ಮೈಸೂರು : ನಟ ದರ್ಶನ್ ಅವರ ಫಾರಂ ಹೌಸ್ನಲ್ಲಿ ಮೂರು ಕುರಿಗಳ ಕಳ್ಳತನವಾಗಿದೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಿ.ನರಸೀಪುರ ತಾಲೂಕಿನ ಮುಖ್ಯ ರಸ್ತೆಯ ಹೊಸ ಕೆಂಪಯ್ಯನಹುಂಡಿ ಗ್ರಾಮದ ಬಳಿಯಿರುವ ನಟ ದರ್ಶನ್ ಅವರ 'ವಿನಿಶ್ ದರ್ಶನ್ ಕಾಟೇವಾರಿ ಫಾರಂ'ನಲ್ಲಿ 75 ಸಾವಿರ ರೂ. ಬೆಲೆ ಬಾಳುವ 3 ಕುರಿಗಳ ಕಳ್ಳತನ ಆಗಿದೆ.
ಈ ಬಗ್ಗೆ ಫಾರಂ ಹೌಸ್ ನಲ್ಲಿ ಕೆಲಸ ಮಾಡುವ ನಾಗರಾಜ್ ಎಂಬುವರು ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಟ ದರ್ಶನ್ ಅವರು ಪಾರಂ ಹೌಸ್ನಲ್ಲಿ ಕುರಿ ಸಾಕಾಣಿಕೆ, ಹೈನುಗಾರಿಕೆ ಸೇರಿದಂತೆ ವಿವಿಧ ಪ್ರಾಣಿ-ಪಕ್ಷಿಗಳನ್ನು ಸಾಕುತ್ತಿದ್ದಾರೆ. ಫ್ರೀ ಟೈಮ್ ನಲ್ಲಿ ದರ್ಶನ್ ಅವರು ಪಾರಂ ಹೌಸ್ಗೆ ತೆರಳಿ, ಸ್ವತಃ ಅವರೇ ಕೆಲಸ ಮಾಡುತ್ತಾರೆ.