ETV Bharat / city

ಕೆಪಿಎಲ್​​: ಬೆಳಗಾವಿ ಪ್ಯಾಂಥರ್ಸ್ ದಾಳಿಗೆ ಬೆಚ್ಚಿದ ಬುಲ್ಸ್ - ಬೆಳಗಾವಿ ಪ್ಯಾಂಥರ್ಸ್ ಸುಲಭ ಗೆಲುವು

ರವಿಕುಮಾರ್ ಸಮರ್ಥ್ (50*) ಅರ್ಧಶತಕ ಮತ್ತು ಅಭಿನವ್ ಮನೋಹರ್ (42*) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಬಿ ಬೆಳಗಾವಿ ಪ್ಯಾಂಥರ್ಸ್ ಸುಲಭ ಗೆಲುವು ಸುಲಭ ಗೆಲುವು ದಾಖಲಿಸಿದೆ.

Belagavi Panthers won by 7 wickets against bijapur bulls
author img

By

Published : Aug 26, 2019, 10:35 PM IST

ಮೈಸೂರು: ರವಿಕುಮಾರ್ ಸಮರ್ಥ್ (50*) ಅರ್ಧಶತಕ ಮತ್ತು ಅಭಿನವ್ ಮನೋಹರ್ (42*) ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಬಿಜಾಪುರ ಬುಲ್ಸ್ ವಿರುದ್ಧ ಬೆಳಗಾವಿ ಪ್ಯಾಂಥರ್ಸ್ ಗೆಲುವು ದಾಖಲಿಸಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಬುಲ್ಸ್ ನೀಡಿದ್ದ 135 ರನ್‌ಗಳ ಸವಾಲವನ್ನು ಬೆನ್ನಟ್ಟಿದ್ದ ಬೆಳಗಾವಿ ಪ್ಯಾಂಥರ್ಸ್ 3 ವಿಕೆಟ್​ ಕಳೆದುಕೊಂಡು ಇನ್ನೂ 14 ಎಸೆತಗಳನ್ನು ಉಳಿಸಿ ಗೆಲುವಿನ ದಡ ಸೇರಿತು. ಪ್ಯಾಂಥರ್ಸ್​ ಕೂಡ ಆರಂಭದಲ್ಲಿ ಮಹತ್ವದ ಎರಡು ವಿಕೆಟ್​ ಕಳೆದುಕೊಂಡು ಒತ್ತಡಕ್ಕೆ ತಂದು ನಿಲ್ಲಿಸಿತ್ತು.

ಆದರೆ, ರವಿಕುಮಾರ್ ಸಮರ್ಥ್ ಮತ್ತು ದಿಕ್ಷಾಂಶು ನೇಗಿ (32) ಅವರು ಉತ್ತಮ ಜತೆಯಾಟದ ಮೂಲಕ ಪಂದ್ಯವನ್ನು ಜಯದ ಹೊಸ್ತಿಲಿಗೆ ತಂದರು. ರವಿಕುಮಾರ್ ಸಮರ್ಥ್ 45 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ನೆರವಿನಿಂದ 50 ರನ್ ಗಳಿಸಿ ಜಯದ ರೂವಾರಿ ಎನಿಸಿದರು. ಅಭಿನವ್ ಮನೋಹರ್ 30 ಎಸೆತಗಳಲ್ಲಿ 5 ಬೌಂಡರಿ ಹಾಗೂ ಸಿಕ್ಸರ್ ನೆರವಿನಿಂದ 42ರನ್ ಗಳಿಸಿದರು. ಬುಲ್ಸ್​ ಪರ ಎಂ.ಜಿ.ನವೀನ್​ 2ವಿಕೆಟ್​ ಕಿತ್ತಿದ್ದಾರೆ.

ಮೊದಲು ಬ್ಯಾಟ್​ ಮಾಡಿದ ಬಿಜಾಪುರ ಬುಲ್ಸ್ ಕೇವಲ 135 ರನ್​ ಕಲೆ ಹಾಕಲಷ್ಟೇ ಶಕ್ತವಾಯ್ತು. ಬುಲ್ಸ್ ಪರ ನಾಯಕ ಭರತ್ ಚಿಪ್ಲಿ (33), ಎನ್.ಪಿ.ಭರತ್ (35*) ಹೊರತುಪಡಿಸಿದರೆ ಇನ್ನುಳಿದ ಆಟಗಾರರು ರನ್​ ಗಳಿಸುವಲ್ಲಿ ವಿಫಲರಾದರು. ನವೀನ್ (3), ರಾಜು ಭಟ್ಕಳ್ (6), ಚಿರಂಜೀವಿ (12) ಹಾಗೂ ಸುನಿಲ್ ರಾಜ (18) ಅಲ್ಪಮೊತ್ತಕ್ಕೆ ಕುಸಿದರು.

ಪ್ಯಾಂಥರ್ಸ್​ ಪರ ಅವಿನಾಶ್​​, ಶುಭಂಗ್​ ಹೆಗ್ಡೆ, ದರ್ಶನ್​ ಎಂ.ಬಿ ಅವರು ತಲಾ 2 ವಿಕೆಟ್​ ಪಡೆದುಕೊಂಡಿದ್ದಾರೆ. ಮನೀಶ್ ಪಾಂಡೆ ಅವರ ಅನುಪಸ್ಥಿತಿಯಲ್ಲಿ ಮಿರ್ ಕೌನೇನ್ ಅಬ್ಬಾಸ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿದ್ದರು. ಒಂದು ಪಂದ್ಯದಲ್ಲಿ ಗೆದ್ದಿರುವ ಬಿಜಾಪುರ ಬುಲ್ಸ್‌ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

Intro:ಕೆಪಿಎಲ್ Body:ಪ್ಯಾಂಥರ್ಸ್ ದಾಳಿಗೆ ಬೆಚ್ಚಿದ ಬುಲ್ಸ್
ಮೈಸೂರು: ಮಾಧ್ಯಮ ಬ್ಯಾಟ್ಸ್‌ಮನ್‌ಗಳಾದ ರವಿಕುಮಾರ್ ಸಮರ್ಥ್ (೫೦ ನಾಟೌಟ್) ಹಾಗೂ ಅಭಿನವ್ ಮನೋಹರ್ (೪೨ನಾಟೌಟ್ ) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಬೆಳಗಾವಿ ಪ್ಯಾಂಥರ್ಸ್ ತಂಡವು ಬಿಜಾಪುರ ಬುಲ್ಸ್ ವಿರುದ್ಧದ ೭ ವಿಕೆಟ್ ಗಳ ಸುಲಭ ಜಯ ದಾಖಲಿಸಿದೆ.
ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಕೆಪಿಎಲ್ ಪಂದ್ಯಾವಳಿಯಲ್ಲಿ ಬಿಜಾಪುರ ಬುಲ್ಸ್ ನೀಡಿದ್ದ  ೧೩೭ ರನ್‌ಗಳ ಸುಲಭ ಸವಾಲವನ್ನು ಬೆಂಬತ್ತಿದ ಬೆಳಗಾವಿ ಪ್ಯಾಂಥರ್ಸ್ ಇನ್ನೂ ೧೪ ಎಸೆತಗಳು ಬಾಕಿ ಇರುವಾಗಲೇ ಗುರಿ ತಲುಪಿತು.
ರವಿಕುಮಾರ್ ಸಮರ್ಥ್ ಅವರು ೪೫ ಎಸೆತಗಳಲ್ಲಿ ೫೦ ರನ್ ಗಳಿಸಿ ಜಯದ ರೂವಾರಿ ಎನಿಸಿದರು.  ಅವರ ಇನಿಂಗ್ಸ್‌ನಲ್ಲಿ ೪ ಬೌಂಡರಿ ೧ ಸಿಕ್ಸರ್ ಸೇರಿತ್ತು. ಅಭಿನವ್ ಮನೋಹರ್ ೩೦ ಎಸೆತಗಳಲ್ಲಿ ೫ ಬೌಂಡರಿ ೧ ಸಿಕ್ಸರ್ ನೆರವಿನಿಂದ ಅಜೇಯ ೪೨ ರನ್ ಗಳಿಸಿ ಜವಾಬ್ದಾರಿಯ ಆಟ ಪ್ರದರ್ಶಿಸಿದರು.ಬೆಳಗಾವಿ ಪ್ಯಾಂಥರ್ಸ್ ವಿರುದ್ಧ ಮೊದಲು ಬ್ಯಾಟಿಂಗ್‌ಗಿಳಿದ ಬಿಜಾಪುರ ಬುಲ್ಸ್ ಕೇವಲ ೧೩೬ ರನ್ ಗೆ ಕಲೆ ಹಾಕಿತು.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಬುಲ್ಸ್ ಪರ ನಾಯಕ ಭರತ್ ಚಿಪ್ಲಿ (೩೩) ಹಾಗೂ ಎನ್.ಪಿ.ಭರತ್ (೩೫ ನಾಟೌಟ್) ಹೊರತುಪಡಿಸಿದರೆ ಬುಲ್ಸ್ ತಂಡದ ಇತರ ಆಟಗಾರರು ಪ್ಯಾಂಥರ್ಸ್ ದಾಳಿಯನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು. ಕೇವಲ ಒಂದು ಪಂದ್ಯದಲ್ಲಿ ಜಯ ಗಳಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಬಿಜಾಪುರ ಬುಲ್ಸ್‌ನ ಆರಂಭ ಉತ್ತಮವಾಗಿರಲಿಲ್ಲ. ನವೀನ್ ಕೇವಲ ೩ ರನ್‌ಗೆ ತೃಪ್ತಿಪಟ್ಟರೆ, ನಾಯಕ ಭರತ್ ಚಿಪ್ಲಿ  ೩೩ ರನ್ ಗಳಿಸಲು ೨೯ ಎಸೆತಗಳನ್ನು ಎದುರಿಸಬೇಕಾಯಿತು. ಅದರಲ್ಲಿ ೩ ಬೌಂಡರಿ ಹಾಗೂ ೨ ಸಿಕ್ಸರ್  ಸೇರಿತ್ತು. ಭರವಸೆಯ ಆಟಗಾರ ರಾಜು ಭಟ್ಕಳ್ (೬) ಹೆಚ್ಚು ಕಾಲ ಕ್ರೀಸಿನಲ್ಲಿ ಉಳಿಯಲಿಲ್ಲ. ದಿಕ್ಷಾಂಶು ನೇಗಿ ಅವರ ಬೌಲಿಂಗ್ ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಚಿರಂಜೀವಿ (೧೨) ಹಾಗೂ ಸುನಿಲ್ ರಾಜ (೧೮) ಕೆಲ ಹೊತ್ತು ಪ್ಯಾಂಥರ್ಸ್ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು, ಆದರೆ ರನ್ ಗತಿಯಲ್ಲಿ ವೇಗ ಇರಲಿಲ್ಲ. ಕೊನೆಯ ಕ್ಷಣದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಭರತ್ ಎನ್ ಪಿ, ೧೮ ಎಸೆತಗಳನ್ನೆದುರಿಸಿ ೧ ಬೌಂಡರಿ ಹಾಗೂ ೨ ಸಿಕ್ಸರ್ ಮೂಲಕ ಅಜೇಯ ೩೫ ರನ್ ಗಳಿಸಿ ಸಾಧಾರಣ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು.
ಮನೀಶ್ ಪಾಂಡೆ ಅವರ ಅನುಪಸ್ಥಿತಿಯಲ್ಲಿ ಮಿರ್ ಕೌನೇನ್ ಅಬ್ಬಾಸ್ ತಂಡದ ನಾಯಕತ್ವದ ಜವಾಬ್ದಾರಿ ವಹಿಸಿದ್ದರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿರುವ ನಾಯಕನ ಆಯ್ಕೆಯನ್ನು ಪ್ಯಾಂಥರ್ಸ್ ಬೌಲರ್ ಗಳು ಉತ್ತಮ ರೀತಿಯಲ್ಲಿ ಸಮರ್ಥಿಸಿಕೊಂಡರುConclusion:ಕೆಪಿಎಲ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.