ETV Bharat / city

ಯಾವುದೇ ಕಾರಣಕ್ಕು ಟಿಪ್ಪು ಜಯಂತಿ ಆಚರಿಸುವ ಮಾತೇ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್ - DCM Ashwattha Narayan

ಟಿಪ್ಪು ಜಯಂತಿಯ ಬಗ್ಗೆ ಯಾವುದೇ ವಿವಾದವಿಲ್ಲ‌ ನಾವು ಸ್ಪಷ್ಟವಾಗಿದ್ದು, ಟಿಪ್ಪುವಿನಂತಹ ಮತಾಂಧ ವ್ಯಕ್ತಿಯ ಜಯಂತಿಯನ್ನು ಯಾವುದೇ ಕಾರಣಕ್ಕೂ ಆಚರಿಸೋದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಸ್ಪಷ್ಟಪಡಿಸಿದ್ದಾರೆ.

ಯಾವುದೇ ಕಾರಣಕ್ಕು ಟಿಪ್ಪು ಜಯಂತಿ ಆಚರಿಸುವ ಮಾತೇ ಇಲ್ಲ: ಡಿಸಿಎಂ ಅಶ್ವತ್ಥ ನಾರಾಯಣ್
author img

By

Published : Oct 31, 2019, 11:47 PM IST

ಮಂಗಳೂರು: ಟಿಪ್ಪು ಜಯಂತಿಯ ಬಗ್ಗೆ ಯಾವುದೇ ವಿವಾದವಿಲ್ಲ‌. ಈ ವಿಷಯದಲ್ಲಿ ನಮ್ಮ ನಿಲುವು ಅಚಲವಾಗಿದ್ದು, ಟಿಪ್ಪುವಿನಂತಹ ಮತಾಂಧ ವ್ಯಕ್ತಿಯ ಜಯಂತಿಯನ್ನು ನಾವು ಯಾವುದೇ ಕಾರಣಕ್ಕೂ ಆಚರಿಸುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಹೇಳಿದ್ದಾರೆ.

ಯಾವುದೇ ಕಾರಣಕ್ಕು ಟಿಪ್ಪು ಜಯಂತಿ ಆಚರಿಸುವ ಮಾತೇ ಇಲ್ಲ: ಡಿಸಿಎಂ

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿಯ ಮೂಲಕ ಮತ ಬ್ಯಾಂಕ್ ನಡೆಸುತ್ತಿದೆ. ಅಲ್ಲದೆ ಸಮಾಜ ಒಡೆಯುವ ಕೆಲಸ ಮಾಡುತ್ತಿದೆ. ಇಂತಹ ಜಯಂತಿಯ ಮೂಲಕ ಸಮಾಜದಲ್ಲಿನ ಸಾಮರಸ್ಯ, ಸೌಹಾರ್ದತೆಯನ್ನು ಹಾಳು ಮಾಡಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಐಡಿಯಲ್ ಐಸ್ ಕ್ರೀಂ ಬಗ್ಗೆ ಮಾತನಾಡಿದ ಅವರು, ನಾನು 1988-94ರವರೆಗೆ ಮೆಡಿಕಲ್ ವಿದ್ಯಾರ್ಥಿಯಾಗಿ ಮಂಗಳೂರು ಕೆಎಂಸಿಯಲ್ಲಿ ಅಧ್ಯಯನ ಮಾಡುತ್ತಿರುವಾಗ ಸಾಕಷ್ಟು ಬಾರಿ ಐಡಿಯಲ್ ಗೆ ಬಂದು ಐಸ್ ಕ್ರೀಂ ಸವಿಯುತ್ತಿದ್ದೆ. ಫ್ಯಾರಾಫಿಟ್, ದಿಲ್ ಕುಶ್, ಗಡಬಡ್ ಐಸ್ ಕ್ರೀಂ ಗಳನ್ನು ಸವಿಯಲೆಂದೇ ಇಲ್ಲಿಗೆ ಬರುತ್ತಿದ್ದೆ. ಈ ಆಕರ್ಷಣೆ ಇಂದಿಗೂ ಹೋಗಿಲ್ಲ. ಹಾಗಾಗಿ ಮಂಗಳೂರಿಗೆ ಬಂದಾಗಲೆಲ್ಲಾ ಐಡಿಯಲ್ ಐಸ್ ಕ್ರೀಂ ಪಾರ್ಲರ್ ನೆನಪಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಈ ಸಂಸ್ಥೆಯ ಮಾಲೀಕರೊಂದಿಗೆ ಉತ್ತಮ ಸಂಬಂಧವಿದೆ. ಹಾಗಾಗಿ ಮಂಗಳೂರಿಗೆ ಬಂದಾಗ ಐಡಿಯಲ್ ಗೆ ಬಂದು ಹೋಗೋದು ವಾಡಿಕೆಯಾಗಿದೆ ಎಂದು ಹೇಳಿದರು.

Intro:ಮಂಗಳೂರು: ನಗರ ಕಡಲು, ಮೀನುಗಳಿಗೆ ಹೇಗೆ ಪ್ರಸಿದ್ಧವೋ‌ ಐಡಿಯಲ್ ಐಸ್ ಕ್ರೀಂಗೂ ಅಷ್ಟೇ ಪ್ರಸಿದ್ಧ. ಇಂದು ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ಬಂದಿದ್ದ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಐಡಿಯಲ್ ಐಸ್ ಕ್ರೀಂ ಸವಿದು ಫುಲ್ ಖುಷ್ ಆದರು‌‌.

ಹೊರಗಡೆ ಮಳೆ ಬಂದು ವಾತಾವರಣ ಪೂರ್ತಿ ಕೂಲ್, ಒಳಗಡೆ ಎಸಿಯೂ ಫುಲ್ ಕೂಲ್ ಆಗಿತ್ತು. ಈ ತಣ್ಣಗಿನ ವಾತಾವರಣದಲ್ಲಿ ಕುಳಿತು ಅಶ್ವತ್ಥ ನಾರಾಯಣ್ ಐಡಿಯಲ್ ಐಸ್ ಕ್ರೀಂ ಸವಿದು ಫುಲ್ ಫಿದಾ ಆದರು.

Body:ಈ ಸಂದರ್ಭ ಐಡಿಯಲ್ ಐಸ್ ಕ್ರೀಂ ಬಗ್ಗೆ ಮಾತನಾಡಿದ ಅವರು, ನಾನು 1988-94ರವರೆಗೆ ಮೆಡಿಕಲ್ ವಿದ್ಯಾರ್ಥಿಯಾಗಿ ಮಂಗಳೂರು ಕೆಎಂಸಿಯಲ್ಲಿ ಅಧ್ಯಯನ ಮಾಡುತ್ತಿರುವಾಗ ಸಾಕಷ್ಟು ಬಾರಿ ಐಡಿಯಲ್ ಗೆ ಬಂದು ಐಸ್ ಕ್ರೀಂ ಸವಿಯುತ್ತಿದೆ. ಫ್ಯಾರಾಫಿಟ್, ದಿಲ್ ಕುಶ್, ಗಡಬಡ್ ಐಸ್ ಕ್ರೀಂ ಗಳನ್ನು ಸವಿಯಲೆಂದೇ ಇಲ್ಲಿಗೆ ಬರುತ್ತಿದೆ. ಈ ಆಕರ್ಷಣೆ ಇಂದಿಗೂ ಹೋಗಿಲ್ಲ. ಹಾಗಾಗಿ ಮಂಗಳೂರಿಗೆ ಬಂದಾಗಲೆಲ್ಲಾ ಐಡಿಯಲ್ ಐಸ್ ಕ್ರೀಂ ಪಾರ್ಲಾರ್ ನೆನಪಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಈ ಸಂಸ್ಥೆಯ ಮಾಲಕರೊಂದಿಗೆ ನನಗೆ ಉತ್ತಮ ಸಂಬಂಧವಿದೆ. ನಮ್ಮ ಹಾಸ್ಟೆಲ್ ನಲ್ಲಿ ಬೇರೆ ಐಸ್ ಕ್ರೀಂ ದೊರಕುತ್ತಿತ್ತು. ನಾನು ಐಡಿಯಲ್ ಐಸ್ ಕ್ರೀಮನ್ನೇ ಕೊಡಬೇಕೆಂದು ಒತ್ತಾಯ ಮಾಡಿದ ಬಳಿಕ ಇದೇ ಐಸ್ ಕ್ರೀಂ ಅನ್ನು ಕೊಡಲು ಆರಂಭಿಸಿದರು. ಹಾಗಾಗಿ ಮಂಗಳೂರಿಗೆ ಬಂದಾಗ ಐಡಿಯಲ್ ಗೆ ಬಂದು ಹೋಗೋದು ವಾಡಿಕೆಯಾಗಿದೆ ಎಂದು ಹೇಳಿದರು.

ಈ ಸಂದರ್ಭ ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಉಪಸ್ಥಿತರಿದ್ದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.