ಮೈಸೂರು: ನಟ ದರ್ಶನ್ ಅವರು ದಿ ಪ್ರಿನ್ಸ್ ಹೋಟೆಲ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತಾ ಅವರಿಗೆ ಹಿರಿಯ ವಕೀಲ ಅಮೃತೇಶ್ ದೂರು ನೀಡಿದ್ದಾರೆ.
ಇದನ್ನೂ ಓದಿ: ಹೋಟೆಲ್ನಲ್ಲಿ ಅಂದು ನಡೆದಿದ್ದೇನು?: ಪ್ರಿನ್ಸ್ ಹೋಟೆಲ್ ಮಾಲೀಕ ಸಂದೇಶ್ ಸ್ಪಷ್ಟನೆ ಹೀಗಿದೆ..
ದರ್ಶನ್ ಸೆಲೆಬ್ರಿಟಿ ಎಂಬ ಕಾರಣಕ್ಕೆ ದೂರು ದಾಖಲಿಸಲು ವಿಳಂಬ ಮಾಡಬೇಡಿ. ಘಟನೆ ಕಂಡುಬಂದ ತಕ್ಷಣ ಸ್ವಯಂ ಪ್ರೇರಣೆಯಿಂದ ಕೇಸ್ ದಾಖಲಿಸುವಂತೆ ಸುಪ್ರೀಂಕೋರ್ಟ್ ನಿರ್ದೇಶನವಿದೆ. ಹಾಗಾಗಿ ಕೂಡಲೇ ದರ್ಶನ್ ಹಾಗೂ ಸ್ನೇಹಿತರ ವಿರುದ್ಧ ಎಫ್.ಐ.ಆರ್ ದಾಖಲಿಸುವಂತೆ ಪತ್ರದಲ್ಲಿ ಪೊಲೀಸ್ ಆಯುಕ್ತರಿಗೆ ಅಮೃತೇಶ್ ಮನವಿ ಮಾಡಿದ್ದಾರೆ.