ETV Bharat / city

ದಾಖಲೆ ಕದ್ದ ಆರೋಪ.. ಮೈಸೂರಲ್ಲಿ ಪತ್ನಿ ವಿರುದ್ಧವೇ ಸಿಎಫ್​​ಟಿಆರ್​ಐ ವಿಜ್ಞಾನಿ ದೂರು - scientist lodged a complaint against his wife

Mysore CFTRI scientist complaint against wife: ಮೈಸೂರಿನ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ವಿಜ್ಞಾನಿ, ತಮ್ಮ ಇ-ಮೇಲ್ ಖಾತೆಯಲ್ಲಿರುವ ಕೆಲವು ಮಾಹಿತಿಗಳನ್ನ ಪತ್ನಿಯೇ ಕದ್ದಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.

CFTRI scientist lodged a complaint against his wife in Mysore
ಪತ್ನಿಯ ವಿರುದ್ಧವೇ ದೂರು ದಾಖಲಿಸಿದ ಸಿಎಫ್​​ಟಿಆರ್​ಐ ವಿಜ್ಞಾನಿ
author img

By

Published : Dec 28, 2021, 6:18 PM IST

ಮೈಸೂರು: ತಮ್ಮ ಇ-ಮೇಲ್ ಖಾತೆಯಲ್ಲಿನ ಕೆಲವು ಮಾಹಿತಿಗಳನ್ನ ತನ್ನ ಪತ್ನಿಯೇ ಕದ್ದಿದ್ದಾರೆ ಎಂದು ಹಿರಿಯ ವಿಜ್ಞಾನಿಯೊಬ್ಬರು ಮೈಸೂರು ನಗರದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಗರದ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್​​ಟಿಆರ್​ಐ)ಯಲ್ಲಿ ಕೆಲಸ ಮಾಡುತ್ತಿರುವ 53 ವರ್ಷದ ವಿಜ್ಞಾನಿ, ತಮ್ಮ ಇ-ಮೇಲ್ ಖಾತೆಯಲ್ಲಿರುವ ಕೆಲವು ಮಾಹಿತಿಗಳನ್ನ ಪತ್ನಿಯೇ ಕದ್ದಿದ್ದಾರೆ ಎಂದು ಆರೋಪಿಸಿ ನಗರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧಗಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ರ‍್ಯಾಗಿಂಗ್​ಗೆ ವಿದ್ಯಾರ್ಥಿನಿ ಬಲಿ ಪ್ರಕರಣ​​ : ನಾಲ್ವರು ಪುಂಡರ ಬಂಧನ

ಈ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಇವರ ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಇರುವುದು ತಿಳಿದು ಬಂದಿದೆ. ಈ ಹಂತದಲ್ಲಿ ದೂರಿನ ಬಗ್ಗೆ ಹೆಚ್ಚಿನ ವಿವರ ಹೇಳಲು ಈಗ ಸಾಧ್ಯವಿಲ್ಲ ಎಂದು ಪೊಲೀಸ್​ ಅಧಿಕಾರಿ 'ಈಟಿವಿ ಭಾರತ'​​​ಕ್ಕೆ ತಿಳಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.