ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮಹಾರಾಷ್ಟ್ರ ಮತ್ತು ಕೇರಳದಿಂದ ಬಂದ ಆರು ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಆರು ಜನರಲ್ಲಿ ನಾಲ್ವರು ಪುರುಷರಾಗಿದ್ದು, ಇಬ್ಬರು ಮಹಿಳೆಯರಾಗಿದ್ದಾರೆ. 61 ವರ್ಷದ ಪುರುಷ ಮೇ 17ರಂದು ಮುಂಬೈನಿಂದ ಮಂಗಳೂರಿಗೆ ಆಗಮಿಸಿದ್ದರು. 62 ವರ್ಷದ ಮಹಿಳೆ ಮೇ 17ರಂದು ಕೇರಳದಿಂದ ಆಗಮಿಸಿದ್ದರು. 50 ವರ್ಷದ ಪುರುಷ ಮೇ 14ರಂದು ಮುಂಬೈನಿಂದ ಆಗಮಿಸಿದ್ದರು. 23 ವರ್ಷದ ಯುವಕ ಮೇ 18ರಂದು ಮುಂಬೈನಿಂದ ಆಗಮಿಸಿದ್ದ. 36 ವರ್ಷದ ಪುರುಷ ಮೇ 22ರಂದು ಮುಂಬೈನಿಂದ ಆಗಮಿಸಿದ್ದ. 18 ವರ್ಷದ ಯುವತಿ ಮೇ 18ರಂದು ಮುಂಬೈನಿಂದ ಆಗಮಿಸಿದ್ದರು. ಇವರೆಲ್ಲರೂ ಕ್ವಾರಂಟೈನ್ನಲ್ಲಿದ್ದು, ಇಂದು ಇವರಿಗೆ ಕೊರೊನಾ ದೃಢಪಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ. ಇದರಲ್ಲಿ ಒಂದು ಆತ್ಮಹತ್ಯೆ ಸೇರಿದಂತೆ ಏಳು ಮಂದಿ ಸಾವನ್ನಪ್ಪಿದ್ದು, 29 ಮಂದಿ ಗುಣಮುಖರಾಗಿದ್ದಾರೆ. 51 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.