ETV Bharat / city

ದೇಶದಲ್ಲಿ ಕಮ್ಯೂನಿಸ್ಟ್‌ ಮೆಂಟಲಿಟಿಯಿಂದ ಪ್ರತಿಭಟನೆ: ಎಸ್.ಎಲ್. ಭೈರಪ್ಪ

ಕಮ್ಯೂನಿಸ್ಟ್ ಮೆಂಟಲಿಟಿಯಿಂದ ವಿರೋಧ ಪಕ್ಷಗಳು ದೇಶದಲ್ಲಿ ಪ್ರತಿಭಟನೆ ನಡೆಸುತ್ತಿವೆ ಎಂದು ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಆರೋಪಿಸಿದರು.

SR Bhairappa
ಎಸ್.ಆರ್.ಭೈರಪ್ಪ
author img

By

Published : Oct 10, 2020, 8:16 PM IST

Updated : Oct 10, 2020, 9:03 PM IST

ಮೈಸೂರು: ಪ್ರಧಾನಿ ಮೋದಿ ಅವರು ಏನೇ ಸುಧಾರಣೆ ಮಾಡಿದರೂ, ಕಮ್ಯುನಿಸ್ಟ್ ಮೆಂಟಲಿಟಿಯಿಂದ ವಿರೋಧ ಪಕ್ಷಗಳು ದೇಶದಲ್ಲಿ ಪ್ರತಿಭಟನೆ ನಡೆಸುತ್ತಿವೆ ಎಂದು ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್. ಭೈರಪ್ಪ ಅವರು ಆರೋಪಿಸಿದರು.

ಪದ್ಮಶ್ರೀ ಪುರಸ್ಕೃತ, ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ

ಕೋಟತಟ್ಟು ಗ್ರಾಮ ಪಂಚಾಯತ್ ಕೋಟ, ಡಾ.ಶಿವರಾಮ‌ ಕಾರಂತ ಟ್ರಸ್ಟ್, ಡಾ.ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಪ್ರತಿಷ್ಠಾನ ಇವುಗಳ‌ ಸಂಯುಕ್ತಾಶ್ರಯದಲ್ಲಿ ನಗರದ ಖಾಸಗಿ ಶಾಲೆಯಲ್ಲಿ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಶಿವರಾಮ ಕಾರಂತ ಹುಟ್ಟೂರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ದೇಶದ ಮೊದಲ ಪ್ರಧಾನಿ ನೆಹರು ಅವರಿಗೆ ಕಮ್ಯುನಿಸ್ಟ್ ಸಿಸ್ಟಮ್ ಸರಿ ಅನಿಸಿತು, ಹಾಗೆಯೇ ದೇಶವನ್ನು ಮುನ್ನಡೆಸಿದರು. ಆದರೀಗ ವಿರೋಧ ಪಕ್ಷಗಳು ಕಮ್ಯುನಿಸ್ಟ್ ಮೆಂಟಲಿಟಿಯಲ್ಲಿವೆ. ಎಲ್ಲವನ್ನೂ ವಿರೋಧ ಮಾಡುವುದೇ ಇವರ ಕೆಲಸವಾಗಿದೆ ಎಂದರು.

ಎಡಪಂಥ ಹಾಗೂ ಬಲಪಂಥ ಎನ್ನುವ ಶಬ್ಧವನ್ನು ಸೃಷ್ಟಿ ಮಾಡಿದವರೇ ಎಡಪಂಥಿಯರು.‌ ಸಂಪಾದನೆ ಮಾಡಿ ತಲೆ ಮೇಲೆ ಇಟ್ಟುಕೊಂಡು ಹೋಗುವುದಿಲ್ಲ, ದಾನ ಧರ್ಮ ಮಾಡಿ ಅಂತ ಬಲಪಂಥಿಯರು ಹೇಳಿದರೆ.‌ ಎಡಪಂಥದವರು ಸರ್ಕಾರವೇ ಎಲ್ಲಾ‌ ಮಾಡಬೇಕು ಎನ್ನುತ್ತಾರೆ‌. ಲೇಖಕರು ಐಡಿಯಾಲಜಿ‌ ಶುರು ಮಾಡಿದ್ದಾರೆ ಎಂದರು. ಸೌತ್ ಕೆನರಾದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿತ್ತು. ಆದರೆ ಅಧಃಪತನಕ್ಕೆ ಎಡಪಂಥೀಯರು ಕಾರಣರಾಗುತ್ತಿದ್ದಾರೆ ಎಂದು ಹೇಳಿದರು.

Last Updated : Oct 10, 2020, 9:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.