ETV Bharat / city

ಕಾಂಕ್ರೀಟ್​​​ ನಾಡಿಗೋಸ್ಕರ ಮರಗಳನ್ನು ಕಡಿಯುತ್ತಿದ್ದೇವೆ: ಸಂಸದ ನಳೀನ್​​

ಸಾಲುಮರದ ತಿಮ್ಮಕ್ಕ ಅವರಿಗೆ ಅಕ್ಷರ ಜ್ಞಾನವಿಲ್ಲ. ಯಾವುದೇ ಪದವಿ ಪಡೆದಿಲ್ಲ. ಆದರೆ ತಾನು ಹುಟ್ಟಿರುವ ನೆಲದಲ್ಲಿ ಮುಂದಿನ ಜನಾಂಗಕ್ಕೂ ಪ್ರಕೃತಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಸಹಸ್ರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಸಂಸದ ನಳಿನ್​​ ಕುಮಾರ್ ಕಟೀಲು ಹೇಳಿದರು.

ಗಿಡಕ್ಕೆ ನೀರು ಹಾಕಿದ ಸಾಲುಮರದ ತಿಮ್ಮಕ್ಕ
author img

By

Published : Jul 6, 2019, 9:26 PM IST

ಮಂಗಳೂರು: ಸಾಲುಮರದ ತಿಮ್ಮಕ್ಕ ಅವರಿಗೆ ಅಕ್ಷರ ಜ್ಞಾನವಿಲ್ಲ. ಯಾವುದೇ ಪದವಿ ಪಡೆದಿಲ್ಲ. ಆದರೆ ತಾನು ಹುಟ್ಟಿರುವ ನೆಲದಲ್ಲಿ ಮುಂದಿನ ಜನಾಂಗಕ್ಕೂ ಪ್ರಕೃತಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಸಹಸ್ರ ಗಿಡಗಳನ್ನು ನೆಟ್ಟು ಬೆಳೆಸಿದ್ದಾರೆ ಎಂದು ಸಂಸದ ನಳಿನ್​​ ಕುಮಾರ್ ಕಟೀಲು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಲುಮರದ ತಿಮ್ಮಕ್ಕ ಮತ್ತು ಇತರರು

ನಗರದ ಯೆಯ್ಯಾಡಿಯ ವಿಕಾಸ್ ಕಾಲೇಜಿನಲ್ಲಿ 'ವೃಕ್ಷ ವಿಕಾಸ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಲುಮರದ ತಿಮ್ಮಕ್ಕ ಅವರು ಗಿಡಗಳ ಹಿಂದೆ ಬದುಕನ್ನು ಸಾಗಿಸಿದ್ದರ ಪರಿಣಾಮವೇ 107 ವರ್ಷವಾದರೂ ಅಷ್ಟೊಂದು ಉತ್ಸಾಹದಿಂದ ಇದ್ದಾರೆ. ಹಾಗಾಗಿ ಸುದೀರ್ಘ ವರ್ಷಗಳ ಕಾಲ ಬದುಕಬೇಕೆಂಬ ಇಚ್ಛೆಯುಳ್ಳವರು ಇವತ್ತಿನಿಂದ ಗಿಡ ನೆಡಬೇಕು ಎಂದರು.

ಕಾರ್ಯಕ್ರಮಕ್ಕೂ ಮೊದಲು ಸಾಲುಮರದ ತಿಮ್ಮಕ್ಕ ಹಾಗೂ ನಾಗಲ್ಯಾಂಡ್​ ರಾಜ್ಯಪಾಲ ಪಿ.ಬಿ.ಆಚಾರ್ಯ ಅವರು ಕಾಲೇಜಿನ ಕ್ಯಾಂಪಸ್​ನಲ್ಲಿ ಗಿಡ ನೆಟ್ಟರು.

Intro:ಮಂಗಳೂರು: ಸಾಲುಮರದ ತಿಮ್ಮಕ್ಕ ಗಿಡಗಳ ಹಿಂದೆ ಬದುಕನ್ನು ಸಾಧಿಸಿದ ಕಾರಣ, ಆ ಗಿಡಗಳನ್ನು ದೇವರು ಎಂದು ತಿಳಿದಿರುವುದರಿಂದ ಪ್ರಕೃತಿಯಲ್ಲಿ ತನ್ನ ಜೀವನವನ್ನು ಅರಗಿಸಿದ ಕಾರಣ 107 ವರ್ಷಗಳಲ್ಲಿಯೂ ಅವರು ಇಷ್ಟೊಂದು ಉತ್ಸಾಹದಿಂದ ಇದ್ದಾರೆ. ಹಾಗಾಗಿ ಸುದೀರ್ಘ ವರ್ಷಗಳ ಕಾಲ ಬದುಕಬೇಕೆಂಬ ಇಚ್ಛೆಯುಳ್ಳವರು ಇವತ್ತಿನಿಂದ ಗಿಡ ನೆಡಿ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದ ಯೆಯ್ಯಾಡಿಯಲ್ಲಿರುವ ವಿಕಾಸ್ ಕಾಲೇಜಿನಲ್ಲಿ ವೃಕ್ಷ ವಿಕಾಸ ಎಂಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಾಲುಮರದ ತಿಮ್ಮಕ್ಕನವರಿಗೆ ಅಕ್ಷರ ಜ್ಞಾನವಿಲ್ಲ. ಯಾವುದೇ ಪದವಿ ಪಡೆದಿಲ್ಲ. ಆದರೆ ತಾನು ಹುಟ್ಟಿರುವ ನೆಲದಲ್ಲಿ ಮುಂದಿನ ಜನಾಂಗಕ್ಕೂ ಪ್ರಕೃತಿ ಉಳಿಯಬೇಕೆನ್ನುವ ದೃಷ್ಟಿಯಲ್ಲಿ ಸಹಸ್ರ ಸಹಸ್ರ ಗಿಡಗಳನ್ನು ನೆಟ್ಟು ಬೆಳೆಸಿದರು. ಇದರ ಮೂಲಕ ಪ್ರಕೃತಿ, ಸಮಾಜ ಹಾಗೂ ಊರನ್ನೇ ಉಳಿಸುವಂತಹ ಶ್ರೇಷ್ಠ ಕಾಯಕವನ್ನು ಮಾಡಿದರು. ಹಾಗಾಗಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

Body:ಸಕಲ ಚರಾಚರ ವಸ್ತುಗಳಲ್ಲಿಯೂ ಭಗವಂತನ ಸಾನಿಧ್ಯವಿದೆ ಎಂದು ಸ್ವೀಕಾರ ಮಾಡಿರುವ ಏಕೈಕ ದೇಶ ಭಾರತ. ಹಾಗಾಗಿ ಪ್ರಕೃತಿಯಲ್ಲಿ ಭಗವಂತನನ್ನು ಕಂಡೆವು. ಮರಗಳಲ್ಲಿ ಭಗವಂತನ ಸಾನಿಧ್ಯವಿದೆ ಎಂದು ನಾವು ಆರಾಧಿಸಿದೆವು. ಮರವನ್ನು ಕಡಿಯುವ ಮನಸ್ಸಿಗೆ ಅದರಲ್ಲಿ ಭಗವಂತನಿರುವನೆಂಬ ಕಾರಣಕ್ಕಾಗಿ ಯಾರೂ ಮರಗಳನ್ನು‌ ಕಡಿಯಲು ಹೋಗುವುದಿಲ್ಲ. ವಿಜ್ಞಾನ ಯುಗವಾದ ಇಂದು ನಾವು ಕಾಂಕ್ರಿಟ್ ಕಟ್ಟಡಕ್ಕೋಸ್ಕರ ಮರಗಳನ್ನು ಕಡಿಯುತ್ತಿದ್ದೇವೆ. ಇಂದು ನಮಗೆ ಮಳೆ ಬಾರದೆ ಬರದ ಸ್ಥಿತಿ ನಿರ್ಮಾಣವಾಗಿರುವುದಕ್ಕೆ ಮರಗಳ ನಾಶವೇ ಕಾರಣ.

ಕಾರ್ಯಕ್ರಮಕ್ಕೂ ಮೊದಲು ಸಾಲುಮರದ ತಿಮ್ಮಕ್ಕ ಹಾಗೂ ನಾಗಲ್ಯಾಂಡ್ ನ ರಾಜ್ಯಪಾಲ ಪಿ.ಬಿ.ಆಚಾರ್ಯ ವಿಕಾಸ್ ಕಾಲೇಜಿನ ಕ್ಯಾಂಪಸ್ ನಲ್ಲಿ ಗಿಡಗಳನ್ನು ನೆಟ್ಟರು.

Conclusion:ಈ ಕಾರ್ಯಕ್ರಮದಲ್ಲಿ ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾಲೇಜಿನ ಅಧ್ಯಕ್ಷ, ಮಾಜಿ ಶಾಸಕ ಕೃಷ್ಣ ಜೆ.ಪಾಲೆಮಾರ್, ಪಾರ್ಥಸಾರಥಿ ಜೆ.ಪಾಲೆಮಾರ್, ದ.ಕ.ಜಿಲ್ಲಾ ಅರಣ್ಯಾಧಿಕಾರಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

Reporter_Vishwanath Panjimogaru

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.