ಮೈಸೂರು: ಭಕ್ತಿಯ ಪರಾಕಾಷ್ಠೆಯಲ್ಲಿ ಮುಳುಗಿದ ಭಕ್ತಸಮೂಹ, ಕಪಿಲೆ ನದಿಯನ್ನು ಮಲಿನಗೊಳಿಸುತ್ತಿದ್ದಾರೆ.
ಹೌದು, ಹುಣ್ಣಿಮೆಯ ದಿನದಂದು ನಂಜನಗೂಡಿನ ಶ್ರೀ ನಂಜುಂಡೇಶ್ವರನ ದರ್ಶನ ಪಡೆಯಲು ಅಪಾರ ಭಕ್ತ ಸಮೂಹ ದೇವಾಲಯಕ್ಕೆ ಹರಿದು ಬರುತ್ತದೆ.
ಇನ್ನು ಮುಡಿಕೊಡುವುದಕ್ಕಾಗಿ ನದಿ ಸ್ನಾನ ಮಾಡಲಾಗುವುದು, ಈ ಪವಿತ್ರ ಸ್ನಾನ ಮಾಡುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಬಟ್ಟೆಗಳನ್ನು ನದಿಗೆ ಎಸೆಯಬೇಡಿ. ಇದರಿಂದ ನದಿಯಲ್ಲಿ ಅಶುಚಿತ್ವ ಹೆಚ್ಚಾಗಲಿದೆ ಎಂಬ ಸಂದೇಶಗಳನ್ನು ಅನೇಕ ಬಾರಿ ನೀಡಲಾಗಿದೆ.
ಆದರೆ, ದೇವಸ್ಥಾನಕ್ಕೆ ಬರುವ ಭಕ್ತರು ಸ್ನಾನ ಮಾಡಿದ ನಂತರ ಪಾಪ ಕಳೆಯಲಿ ಎಂಬ ಉದ್ದೇಶದಿಂದ ನದಿಯಲ್ಲಿ ಬಟ್ಟೆಗಳನ್ನು ಎಸೆಯುತ್ತಿದ್ದಾರೆ. ಇದರಿಂದ ಕಪಿಲೆ ನದಿ ಮಾಲಿನ್ಯಕ್ಕೆ ಒಳಗಾಗುತ್ತದೆ. ನ್ಯಾಯಾಲಯವು ಕೂಡ ಭಕ್ತಿಯ ಹೆಸರಿನಲ್ಲಿ ನದಿಯನ್ನು ಅಶುಚಿತ್ವಗೊಳಿಸಬೇಡಿ ಎಂದು ಹಲವು ಬಾರಿ ನಿರ್ದೇಶನ ನೀಡಿದ್ದರೂ ಭಕ್ತ ಸಮೂಹ ಮಾತ್ರ ಪರಾಕಾಷ್ಟೆಯಲ್ಲಿ ಮುಳುಗಿ ಪರಿಸರ ಹಾಳು ಮಾಡುತ್ತಿರುವುದು ವಿಪರ್ಯಾಸವಾಗಿದೆ.