ETV Bharat / city

ಅಮೆಜಾನ್​, ಫ್ಲಿಪ್​​ಕಾರ್ಟ್ ಆನ್​​ಲೈನ್​ ಸೇವೆಯನ್ನು ಸರ್ಕಾರ ಬಂದ್ ಮಾಡಿಸಲಿ‌: ಖಾದರ್

ಗ್ರಾಹಕರು ಆನ್​​ಲೈನ್​ ಶಾಪಿಂಗ್ ಮಾಡಿದಲ್ಲಿ ಎಲ್ಲ ಸರಿಯಾದ ಬಳಿಕವೂ ಯಾರೂ ಅಂಗಡಿಗಳಿಗೆ ತೆರಳಿ ವಸ್ತುಗಳನ್ನು ಖರೀದಿಸುವುದಿಲ್ಲ.‌ ಆದ್ದರಿಂದ ರಾಜ್ಯಸರ್ಕಾರ ಅಮೆಜಾನ್​​ ಹಾಗು ಫ್ಲಿಪ್​​ಕಾರ್ಟ್ ಆನ್​​ಲೈನ್​ ಸೇವೆಯನ್ನು ತಕ್ಷಣದಿಂದಲೇ ಬಂದ್ ಮಾಡಿಸಲಿ ಎಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.

Mangalore
ಶಾಸಕ ‌ಯು.ಟಿ.ಖಾದರ್
author img

By

Published : May 4, 2021, 1:20 PM IST

ಮಂಗಳೂರು: ಕೊರೊನಾ ಕರ್ಫ್ಯೂ ಹಿನ್ನೆಲೆಯಲ್ಲಿ ಮೊಬೈಲ್ ಶಾಪ್, ಬಟ್ಟೆ ಅಂಗಡಿ, ಟೈಲರ್ ಶಾಪ್​​ಗಳನ್ನು ಬಂದ್ ಮಾಡಲಾಗಿದೆ. ಹಾಗಾದರೆ ಅಮೆಜಾನ್​ ಹಾಗು ಫ್ಲಿಪ್​​ಕಾರ್ಟ್ ಆನ್​​ಲೈನ್​ ಸೇವೆಯನ್ನೂ ಸ್ಥಗಿತ‌ಗೊಳಿಸುವಂತೆ ರಾಜ್ಯಸರ್ಕಾರ ಆದೇಶಿಸಲಿ ಎಂದು ಶಾಸಕ ‌ಯು.ಟಿ.ಖಾದರ್ ಆಗ್ರಹಿಸಿದ್ದಾರೆ.

ಅಮೆಜಾನ್​, ಫ್ಲಿಪ್​​ಕಾರ್ಟ್ ಆನ್​​ಲೈನ್​ ಸೇವೆಯನ್ನು ಸರ್ಕಾರ ತಕ್ಷಣವೇ ಬಂದ್ ಮಾಡಿಸಲಿ‌: ಖಾದರ್ ಆಗ್ರಹ

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮೆಜಾನ್ ಹಾಗು ಫ್ಲಿಪ್​​ಕಾರ್ಟ್ ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರುತ್ತದೆಯೇ ಎಂದು ಪ್ರಶ್ನಿಸಿದರು. ಇಂದು ಎಲೆಕ್ಟ್ರಾನಿಕ್, ಬಟ್ಟೆ, ಮೊಬೈಲ್ ವ್ಯಾಪಾರಸ್ಥರು ಎಲ್ಲಾ ಬಂದ್ ಆಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿದ್ದಾರೆ. ಗ್ರಾಹಕರು ಅಮೆಜಾನ್ ಹಾಗು ಫ್ಲಿಪ್​​ಕಾರ್ಟ್ ಮೂಲಕ ಆನ್​​ಲೈನ್​ ಶಾಪಿಂಗ್ ಮಾಡಿದ್ದಲ್ಲಿ, ಎಲ್ಲ ಸರಿಯಾದ ಬಳಿಕವೂ ಯಾರೂ ಅಂಗಡಿಗಳಿಗೆ ತೆರಳಿ ಖರೀದಿಸುವುದಿಲ್ಲ.‌

ಆದ್ದರಿಂದ ರಾಜ್ಯಸರ್ಕಾರ ಅಮೆಜಾನ್ ಹಾಗು ಫ್ಲಿಪ್​​ಕಾರ್ಟ್ ಆನ್​​ಲೈನ್​ ಸೇವೆಯನ್ನು ತಕ್ಷಣದಿಂದಲೇ ಬಂದ್ ಮಾಡಿಸಲಿ. ಅದೆಲ್ಲವೂ ವಿದೇಶಿ ಕಂಪೆನಿಗಳಾಗಿದ್ದು, ಅವರಿಗೆ ಯಾಕೆ ಲಾಭ ಮಾಡಿಸಬೇಕು. ನಮ್ಮ ವ್ಯಾಪಾರಿಗಳು ಸಾಲ ಮಾಡಿ ಅಂಗಡಿಗಳನ್ನು ತೆರೆದಿದ್ದಾರೆ. ಎಲ್ಲವೂ ಸರಿಯಾದ ಬಳಿಕವಾದರೂ ವ್ಯಾಪಾರವಾಗಲಿ ಎಂದರು.

ಇದನ್ನೂ ಓದಿ: ಪಾಠ ಕಲಿಸಿದ ಆಕ್ಸಿಜನ್ ದುರಂತ: ಈಗಲಾದರೂ ಬದಲಾಗಬೇಕಿದೆ ಆಸ್ಪತ್ರೆ ಅವ್ಯವಸ್ಥೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.