ETV Bharat / city

ಬೆಳ್ತಂಗಡಿ : ಮೌಢ್ಯಕ್ಕೆ ಬಲಿಯಾದ ಹೂ ಬಿಟ್ಟ ಅಪರೂಪದ 'ಶ್ರೀತಾಳೆ' ಮರ - ಶ್ರೀತಾಳೆ ಮರ ಕಡಿದ ಗ್ರಾಮಸ್ಥರು

ಪರಿಸರ ಪ್ರೇಮಿಗಳ ಅವಿರತ ಪ್ರಯತ್ನಗಳ ಹೊರತಾಗಿಯೂ ವೇಣೂರು ಸಮೀಪ ಹೂ ಬಿಟ್ಟಿರುವ ಶ್ರೀತಾಳೆ ಮರ ಮೌಢ್ಯಕ್ಕೆ ಬಲಿಯಾಗಿದೆ..

shreetale tree
ಹೂ ಬಿಟ್ಟ ಅಪರೂಪದ 'ಶ್ರೀತಾಳೆ' ಮರ
author img

By

Published : Nov 26, 2021, 4:28 PM IST

ಬೆಳ್ತಂಗಡಿ : ವೇಣೂರು ಸಮೀಪ ಹೂ ಬಿಟ್ಟಿರುವ ಶ್ರೀತಾಳೆ ಮರವನ್ನು ಕೊನೆಗೂ ಮೌಢ್ಯದ ನೆಪದಲ್ಲಿ ಧರೆಗುರುಳಿಸಲಾಗಿದೆ. ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂ ಬಿಡುವ ಶ್ರೀತಾಳೆ ಮರವೊಂದು ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದ ಚಂದ್ರಶೇಖರ್‌ ಎಂಬವರ ತೋಟದಲ್ಲಿ ಹೂ ಬಿಟ್ಟಿತ್ತು. ಈ ಅಪರೂಪದ ಮರದ ವಿಡಿಯೋ ಹಾಗೂ ವರದಿ ಮಾಧ್ಯಮಗಳಲ್ಲಿ ಬರತೊಡಗಿದವು. ಈ ಬಗ್ಗೆ ಈಟಿವಿ ಭಾರತ ವಿಸ್ಕ್ರತ ವರದಿ ಪ್ರಸಾರ ಮಾಡಿತ್ತು.

ಇದನ್ನೂ ಓದಿ: ಜೀವಿತಾವಧಿಯಲ್ಲಿ ಒಂದು ಬಾರಿ ಮಾತ್ರ ಹೂಬಿಟ್ಟ ಮರ: ಕಡಿಯಲು ಸಿದ್ಧವಾದ್ರು ಊರಿನ ಜನ!

ಹಲವಾರು ಮಂದಿ ಬಂದು ಇದರ ಸೌಂದರ್ಯವನ್ನು ನೋಡುತಿದ್ದರು. ಆದರೆ, ಏನೇನೋ ಕಥೆ ಕಟ್ಟಿ ಹೂ ಬಿಟ್ಟ ಈ ಮರವನ್ನು ತಕ್ಷಣ ಕಡಿಯಬೇಕು, ಇಲ್ಲದಿದ್ದರೆ ಊರಿಗೆ ಹಾಗೂ ಮನೆಯ ಯಜಮಾನನಿಗೆ ದೊಡ್ಡ ಗಂಡಾಂತರ ಆಗಲಿದೆ ಎಂಬ ಮಾತು ಕೇಳಿ ಬರತೊಡಗಿದವು.

ಮರ ಕಡಿಯದಂತೆ ಮನವಿ ಮಾಡಿದ್ದ ಪರಿಸರ ಪ್ರೇಮಿಗಳು : ಅಲ್ಲದೇ ಮರ ಕಡಿಯುವುದು ಕೂಡ ಪೂಜೆ ಹಾಗt ಚೆಂಡೆ ವಾದ್ಯಗಳ ಮೂಲಕ ವಿವಿಧ ಧಾರ್ಮಿಕ ವಿಧಿವಿದಾನಗಳ ಮೂಲಕ ವಿಜೃಂಭಣೆಯಿಂದ ನಡೆಸುವ ಬಗ್ಗೆಯೂ ಚಿಂತನೆ ನಡೆಯುತ್ತಿರುವ ಬಗ್ಗೆ ಕೆಲವು ಪರಿಸರ ಪ್ರೇಮಿಗಳಿಗೆ ಮಾಹಿತಿ ಸಿಕ್ಕಿತ್ತು. ಅವರು ಮರ ಕಡಿಯುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಮನೆಯವರಿಗೆ ಹಾಗೂ ಅರಣ್ಯ ಇಲಾಖೆಗೆ ಈ ಅಪರೂಪದ ಮರ ಕಡಿಯದಂತೆ ಮನವಿ ಮಾಡಿದ್ದರು.

ಈ ಬಗ್ಗೆ ಒಪ್ಪಿದ ಮನೆಯವರು ಇದೀಗ ಯಾರಿಗೂ ತಿಳಿಯದಂತೆ ಮರವನ್ನು ಕಡಿದು ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಪರಿಸರ ಪ್ರೇಮಿಗಳು ಅಸಮಾಧಾನ ಹೊರ ಹಾಕಿದ್ದಾರೆ. ಅಳಿವಿನಂಚಿನಲ್ಲಿರುವ ಈ ಮರವನ್ನು ಉಳಿಸುವಂತೆ ಮನವಿ ಮಾಡಿದ್ದರೂ, ಮೌಢ್ಯತೆಯಿಂದ ತುಂಡರಿಸಿದ್ದಾರೆ.

ಅದಲ್ಲದೇ ಹೂ ಬಿಟ್ಟ ಈ ಮರ ಇನ್ನು 2 ವರ್ಷಗಳಲ್ಲಿ ಸಾಯುತ್ತಿತ್ತು. ಅಷ್ಟರಲ್ಲಿ ಹೂ ಬಿಟ್ಟ ಈ ಮರದಲ್ಲಿ ಬೀಜ ಉತ್ಪತ್ತಿಯಾಗಿ ಅದೆಷ್ಟೋ ಗಿಡಗಳು ನಮಗೆ ಸಿಕ್ಕಿ ಅದನ್ನು ಬೆಳೆಸಿ ಅಳಿವಿನಂಚಿನಲ್ಲಿದ್ದ ಈ ಪ್ರಬೇಧವನ್ನು ಉಳಿಸಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.