ಮೈಸೂರು: ನನ್ನ ಡಾಕ್ಯುಮೆಂಟ್ ಫೋರ್ಜರಿ ಆಗಿದೆ ಎಂದು ಒಂದು ತಿಂಗಳ ಹಿಂದೆಯೇ ನನ್ನ ಗಮನಕ್ಕೆ ಬಂದಿತ್ತು ಅಂತಾ ನಟ ದರ್ಶನ್ ಹೇಳಿದರು.
ಎನ್.ಆರ್. ಎಸಿಪಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಪೊಲೀಸರು ವಿಚಾರಣೆಗೆ ಬನ್ನಿ ಅಂತಾ ಕರೆದಿದ್ದರು. ಅದಕ್ಕೆ ಬಂದಿದ್ದೇನೆ. ನಕಲಿ ಬ್ಯಾಂಕ್ ಮ್ಯಾನೇಜರ್ ಅವರನ್ನು ಯಾರು ಪರಿಚಯ ಮಾಡಿದ್ರು? ಹೇಗೆ ಪರಿಚಯ ಮಾಡಿದ್ರು ಅಂತಾ ಎಲ್ಲವೂ ಗೊತ್ತಾಗಲಿದೆ. ಪೊಲೀಸರು ತನಿಖೆಯಲ್ಲಿ ಬಾಯಿ ಬಿಡಿಸ್ತಾರೆ ಎಂದರು.
ನಿಮ್ಮ ಸ್ನೇಹಿತರಿಂದಲೇ ಮೋಸ ಆಗಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಾದರೂ ಸರಿ ನಾನು ಬಿಡಲ್ಲ. ಆ ತರ ಬಂದಾಗ ನಾನು ರೆಕ್ಕೆ ಕಟ್ ಮಾಡಲ್ಲ, ತಲೆನ್ನೇ ಕಟ್ ಮಾಡುವವನು. ಪೊಲೀಸ್ ವಿಚಾರಣೆಯ ನಂತರ ಸತ್ಯಾಂಶ ಹೊರಬರಲಿದೆ. ನಾನು ಕಥೆ ಹೇಳಿದ್ರೆ ಚೆನ್ನಾಗಿರುವುದಿಲ್ಲ ಎಂದು ಗುಡುಗಿದರು.
ಇದನ್ನೂ ಓದಿ: ಪೊಲೀಸ್ ಠಾಣೆಗೆ ಆಗಮಿಸಿದ ನಟ ದರ್ಶನ್: ಯಾಕೆ ಗೊತ್ತಾ?
ಏನಿದು ಘಟನೆ?: ಮೈಸೂರಿನ ನಿಮ್ಮ ಕೆಲ ಸ್ನೇಹಿತರು ನಿಮ್ಮ ಶ್ಯೂರಿಟಿಯಲ್ಲಿ 25 ಕೋಟಿ ರೂ.ಗೆ ಸಾಲಕ್ಕೆ ಅರ್ಜಿ ಹಾಕಿದ್ದಾರೆ. ಇದರ ಬಗ್ಗೆ ಮಾಹಿತಿ ಪಡೆಯಲು ಬಂದಿದ್ದೇನೆ ಎಂದು ನಿರ್ಮಾಪಕ ಉಮಾಪತಿ ಹಾಗೂ ಶ್ರೀನಿವಾಸ ಗೌಡ ಜೊತೆ ದರ್ಶನ್ ಬಳಿ ಲೋನ್ ವಿಚಾರವಾಗಿ ಮಾತನಾಡಲು ತೆರಳಿದ್ದ ಮಹಿಳೆಯೊಬ್ಬರು, ತಾನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಳು. ನಂತರ ವಿಷಯ ತಿಳಿದ ದರ್ಶನ್ ಸ್ನೇಹಿತರು, ಲೋನ್‌ಗೆ ಯಾರೂ ಅರ್ಜಿ ಹಾಕಿಲ್ಲ ಎಂದು ಮೈಸೂರಿನ ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಮಹಿಳಾ ಬ್ಯಾಂಕ್ ಮ್ಯಾನೇಜರ್ ಅನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.