ಮೈಸೂರು: ಪೊಲೀಸ್ ಬೈಕ್ ತಪಾಸಣೆ ವೇಳೆ ಡಬ್ಬದಲ್ಲಿ ವ್ಯಕ್ತಿವೋರ್ವ ಹಾವನ್ನು ಹಿಡಿದುಕೊಂಡು ಬಂದ ಘಟನೆ ನಗರದ ಆರ್ಡಿಂಝು ಸರ್ಕಲ್ನಲ್ಲಿ ನಡೆದಿದೆ.
ಎರಡನೇ ದಿನದ ಲಾಕ್ಡೌನ್ನಲ್ಲಿ ಪೊಲೀಸರು ಇಂದು ಸಹ ತಪಾಸಣೆ ಮುಂದುವರಿಸಿದ್ದು, ನಗರದ ಆರ್ಡಿಂಝ್ ಸರ್ಕಲ್ ಬಳಿ ವಾಹನ ತಪಾಸಣೆ ನಡೆಸುವಾಗ ಇದೇ ಸಮಯದಲ್ಲಿ ಬೈಕ್ನಲ್ಲಿ ಬಂದ ಸ್ನೇಕ್ ಕುಮಾರ್ ಡಬ್ಬದಲ್ಲಿ ಹಾವನ್ನು ಹಿಡಿದುಕೊಂಡು ಬಂದಿದ್ದ. ಪೊಲೀಸರು ಎಲ್ಲಿಗೆ ಹೋಗುತ್ತಿದ್ದಿಯಾ ಎಂದು ಪ್ರಶ್ನಿಸಿದಾಗ ಕಾಡಿಗೆ ಎಂದು ಉತ್ತರಿಸಿದ್ದ. ಏಕೆ ಎಂದು ಕೇಳಿದ ಪೊಲೀಸರಿಗೆ ಹಾವಿನ ಡಬ್ಬ ತೋರಿಸಿ, ಇದನ್ನು ಕಾಡಿಗೆ ಬಿಡಲು ಎಂದು ತಿಳಿಸಿದ. ತಕ್ಷಣ ಶಾಕ್ ಆದ ಪೊಲೀಸರು ಬ್ಯಾರಿಕೇಡ್ ತೆಗೆದು ಹೋಗಲು ದಾರಿ ಮಾಡಿ ಕೊಟ್ಟರು.
ತುರ್ತು ಪರಿಸ್ಥಿತಿ ಹೊರತುಪಡಿಸಿ, ಯಾವುದೇ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲವೆಂದು ಸರ್ಕಾರ ಹೇಳಿದೆ. ಬೇರೆ ವಿಧಿಯಿಲ್ಲದೆ ಪೊಲೀಸರು ಸ್ನೇಕ್ ಕುಮಾರ್ಗೆ ಕಾಡಿಗೆ ತೆರಳಿ ಹಾವನ್ನು ಬಿಟ್ಟು ಬರಲು ಅವಕಾಶ ನೀಡಿದ್ದಾರೆ.