ETV Bharat / city

ಮೊಮ್ಮಗಳ ಸಾವು: ಜಿ.ಟಿ. ದೇವೇಗೌಡ ಕುಟುಂಬಸ್ಥರ ಭೇಟಿ ಮಾಡಿ ಬಿಜೆಪಿ ನಾಯಕರ ಸಾಂತ್ವನ - ಮೊಮ್ಮಗಳ ಸಾವಿಗೆ ಜಿಟಿಡಿ ಕುಟುಂಬಕ್ಕೆ ಬಿಜೆಪಿ ನಾಯಕರ ಸಾಂತ್ವನ

ಮೊಮ್ಮಗಳ ನಿಧನದಿಂದ ದುಃಖತಪ್ತರಾಗಿರುವ ಶಾಸಕ ಜಿ.ಟಿ. ದೇವೇಗೌಡ ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್​ ಕಟೀಲ್​, ಸಚಿವ ಸೋಮಶೇಖರ್​ ಸಾಂತ್ವನ ಹೇಳಿದ್ದಾರೆ.

bjp-leaders
ಬಿಜೆಪಿ ನಾಯಕರ ಸಾಂತ್ವನ
author img

By

Published : May 19, 2022, 8:00 PM IST

ಮೈಸೂರು: ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಅವರ ಮೊಮ್ಮಗಳು ಕ್ಯಾನ್ಸರ್​ನಿಂದ ಸಾವಿಗೀಡಾಗಿದ್ದು, ದುಃಖತಪ್ತರಾಗಿರುವ ಜಿಟಿಡಿ ಕುಟುಂಬಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ಸಾಂತ್ವನ ಹೇಳಿದ್ದಾರೆ.

ನಗರದಲ್ಲಿರುವ ಜಿ.ಟಿ. ದೇವೇಗೌಡ ನಿವಾಸಕ್ಕೆ ಭೇಟಿ ನೀಡಿದ ಬಿಜೆಪಿ ನಾಯಕರು ಮೊಮ್ಮಗಳ ನಿಧನದಿಂದ ಧೃತಿಗೆಟ್ಟಿರುವ ಕುಟುಂಬಸ್ಥರಿಗೆ ಧೈರ್ಯ ಹೇಳಿದರು. ಈ ವೇಳೆ ಸಂಸದ ಪ್ರತಾಪ್ ಸಿಂಹ, ಶಾಸಕರಾದ ನಿರಂಜನ್, ಮಹೇಶ್, ಮಾಜಿ ಸಚಿವ ವಿಜಯ್ ಶಂಕರ್, ಮೂಡಾ ಅಧ್ಯಕ್ಷ ರಾಜೀವ್ ಉಪಸ್ಥಿತರಿದ್ದರು.

ಕಟೀಲ್​ ಟೀಕೆ: ಪಠ್ಯಕ್ರಮವನ್ನು ವಿರೋಧಿಸುವವರು ರಾಷ್ಟ್ರ ವಿರೋಧಿಗಳು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್​ಎಸ್​ಎಸ್ ಸಂಸ್ಥಾಪಕರ ದೇಶಭಕ್ತಿಯ ಭಾಷಣವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಇದರಲ್ಲಿ ತಪ್ಪೇನಿದೆ. ಭಾರತ ಮಾತೆಯ ಆರಾಧನೆ ಎಂದು ಹೇಳಲಾಗಿದೆ. ಅದು ರಾಷ್ಟ್ರ ವಿರೋಧಿಯಾ ಎಂದು ಪ್ರಶ್ನಿಸಿದ್ದಾರೆ.

ಪಠ್ಯವನ್ನು ಬರೆದವರು ಯಾರು ಎಂಬುದು ಮುಖ್ಯವಲ್ಲ. ಅದರೊಳಗಿನ ಆದರ್ಶದ ವಿಚಾರವಷ್ಟೇ ಮುಖ್ಯ. ವಿಷಯದ ಆಳವನ್ನ ಅರಿಯದೆ ಮಾತನಾಡುವವರು ರಾಷ್ಟ್ರ ವಿರೋಧಿಗಳು ಎಂದು ಕಟೀಲ್ ಟೀಕಿಸಿದ್ದಾರೆ.

ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೈ.ವಿ. ರವಿಶಂಕರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.