ಮೈಸೂರು: ಬೈಕ್ ಸವಾರ ಹಾಗೂ ಹಿಂಬದಿ ಸವಾರರು ಹೆಲ್ಮೆಟ್ ಧರಿಸುವುದನ್ನು ಕಡ್ಡಾಯವಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ನಗರ ಸಂಚಾರ ಹಾಗೂ ಅಪರಾಧಿ ವಿಭಾಗದ ಡಿಸಿಪಿ ಗೀತಾ ಪ್ರಸನ್ನ ಹೇಳಿದರು.
ಈಟಿವಿ ಭಾರತ ಜೊತೆಗೆ ಮಾತನಾಡಿದ ಅವರು, ಸಿಟಿಯಲ್ಲಿ ಟ್ರಾಫಿಕ್ಗೆ ಸಂಬಂಧಿಸಿದ ಎಲ್ಲ ವಿಧದ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಿದ್ದೇವೆ. ನಾಗರಿಕರ ಸುರಕ್ಷತೆಯ ಜೊತೆಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಸಹ ನಡೆಯುತ್ತಿದೆ ಎಂದರು.
ಇದನ್ನೂ ಓದಿ: ಸಂಘರ್ಷಕ್ಕಿಳಿಯುವುದಾದರೇ ಬನ್ನಿ:ಪ್ರತಾಪಸಿಂಹಗೆ ಸವಾಲ್ ಹಾಕಿದ ಶಾಸಕ ಮಂಜುನಾಥ್
ಅಪಘಾತ ಪ್ರಕರಣಗಳಿಂದ ಸಾವು-ನೋವು ಸಂಭವಿಸುತ್ತಿದ್ದು, ಈ ಬಗ್ಗೆಯೂ ಜನರಲ್ಲಿ ತಿಳವಳಿಕೆ ಮೂಡಿಸುತ್ತಿದ್ದೇವೆ. 2018ರಲ್ಲಿ 2,15,000 ಹಾಗೂ 2019ರಲ್ಲಿ 1,51,000 ಹೆಲ್ಮೆಟ್ ಧರಿಸದ ಕೇಸ್ಗಳು ದಾಖಲಾಗಿವೆ. ಕೋವಿಡ್ನಿಂದಾಗಿ ಮಾರ್ಚ್ನಿಂದ ಮೇ ತನಕ ಯಾವುದೇ ಹೆಲ್ಮೆಟ್ ಪ್ರಕರಣ ದಾಖಲಿಸಿರಲಿಲ್ಲ. ಜೂನ್ನಿಂದ ಮತ್ತೆ ಪ್ರಕರಣ ದಾಖಲಾತಿ ಶುರುವಾಗಿದ್ದು, ಇದುವರೆಗೂ 1,21,000 ಕೇಸ್ ಬುಕ್ ಮಾಡಲಾಗಿದೆ.
ನಗರದ ಒಳಗೆ ಅಪಘಾತ ಪ್ರಕರಣಗಳು ಕಡಿಮೆಯಾಗಿದ್ದು, ರಿಂಗ್ ರಸ್ತೆಗಳಲ್ಲಿ ಹೆಚ್ಚು ಅಪಘಾತಗಳು ನಡೆಯುತ್ತಿವೆ. ಕಳೆದ ಕೆಲವು ತಿಂಗಳಲ್ಲಿ ಸಂಭವಿಸಿದ ಬಹುತೇಕ ಅಪಘಾತಗಳ ಪೈಕಿ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸದೆ ಮೃತಪಟ್ಟವರು ಹೆಚ್ಚಿಗೆ ಇದ್ದಾರೆ ಎಂದರು.