ETV Bharat / city

ತೆರಿಗೆ ಹಣ ನಮ್ದು, ಲಸಿಕೆ ಪ್ರಮಾಣ ಪತ್ರದಲ್ಲಿ ನಿಮ್ಮ ಫೋಟೋ ಬೇಕಾ?: ಪುಷ್ಪ ಅಮರನಾಥ್‌ ವಾಗ್ದಾಳಿ

ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶಾದ್ಯಂತ ಹಲವಾರು ಲಸಿಕೆಗಳನ್ನು ನೀಡಿದೆ. ಆದರೆ, ಪ್ರಮಾಣಪತ್ರದಲ್ಲಿ ಪ್ರಧಾನಿಗಳ ಫೋಟೋ ಹಾಕಿಸಿದ್ದಿಲ್ಲ. ಆದರೆ ಪ್ರಧಾನಿ ಮೋದಿ ಅವರು, ಲಸಿಕೆಯನ್ನು ತಾವೇ ಕೊಟ್ಟಂತೆ ಪ್ರಮಾಣಪತ್ರದಲ್ಲಿ ಫೋಟೋ ಹಾಕಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರಚಾರದ ಹುಚ್ಚು ಹಿಡಿದಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ವಾಗ್ದಾಳಿ ನಡೆಸಿದರು.

central-govt-have-madness-of-publicity
ಪುಷ್ಪ ಅಮರ್ ನಾಥ್
author img

By

Published : Jul 1, 2021, 9:25 PM IST

ಮೈಸೂರು: ತೆರಿಗೆ ಹಣ ನಮ್ಮದು, ಲಸಿಕೆ ಪ್ರಮಾಣ ಪತ್ರಕ್ಕೆ ನಿಮ್ಮ ಫೋಟೋ ಬೇಕಾ?. ಕೇಂದ್ರ ಸರ್ಕಾರಕ್ಕೆ ಪ್ರಚಾರದ ಹುಚ್ಚು ಹಿಡಿದಿದೆ ಎಂದು ಪ್ರಧಾನಿ ಮೋದಿ ವಿರುದ್ಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್ ಕಿಡಿಕಾರಿದರು.

ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಡಾ.ಪುಷ್ಪ ಅಮರನಾಥ್

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶಾದ್ಯಂತ ಹಲವಾರು ಲಸಿಕೆಗಳನ್ನು ನೀಡಿದೆ. ಆದರೆ, ಪ್ರಮಾಣಪತ್ರದಲ್ಲಿ ಪ್ರಧಾನಿಗಳ ಫೋಟೋ ಹಾಕಿಸಿದ್ದಿಲ್ಲ. ಆದರೆ ಪ್ರಧಾನಿ ಮೋದಿ ಅವರು, ಲಸಿಕೆಯನ್ನ ತಾವೇ ಕೊಟ್ಟಂತೆ ಪ್ರಮಾಣಪತ್ರದಲ್ಲಿ ಫೋಟೋ ಹಾಕಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಪ್ರಚಾರದ ಹುಚ್ಚು ಹಿಡಿದಿದೆ ಎಂದು ಟೀಕಿಸಿದರು.

ಈ ಹಿಂದೆ 1 ಲೀಟರ್ ಪೆಟ್ರೋಲ್ 50 ರೂ.ಗೆ ಸಿಗುತ್ತಿತ್ತು. ಆದರೀಗ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂ.ದಾಟಿದೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ದಿನಗಳು ಬರಲಿದೆ. ಬಿಜೆಪಿಗೆ ಮತ ಹಾಕಿದವರು ಯಾಕಾದರೂ ಮತ ಹಾಕಿದೆವೇನೋ ಎಂದು ಯೋಚನೆ ಮಾಡುವಂತಾಗಿದೆ ಎಂದರು.

ಕೆಪಿಡಿಸಿ ಪದಾಧಿಕಾರಿಗಳ ನೇಮಕ ವಿಚಾರವಾಗಿ ಮಾತನಾಡಿ, ಪಕ್ಷ ನನ್ನ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧ. ಎಲ್ಲ ಪಕ್ಷದಲ್ಲೂ ಅಸಮಾಧಾನ ಇದೆ. ಅತಿ ಹೆಚ್ಚು ಅಸಮಾಧಾನ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದಲ್ಲಿಯೇ ಇದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕೊರೊನಾದಿಂದ ಮೃತಪಟ್ಟವರ ಬಗ್ಗೆ ಸರಿಯಾದ ಮಾಹಿತಿ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು ಎಂಬ ಉದ್ದೇಶದಿಂದ ಡೆತ್ ಆಡಿಟ್ ಅಭಿಯಾನ ಮಾಡುವುದಾಗಿ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.