ETV Bharat / city

ಮೈಸೂರು: ತಂಗಿ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿ ಮಾಡಿದ ಕಾಮುಕ ಅಣ್ಣ - ಗರ್ಭಿಣಿಯಾದ ಬಾಲಕಿ

ಸ್ವಂತ ತಂಗಿ ಮೇಲೆ ಅತ್ಯಾಚಾರ ನಡೆಸಿದ ಕಾಮುಕ ಅಣ್ಣನೋರ್ವ ಆಕೆಯನ್ನು ಗರ್ಭಿಣಿ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

brother rapes his own sister in mysuru
ತಂಗಿಯ ಮೇಲೆ ಅಣ್ಣನಿಂದ ಅತ್ಯಾಚಾರ
author img

By

Published : Nov 28, 2021, 12:53 PM IST

Updated : Nov 28, 2021, 1:51 PM IST

ಮೈಸೂರು: ಒಡಹುಟ್ಟಿದ 16 ವರ್ಷದ ತಂಗಿಯ ಮೇಲೆ ಕಾಮುಕ ಅಣ್ಣನೊಬ್ಬ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿ ಮಾಡಿರುವ ಹೇಯ ಕೃತ್ಯ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಈ ಅಮಾನುಷ ಘಟನೆ ನಡೆದಿದ್ದು, ಆರೋಪಿ ವಿನಯ್ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಚಿಕ್ಕವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ಅಪ್ರಾಪ್ತೆ, ಅಣ್ಣನ ಆಶ್ರಯ ಪಡೆದಿದ್ದಳು. ಈಕೆಗೆ ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರಿದ್ದು, ಅಕ್ಕರಿಗೆ ವಿವಾಹವಾದ ಕಾರಣ ಇಬ್ಬರು ಅಣ್ಣಂದಿರ ಜೊತೆ ಬಾಲಕಿ ಆಶ್ರಯ ಪಡೆದಿದ್ದಳು.

ಇದನ್ನೂ ಓದಿ: ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ ಜಗತ್ತಿನ ಅತಿ ಎತ್ತರದ ರೈಲ್ವೆ ಸೇತುವೆ ಕಂಬ

ಕುಡಿತದ ಚಟಕ್ಕೆ ದಾಸನಾಗಿದ್ದ ವಿನಯ್ ಕುಮಾರ್, ಅಮಲಿನಲ್ಲಿ ಸ್ವಂತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಳೆದ ಮೂರು ತಿಂಗಳಿಂದ ಅತ್ಯಾಚಾರ ಎಸಗಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಅಮಲಿನಲ್ಲಿ ಮಗನನ್ನು ಅಮಾನವೀಯವಾಗಿ ಥಳಿಸಿದ ಕುಡುಕ ತಂದೆ - Video Viral

ಶನಿವಾರ ಈ ಘಟನೆ ಬೆಳಕಿಗೆ ಬಂದಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಅಪ್ರಾಪ್ತೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿನಯ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸದ್ಯಕ್ಕೆ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

Last Updated : Nov 28, 2021, 1:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.