ಉಳ್ಳಾಲ(ಮಂಗಳೂರು): ಸ್ಕೂಟರ್ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಿರುವ ಘಟನೆ ನಗರದ ಬಗಂಬಿಲದ ಬಳಿ ನಡೆದಿದೆ.
ಬಂಧಿತರಿಂದ 220 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೇರಳ ರಾಜ್ಯದ ತ್ರಿಶ್ಶೂರ್ನ ಆದರ್ಶ್ ಜ್ಯೋತಿ( 22), ಕೇರಳ ರಾಜ್ಯದ ಕೊಟ್ಟಾಯಂನ ಯೋಯಾಲ್ ಜಾಯ್ಸ್ (22) ಬಂಧಿತರು. ಇವರಿಬ್ಬರೂ ನಗರದ ಖಾಸಗಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಇದನ್ನೂ ಓದಿರಿ: ಬೆಂಗಳೂರು: ಕಾರಿನ ಗಾಜು ಒಡೆದು 10 ಲಕ್ಷ ರೂ. ದೋಚಿದ ಖದೀಮರು
ಆದರ್ಶ ಜ್ಯೋತಿ ನಾಲ್ಕನೇ ವರ್ಷದ ಬಿಡಿಎಸ್ ವಿದ್ಯಾರ್ಥಿಯಾಗಿದ್ದರೆ, ಯೋಯಲ್ ಜಾಯ್ಸ್ ನಾಲ್ಕನೇ ವರ್ಷದ ನರ್ಸಿಂಗ್ ವಿದ್ಯಾರ್ಥಿಯಾಗಿದ್ದಾನೆ. ಇಬ್ಬರು ಸ್ಕೂಟರ್ನಲ್ಲಿ 220 ಗ್ರಾಂ ಗಾಂಜಾವನ್ನು ಸಾಗಿಸುತ್ತಿದ್ದ ವೇಳೆ ಬಗಂಬಿಲದ ಬಳಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ತಕ್ಷಣವೇ ಪೊಲೀಸರು ಇಬ್ಬರನ್ನೂ ಬಂಧಿಸಿ, ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.