ಬಂಟ್ವಾಳ (ದಕ್ಷಿಣ ಕನ್ನಡ) : ಕೂಲಿ ಕಾರ್ಮಿಕರೊಬ್ಬರು ಪವಿತ್ರ ಹಜ್ ಯಾತ್ರೆಗೆ ಕೂಡಿಟ್ಟ ಹಣವನ್ನು ತಮ್ಮಂತೆಯೇ ಕಷ್ಟದಲ್ಲಿರುವ ಹಸಿದ ಹೊಟ್ಟೆಗಳಿಗೆ ಆಹಾರ ಸಾಮಗ್ರಿ ವಿತರಿಸಿ ಮಾನವೀಯತೆ ಮೆರೆದ ಸುದ್ದಿ ಈಗ ಗಡಿದಾಟಿ ಲಂಡನ್ಗೆ ತಲುಪಿದೆ.
ಬಂಟ್ವಾಳ ಬಿ.ಸಿ.ರೋಡ್‌ನ ಗೂಡಿನಬಳಿ ನಿವಾಸಿ ಅಬ್ದುಲ್ ರೆಹಮಾನ್ ದಂಪತಿ ಬಡವರಿಗೆ ದಿನಸಿ ವಿತರಿಸಿ ಗಮನ ಸೆಳೆದವರು. ಏಪ್ರಿಲ್ 24ರಂದು ಈಟಿವಿ ಭಾರತದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ದಂಪತಿ ಪುತ್ರ ಬಂಟ್ವಾಳ ಬಿ.ಸಿ.ರೋಡ್‌ನ ಗೂಡಿನಬಳಿ ನಿವಾಸಿ ಅಬ್ದುಲ್ ರೆಹಮಾನ್ ದಂಪತಿ ಬಡವರಿಗೆ ದಿನಸಿ ವಿತರಿಸಿ ಗಮನ ಸೆಳೆದವರು. ಏಪ್ರಿಲ್ 24ರಂದು ಈಟಿವಿ ಭಾರತದಲ್ಲಿ ಈ ಕುರಿತು ವರದಿ ಪ್ರಕಟಗೊಂಡಿತ್ತು. ದಂಪತಿ ಪುತ್ರ ಇಲ್ಯಾಸ್ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದರು.
ಇದನ್ನು ಓದಿದ ಲಂಡನ್ ನಿವಾಸಿ ಬಿಲಾಲ್ ಚಾವ್ಲಾ ಅವರು ಇಲ್ಯಾಸ್ ಅವರನ್ನು ಸಂಪರ್ಕಿಸಿದರು. ಆಗ ಇಲ್ಯಾಸ್, ತನ್ನ ತಂದೆಗೆ ಹಜ್ ಯಾತ್ರೆಗೆ ಪಾಣಕ್ಕಾಡ್ ಸಯ್ಯದ್ ಮನವ್ವರ್ ಅಲಿ ಶಿಯಾಬ್ ತಂಙಳರು ನೆರವು ನೀಡಿದ ಬಗ್ಗೆ ತಿಳಿಸಿದ್ದಾರೆ.

ಈ ವೇಳೆ ಬಿಲಾಲ್ ಅವರು, ಇಲ್ಯಾಸ್ ಅವರ ತಂದೆ-ತಾಯಿಗೆ ಹಜ್ ಯಾತ್ರೆಗೆ ನೆರವು ನೀಡುವುದಾಗಿ ತಿಳಿಸಿದ್ದರು. ಬಿಲಾಲ್ ಅವರು ರೆಹಮಾನ್ ಅವರ ಪುತ್ರನ ಸ್ನೇಹಿತ ಆಸಿಫ್ ಬಜ್ಪೆ ಮುಖಾಂತರ ಹಣ ಕಳುಹಿಸಿಕೊಟ್ಟಿದ್ದಾರೆ. ಅದನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಸದಸ್ಯರು ಅಬ್ದುಲ್ ರೆಹಮಾನ್ ಕುಟುಂಬಕ್ಕೆ ತಲುಪಿಸಿದರು.
