ETV Bharat / city

ಪಿಲಿಕುಳದಲ್ಲಿ ಗೂಡಿನಿಂದ ಹೊರ ಬಂದಿತ್ತು ಸಿಂಹ: ತಡವಾಗಿ ಬೆಳಕಿಗೆ ಬಂದ ಘಟನೆ - ಸಿಂಹ ಲೇಟೆಸ್ಟ್ ನ್ಯೂಸ್

ಜುಲೈ ತಿಂಗಳಲ್ಲಿ ಒಂದು ದಿನ ಸಿಂಹದ ಗೂಡು ಶುಚಿಗೊಳಿಸಲು ನೌಕರರೊಬ್ಬರು ಹೋಗಿದ್ದಾರೆ. ಒಂದು ಗೇಟ್ ದಾಟಿಕೊಂಡು ಹೋಗಿ ಗೂಡು ಶುಚಿಗೊಳಿಸುತ್ತಿದ್ದರು. ಆದರೆ ಇನ್ನೊಂದು ಗೇಟ್‌ನ ಚಿಲಕ ಹಾಕಿರಲಿಲ್ಲ. ಪರಿಣಾಮ, ಸಿಂಹ ಗೂಡಿನ ಬಳಿ ಕಂದಕ ಇರದಿರುವುದರಿಂದ ಹಠಾತ್ ಆಗಿ ಹೊರಬಂದಿದೆ. ನೌಕರ ಈ ವಿಚಾರವನ್ನು ತಕ್ಷಣ ಮೇಲಧಿಕಾರಿಗಳಿಗೆ ತಿಳಿಸಿದ್ದರು.

Pilikula zoo
ಪಿಲಿಕುಳ ನಿಸರ್ಗಧಾಮ
author img

By

Published : Oct 3, 2021, 12:35 PM IST

Updated : Oct 3, 2021, 12:41 PM IST

ಮಂಗಳೂರು: ನಗರದ ಪಿಲಿಕುಳ ನಿಸರ್ಗಧಾಮದಲ್ಲಿ ಹೆಣ್ಣು ಸಿಂಹವೊಂದು ಗೂಡಿನಿಂದ ಹೊರ ಬಂದು ಕೆಲಹೊತ್ತು ಭೀತಿ ಸೃಷ್ಟಿಸಿದ್ದ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆ ಜುಲೈನಲ್ಲಿ ನಡೆದಿದ್ದು, ಈಗ ವರದಿಯಾಗಿದೆ.

ಪಿಲಿಕುಳ ನಿಸರ್ಗಧಾಮದಲ್ಲಿ ಪ್ರಾಣಿಗಳಿಗೆ ವಿಹರಿಸುವುದಕ್ಕೆ ಬೇಕಾದ ವಿಶಾಲ ಆವರಣ ಹೊಂದಿರುವ ಎನ್​ಕ್ಲೋಶರ್ ಇದೆ. ಇದರ ಮುಂಭಾಗ ಕಂದಕ ಇದೆ. ಜೊತೆಗೆ, ಎತ್ತರವಾಗಿ ಬೇಲಿ ಇರುವುದರಿಂದ ಯಾವುದೇ ಮೃಗಗಳು ಸಾಮಾನ್ಯವಾಗಿ ಹೊರಗೆ ಬರಲು ಸಾಧ್ಯವಿಲ್ಲ. ವೀಕ್ಷಕರು ಹೊರಗೆಯೇ ನಿಂತು ಸುರಕ್ಷಿತವಾಗಿ ಪ್ರಾಣಿಗಳನ್ನು ವೀಕ್ಷಿಸಬಹುದು. ಈ ಎನ್‌ಕ್ಲೋಶರ್‌ಗಳ ಕೊನೆ ತುದಿಯಲ್ಲಿ ಮೃಗಗಳಿಗೆ ಮಲಗುವುದಕ್ಕೆ ಗೂಡುಗಳಿರುತ್ತವೆ. ಅವುಗಳಿಗೆ ಆಹಾರ ಒದಗಿಸುವ, ಚಿಕಿತ್ಸೆ ನೀಡುವ ವ್ಯವಸ್ಥೆ ಎಲ್ಲವೂ ಅಲ್ಲಿಯೇ ಇರುವುದು.

ಜುಲೈ ತಿಂಗಳಲ್ಲಿ ಒಂದು ದಿನ ಸಿಂಹದ ಗೂಡು ಶುಚಿಗೊಳಿಸಲು ನೌಕರರೊಬ್ಬರು ಹೋಗಿದ್ದಾರೆ. ಒಂದು ಗೇಟ್ ದಾಟಿಕೊಂಡು ಹೋಗಿ ಗೂಡು ಶುಚಿಗೊಳಿಸುತ್ತಿದ್ದರು. ಆದರೆ ಇನ್ನೊಂದು ಗೇಟ್‌ನ ಚಿಲಕ ಹಾಕಿರಲಿಲ್ಲ. ಪರಿಣಾಮ, ಸಿಂಹ ಗೂಡಿನ ಬಳಿ ಕಂದಕ ಇರದಿರುವುದರಿಂದ ಹಠಾತ್ ಆಗಿ ಹೊರಬಂದಿದೆ. ನೌಕರ ಈ ವಿಚಾರವನ್ನು ತಕ್ಷಣ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ.

ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಸಿಂಹ ಪತ್ತೆ:

ತಕ್ಷಣ ಪಿಲಿಕುಳ ನಿಸರ್ಗಧಾಮದ ನಿರ್ದೇಶಕ ಹೆಚ್.ಜಯಪ್ರಕಾಶ್ ಭಂಡಾರಿ ಮೂರು ತಂಡ ರಚನೆ ಮಾಡಿ ಇಡೀ ಪಿಲಿಕುಳ ನಿಸರ್ಗಧಾಮದ ಆವರಣದೊಳಗೆ ಹುಡುಕಾಡಿದ್ದಾರೆ. ಈ ಸಂದರ್ಭ ಇತರೆ ಸಿಬ್ಬಂದಿಯನ್ನು ಸುರಕ್ಷಿತ ಜಾಗದಲ್ಲಿರುವಂತೆ ಸೂಚಿಸಿದ್ದಾರೆ. ಸುಮಾರು ಮೂರು ಗಂಟೆಗಳ ಕಾಲ ಹುಡುಕಾಡಿದ ಬಳಿಕ ಸಿಂಹವು, ತನ್ನ ಗೂಡಿನ ಹಿಂಭಾಗದ ಪ್ಯಾಡಕ್ (ಬೇಲಿ ಹಾಕಿದ ಆವರಣ)ನಲ್ಲಿ ಹುಲ್ಲಿನ ಮರೆಯಲ್ಲಿ ಪತ್ತೆಯಾಗಿದೆ. ತಕ್ಷಣ ಅದನ್ನು ಟ್ರಾಂಕ್ವಿಲೈಜ್ (ಅರವಳಿಕೆ ನೀಡುವುದು) ಮಾಡಿ ಮತ್ತೆ ಗೂಡಿಗೆ ಸೇರಿಸಲಾಯಿತು.

ಇದನ್ನೂ ಓದಿ: ಹಾನಗಲ್ ಉಪಚುನಾವಣೆ: ಉದಾಸಿ ಕುಟುಂಬಸ್ಥರಿಗೆ ಒಲಿಯುತ್ತಾ ಬಿಜೆಪಿ ಟಿಕೆಟ್?

ಪಿಲಿಕುಳ ವನ್ಯಜೀವಿ ಧಾಮದ ನಿರ್ದೇಶಕ ಜಯಪ್ರಕಾಶ್ ಭಂಡಾರಿ‌ ಮಾತನಾಡಿ, ತಕ್ಷಣ ಕಾರ್ಯಾಚರಣೆ ಮಾಡಿದ ಪರಿಣಾಮ ಅದೃಷ್ಟವಶಾತ್ ಯಾವುದೇ ತೊಂದರೆಯಾಗಿಲ್ಲ. ಸಿಂಹ ಯಾವುದೇ ಕಾರಣಕ್ಕೂ ಹೊರಬರಲು ಸಾಧ್ಯವಿಲ್ಲ. ಪ್ಯಾಡಕ್‌ನ ಆವರಣದಲ್ಲೇ ಇರುತ್ತದೆ. ಆದರೂ ಸಿಂಹ ಅಲ್ಲಿ ಇರದಿರುವುದನ್ನು ಆತಂಕಗೊಂಡು ಹೊರಗೆ ಹೋಗಿರಬಹುದೆಂಬ ಶಂಕೆಯಿಂದ ತಂಡ ರಚಿಸಿ ಹುಡುಕಾಡಿದೆವು. ಆದರೆ ಸಿಂಹ ಪ್ಯಾಡಕ್‌ನಲ್ಲಿ ಇತ್ತು. ಆ ಬಳಿಕ ಅದನ್ನು ಹಿಡಿದು ಒಳಗೆ ಹಾಕಲಾಗಿದೆ. ಇಂತಹ ವಿದ್ಯಮಾನಗಳು ಮೃಗಾಲಯಗಳಲ್ಲಿ ಆಗಾಗ ನಡೆಯುತ್ತಲೇ ಇರುತ್ತವೆ‌. ಇಂತಹ ಘಟನೆಗಳು ನಮಗೂ ಒಂದು ಪಾಠದಂತೆ ಎಚ್ಚರಿಕೆಯಿಂದ ಇರಲು‌ ಮುನ್ಸೂಚನೆ ನೀಡಿದಂತೆ ಆಗುತ್ತದೆ ಎಂದರು.

Last Updated : Oct 3, 2021, 12:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.