ಮಂಗಳೂರು: ಶಿಕ್ಷಣ ಕಲಿಯಬೇಕೆಂಬ ಇಚ್ಛೆಯಿದ್ದರೆ ಅದಕ್ಕೆ ವಯಸ್ಸು ಅಡ್ಡಿಯಾಗುವುದಿಲ್ಲ. ಇದಕ್ಕೆ ಅಪರೂಪದ ನಿದರ್ಶನ ಉಡುಪಿಯ ಹಿರಿಯ ಮಹಿಳೆ. ತನ್ನ ಮೊಮ್ಮಕ್ಕಳೊಂದಿಗೆ ಹಾಯಾಗಿರಬೇಕಾದ 75 ವರ್ಷದಲ್ಲೂ ಇವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್ಡಿ ಪದವಿ ಪಡೆದುಕೊಂಡಿದ್ದಾರೆ.
ಉಡುಪಿ ಜಿಲ್ಲೆಯ ಉಷಾ ಚಡಗ ಈ ಸಾಧನೆ ಮಾಡಿದವರು. ಇವರಿಗೆ ಇಬ್ಬರು ಮೊಮ್ಮಕ್ಕಳಿದ್ದಾರೆ. ಇದೀಗ 'ಕ್ರಿಟಿಕಲ್ ಅನಾಲಿಸಿಸ್ ಆಫ್ ಶ್ರೀ ಮಧ್ವಾಚಾರ್ಯಾಸ್ ಯುನೀಕ್ ಡಾಕ್ಟ್ರಿನ್ಸ್ ಆಫ್ ಜೀವಸ್ವಭಾವ ವಾದ ಆ್ಯಂಡ್ ಸರ್ವಶಬ್ದ ವಚ್ಯತ್ವ ಆಫ್ ವಿಷ್ಣು' ಎಂಬ ಪ್ರಬಂಧಕ್ಕೆ ಮಂಗಳೂರು ವಿವಿ ಪಿಎಚ್ಡಿ ಪದವಿ ನೀಡಿದೆ.
ಉಷಾ ಚಡಗ ಅವರು ತಿರುವನಂತಪುರಂನ ಸಂತನ ಪಬ್ಲಿಕ್ ಸ್ಕೂಲ್ನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕ ಉಡುಪಿಗೆ ಬಂದಿದ್ದು ಎಸ್ಎಂಎಸ್ಪಿ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತಾಧ್ಯಯನ ಮಾಡಿದ್ದಾರೆ. ಸಂಸ್ಕೃತ ವಿದ್ವತ್ ಕಲಿತ ಬಳಿಕ ಪಿಎಚ್ಡಿ ಮಾಡಲು ನಿರ್ಧರಿಸಿ 5 ವರ್ಷಗಳಲ್ಲಿ ಪೂರ್ಣಗೊಳಿಸಿದ್ದಾರೆ.
ಇದನ್ನೂ ಓದಿ: ಅಪ್ಪನ ಸಾಧನೆಗೆ ಪುತ್ರನೇ ಸಾಕ್ಷಿ.. ತಂದೆಯ ಪಿಹೆಚ್ಡಿ ಪದವಿ ಸ್ವೀಕರಿಸಿದ 14ರ ಮಗ..