸಂಜೆ ವಕೀಲರೊಂದಿಗೆ ಚಾಮರಾಜನಗರದ ಎಸ್ಪಿ ಕಚೇರಿಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಈ ಪ್ರಕರಣವನ್ನು ತನಿಖೆ ಮಾಡಲು ಡಿವೈಎಸ್ಪಿ, ಜಿ. ಮೋಹನ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.

ಮನೆಯ ಮುಂದೆ ಅಂತಿಮ ದರ್ಶನ:- ನೆನ್ನೆ ಚಾಮರಾಜನಗರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ರಾತ್ರಿ ಆಂಬುಲೇನ್ಸ್ ಮೂಲಕ ದಟ್ಟಗಳ್ಳಿಯಲ್ಲಿರುವ ಅವರ ನಿವಾಸದ ಮುಂದೆ ರಾತ್ರಿಯಿಂದ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಯಿತ್ತು. ಆದರೆ ಯಾವುದೇ ಮಾಧ್ಯಮದವರಿಗೆ ಚಿತ್ರಿಕರಿಸದಂತೆ ಮನವಿ ಮಾಡಲಾಗುತ್ತಿತ್ತು. ಇಂದು ೫ ಜನರನ್ನು ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶವಗಾರದಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿತ್ತು.
ಈ ಮಧ್ಯೆ ಪೋಲಿಸ್ ಬಿಗಿ ಬಂದೋಬಸ್ತ್ ನಲ್ಲಿ ಓಂಪ್ರಕಾಶ್ ಅವರ ಮನೆಯ ಬಾಗಿಲನ್ನು ತೆಗೆಯಲಾಗಿದ್ದು ಪೋಲಿಸರು ಕುಟುಂಬಸ್ಥರ ಸಮ್ಮುಖದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ‌ಜೊತೆಗೆ ಈತನಿಗೆ ಖಾಸಗಿ ಗನ್ ಮ್ಯಾನ್ ಗಳನ್ನು ವಶಕ್ಕೆ ಪಡೆದಿರುವ ಪೋಲಿಸರು ವಿಚಾರಣೆಯನ್ನು ಸಹ ಕೈಗೊಂಡಿದ್ದು, ಓಂಪ್ರಕಾಶ್ ಬಳಿ ಇದ್ದ ಗನ್ ಪರವಾನಿಗೆ ಪಡೆಯಲಾಗಿತ್ತೆ ಎಂಬ ಬಗ್ಗೆ ತನಿಖೆಯನ್ನು ಸಹ ಕೈಗೊಳ್ಳಲಾಗಿದೆ. ಓಂಪ್ರಕಾಶ್ ಬಳಸುತ್ತಿದ್ದ ನಂಬರ್ ಗೆ ಯಾವ ರೀತಿ ಎಲ್ಲೆಲ್ಲಿಂದ ಕರೆ ಬರುತ್ತಿದ್ದವು ಜೊತೆಗೆ ಇವರು ಖಾಸಗಿ ಗನ್ ಮ್ಯಾನ್ ಗಳನ್ನು ಇಟ್ಟುಕೊಳ್ಳಲು ಇವರಿಗೆ ಯಾರಿಂದ ಜೀವ ಭಯವಿತ್ತು ಎಂಬ ಬಗ್ಗೆ ತನಿಖೆಯನ್ನು ಪೋಲಿಸ್ ತಂಡ ನಡೆಸುತ್ತಿದ್ದು ಅಂತಿಮ ಕ್ರಿಯೆಯ ವಿಧಿವಿಧಾನಗಳು ಮುಗಿದ ನಂತರ ತನಿಖೆಯನ್ನು ಪೋಲಿಸರು ಚುರುಕುಗೊಳಿಸಲು ತಿರ್ಮಾನಿಸಿದ್ದಾರೆ.Conclusion:
Last Updated : Aug 17, 2019, 1:40 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.