ETV Bharat / city

ದ.ಕ ಜಿಲ್ಲೆಯಲ್ಲಿ ಇಂದು ಐವರಿಗೆ ಕೊರೊನಾ, ಓರ್ವ ಸೋಂಕಿತ ಸಾವು - 122 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ

ಈ ಮೂಲಕ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 267ಕ್ಕೇರಿದೆ. ಇವರಲ್ಲಿ 8 ಮಂದಿ ಮೃತಪಟ್ಟಿದ್ದು, 153 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 122 ಮಂದಿ ವೆನ್ಲಾಕ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

today-five-new-corona-case-dhakshina-kannada-and-one-death
ದ.ಕ.ಜಿಲ್ಲೆಯಲ್ಲಿ ಇಂದು ಐವರಿಗೆ ಕೊರೊನಾ, ಓರ್ವ ಸೋಂಕಿತ ಸಾವು
author img

By

Published : Jun 14, 2020, 8:28 PM IST

ಮಂಗಳೂರು: ದ.ಕ ಜಿಲ್ಲೆಯಲ್ಲಿ ಇಂದು ಐವರಲ್ಲಿ ಸೋಂಕು ದೃಢಪಟ್ಟಿದೆ. ಇವರಲ್ಲಿ ಮಹಾರಾಷ್ಟ್ರದಿಂದ ಬಂದು ಹೋಮ್ ಕ್ವಾರಂಟೈನ್‌ನಲ್ಲಿದ್ದ 26 ವರ್ಷದ ಯುವಕ ಮೃತಪಟ್ಟಿದ್ದಾನೆ.

ಜೂನ್‌ 10ರಂದು ಸೌದಿ ಅರೇಬಿಯಾದಿಂದ ಬಂದು ಕ್ವಾರೆಂಟೈನ್‌ನಲ್ಲಿದ್ದ 24, 26 ವರ್ಷದ ಯುವತಿಯರು ಹಾಗೂ‌ 60 ವರ್ಷದ ವೃದ್ಧನಿಗೂ ಸೋಂಕು ತಗುಲಿದೆ. ಅಲ್ಲದೆ ರೋಗಿ ಸಂಖ್ಯೆ ಪಿ-4526ರ ಸಂಪರ್ಕ ಹೊಂದಿರುವ 12 ವರ್ಷದ ಬಾಲಕನನ್ನು ಕ್ವಾರೆಂಟೈನ್‌ನಲ್ಲಿರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಇಂದು ಸ್ವೀಕೃತವಾಗಿದೆ. ಇವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ನಾಲ್ವರನ್ನೂ ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಈ ಮೂಲಕ‌ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 267ಕ್ಕೇರಿದೆ. ಇವರಲ್ಲಿ 8 ಮಂದಿ ಮೃತಪಟ್ಟಿದ್ದು, 153 ಮಂದಿ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 122 ಮಂದಿ ವೆನ್ಲಾಕ್ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ: ಕೊರೊನಾಗೆ ದ.ಕ.ಜಿಲ್ಲೆಯ 26 ವರ್ಷದ ಯುವಕನ ಬಲಿ: ಮೃತರ ಸಂಖ್ಯೆ ಎಂಟಕ್ಕೆ ಏರಿಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.