ETV Bharat / city

ಒಂದೇ ಕ್ಯಾಂಪಸ್​ನಲ್ಲಿ ಮಕ್ಕಳಿಗಾಗಿ 500 ಬೆಡ್ ವ್ಯವಸ್ಥೆ; ಪ್ರತಾಪ್ ಸಿಂಹ

ಮೈಸೂರಿನಲ್ಲಿ ಕೊರೊನಾ ಸಾವಿನ ಸಂಖ್ಯೆಯ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿಯಾಗಿ ಅನಿಲ್ ಕ್ರಿಸ್ಟ್ ಎಂಬವರನ್ನು ನೇಮಿಸಲಾಗಿದೆ‌ ಎಂದು ಪ್ರತಾಪ ಸಿಂಹ ಹೇಳಿದರು.

Mysore
ಪ್ರತಾಪ್ ಸಿಂಹ
author img

By

Published : Jun 21, 2021, 1:31 PM IST

ಮೈಸೂರು: ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ, ಒಂದೇ ಕ್ಯಾಂಪಸ್​ನಲ್ಲಿ ಮಕ್ಕಳಿಗಾಗಿ 500 ಬೆಡ್ ವ್ಯವಸ್ಥೆ ಮಾಡಲು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸಂಸದ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷ ಪ್ರತಾಪ್ ಸಿಂಹ ತಿಳಿಸಿದರು.

ಕೊರೊನಾ ಮೂರನೇ ಅಲೆ ಕುರಿತು ಮಾತನಾಡಿದ ಸಂಸದ

ಮಾನಸ ಗಂಗೋತ್ರಿಯಲ್ಲಿ ಬಯಲು ರಂಗಮಂದಿರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ ಸ್ಕ್ಯಾನ್ ರೇ ವೈದ್ಯಕೀಯ ಉಪಕರಣ ತಯಾರಿಕೆ ಘಟಕದಲ್ಲಿ ಕಳೆದ ತಿಂಗಳು 29 ಮಂದಿ ಮಕ್ಕಳ ತಜ್ಞ ವೈದ್ಯರೊಂದಿಗೆ ಜಿಲ್ಲೆಯ ಉಸ್ತುವಾರಿ ಸಚಿವರು, ನಗರ ಪಾಲಿಕೆ ಹಿಂದಿನ ಆಯುಕ್ತೆ ಶಿಲ್ಪನಾಗ್ ಹಾಗೂ ಅಧಿಕಾರಿಗಳು ಚರ್ಚೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ತೆರೆಯಲು ತೀರ್ಮಾನ ಮಾಡಲಾಗಿದೆ ಎಂದರು.

ಯಾವ ಮಕ್ಕಳು ಕೊರೊನಾ ಬಂದು ಆಸ್ಪತ್ರೆಗೆ ಬರಲು ಕಷ್ಟಪಡಬಾರದು ಎನ್ನುವುದು ನಮ್ಮ ಉದ್ದೇಶ. ಮಕ್ಕಳಲ್ಲಿ ಕೊರೊನಾ ತಡೆಯಲು ಪೋಷಕರಿಗೆ ವ್ಯಾಕ್ಸಿನ್ ನೀಡಲು ಸಿದ್ಧತೆ ಮಾಡಿದ್ದೇವೆ ಎಂದು ತಿಳಿಸಿದರು.

ಮೈಸೂರಿನಲ್ಲಿ ಸಾವಿನ ಸಂಖ್ಯೆಯ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿಯಾಗಿ ಅನಿಲ್ ಕ್ರಿಸ್ಟ್ ಎಂಬವರನ್ನು ನೇಮಿಸಲಾಗಿದೆ‌ ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.