ETV Bharat / city

ಚನ್ನಪಟ್ಟಣದಲ್ಲಿ ಚಿರತೆ ದಾಳಿ : ಇಬ್ಬರು ರೈತರಿಗೆ ಗಾಯ - ಮೈಸೂರು ರೈತರ ಮೇಲೆ ಚಿರತೆ ದಾಳಿ

ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಇಬ್ಬರು ರೈತರ ಮೇಲೆ ಚಿರತೆ ದಾಳಿ ಮಾಡಿದ ಘಟನೆ ಚನ್ನಪಟ್ಟಣದಲ್ಲಿ ನಡೆದಿದ್ದು, ಅರಣ್ಯಾಧಿಕಾರಿಗಳು ಶೀಘ್ರವೇ ಚಿರತೆಯನ್ನು ಸೆರೆಹಿಡಿಯುವುದಾಗಿ ಭರವಸೆ ನೀಡಿದ್ದಾರೆ.

cheetah-attack-in-mysore-channapattana
ಚಿರತೆ ದಾಳಿ
author img

By

Published : May 30, 2020, 4:03 PM IST

ಮೈಸೂರು: ಜಮೀನಿನಿಂದ ಮನೆಗೆ ತೆರಳುತ್ತಿದ್ದ ಇಬ್ಬರು ರೈತರ ಮೇಲೆ‌ ಚಿರತೆಯೊಂದು ದಾಳಿ ಮಾಡಿ, ಗಾಯಗೊಳಿಸಿದ ಘಟನೆ ನಂಜನಗೂಡು ತಾಲೂಕಿನ ಚನ್ನಪಟ್ಟಣ ಗ್ರಾಮದಲ್ಲಿ ನಡೆದಿದೆ.

ಚನ್ನಪಟ್ಟಣ ಗ್ರಾಮದ ಕೆಂಚಬೋವಿ (40), ಗೋವಿಂದನಾಯಕ (50) ಗಾಯಗೊಂಡ ರೈತರು. ಜಮೀನು ಕೆಲಸ ಮುಗಿಸಿಕೊಂಡು ಮನೆಗೆ ಹೋಗುವಾಗ, ಹತ್ತಿ ಬೆಳೆಯ ನಡುವಿನಿಂದ ಏಕಾಏಕಿ ಜಿಗಿದ ಚಿರತೆ ರೈತರ ಮೇಲೆ ದಾಳಿ ನಡೆಸಿ ಗಾಯಗೊಳಿಸಿದೆ.

ಇಬ್ಬರನ್ನು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅರಣ್ಯ ಅಧಿಕಾರಿಗಳು ಭೇಟಿ ನೀಡಿ ರೈತರ ಆರೋಗ್ಯ ವಿಚಾರಿಸಿದ್ದಾರೆ. ಶೀಘ್ರವೇ ಚಿರತೆಯನ್ನು ಸೆರೆಹಿಡಿಯುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.