ETV Bharat / city

ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ: ಸಿಎಂ ಬಸವರಾಜ ಬೊಮ್ಮಾಯಿ

author img

By

Published : Oct 7, 2021, 3:05 AM IST

ಗುರುವಾರ ನಾನು ಚಾಮರಾಜನಗರಕ್ಕೆ ಹೋಗುತ್ತೇನೆ. ಕೆಲವರು ಏನೇನೋ ಹೇಳ್ತಾರೆ. ಯಾವುದೇ ಜಾಗದಲ್ಲಿ ದೋಷ ಇರಲ್ಲ. ನಾವು ನೋಡುವ ದೃಷ್ಟಿಕೋನದಲ್ಲಿ ದೋಷ ಇರುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

cm bommai
cm bommai

ಮೈಸೂರು: ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ ಮಾಡಲು ಕಾಯಕಲ್ಪ ಕೊಡುತ್ತೀವಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದ ವಿದ್ಯಾರಣ್ಯಪುರದಲ್ಲಿರುವ ಪಾರ್ಕ್​ನಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಪ್ರಧಾನಿ ಮೋದಿ ಜನ್ಮದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮೋದಿ ಯುಗ್ ಉತ್ಸವ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿಯೇ ಫಿಲ್ಮ್​ ಸಿಟಿ ಮಾಡಲು ಕಾಯಕಲ್ಪ ನೀಡುತ್ತೇವೆ ಎಂದರು.

ಗುರುವಾರ ನಾನು ಚಾಮರಾಜನಗರಕ್ಕೆ ಹೋಗುತ್ತೇನೆ. ಕೆಲವರು ಏನೇನೋ ಹೇಳ್ತಾರೆ. ನಾವು ಸಿನಿಮಾ ನೋಡಬೇಕು ಅನಿಸಿದಾಗ ಥಿಯೇಟರ್‌ಗೆ ಹೋಗುತ್ತೇವೆ.
ಥಿಯೇಟರ್ ಹೇಗಿರುತ್ತೆ ಅಂತ ನೋಡಲ್ಲ. ಯಾವುದೇ ಜಾಗದಲ್ಲಿ ದೋಷ ಇರಲ್ಲ. ನಾವು ನೋಡುವ ದೃಷ್ಟಿಕೋನದಲ್ಲಿ ದೋಷ ಇರುತ್ತದೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಯಾವಾಗ ಬೇಕಾದರೂ ಹೊಗ್ತೇನೆ ಎಂದು ತಿಳಿಸಿದರು.

ರಾಮದಾಸ್ ಆದರ್ಶ ಶಾಸಕ. ಅವರಿಗೆ ಕ್ಷೇತ್ರದ ಜನರ ಮೇಲೆ ವಿಶೇಷ ಪ್ರೀತಿಯಿದೆ. ನಮಗೆ ಜನಪ್ರಿಯ ಶಾಸಕರು ಬೇಕಿಲ್ಲ, ಜನ ಉಪಯೋಗಿ ಶಾಸಕರು ಬೇಕು. ಆ ಸಾಲಿನಲ್ಲಿ ಶಾಸಕ ರಾಮದಾಸ್ ಅಗ್ರಗಣ್ಯರಾಗಿದ್ದಾರೆ. ರಾಮದಾಸ್ ಫಾರ್ಮುಲಾವನ್ನು ಇಡೀ ರಾಜ್ಯಕ್ಕೆ ಕೊಡಬೇಕಿದೆ ಎಂದು ಗುಣಗಾನ ಮಾಡಿದರು.
ಸಂಸದ ಪ್ರತಾಪ್ ಸಿಂಹ ಅವರಲ್ಲಿ ಪ್ರತಾಪನೂ ಇದೆ ಸಿಂಹನೂ ಇದೆ. ಯಾವಾಗ ಪ್ರತಾಪ ತೋರಿಸುತ್ತಾನೊ ಗೊತ್ತಿಲ್ಲ. ಯಾವಾಗ ಸಿಂಹ ಘರ್ಜನೆ ಮಾಡ್ತಾನೊ ಗೊತ್ತಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಕಾಲೆಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.