ETV Bharat / city

ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಕಾಂಗ್ರೆಸ್ ಪಕ್ಷವೇ ಕಾರಣ: ವೇದವ್ಯಾಸ ಕಾಮತ್ - Congress party increase in water prices

ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ಮಾಡುತ್ತಿರುವ ಸಂದರ್ಭ ನೀರಿನ ದರ ಏರಿಕೆಯಾಗಿದ್ದು ನೂರಕ್ಕೆ ನೂರು ಸತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

Vedavyasa Kamath
author img

By

Published : Nov 4, 2019, 10:16 PM IST

ಮಂಗಳೂರು: ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಆಡಳಿತ ಮಾಡುತ್ತಿರುವ ಸಂದರ್ಭ ನೀರಿನ ದರ ಏರಿಕೆಯಾಗಿದ್ದು ನೂರಕ್ಕೆ ನೂರು ಸತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ವೇದವ್ಯಾಸ ಕಾಮತ್ ಸುದ್ದಿಗೋಷ್ಟಿ

ನಗರದ ಕೊಡಿಯಾಲ್ ಬೈಲ್​ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ನೀರಿನ ದರ ಏರಿಕೆ ಮಾಡಿದೆ ಎಂದು ಗೂಬೆ ಕೂರಿಸುತ್ತಿದ್ದಾರೆ ಎಂದರು.

ಕಳೆದ ಜೂನ್ 15 ರಂದು ನೀರಿನ ದರ ಪರಿಷ್ಕರಣೆ ಮಾಡಲು ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿತ್ತು. ಅಂದು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾಂಗ್ರೆಸ್​ನ ಯು.ಟಿ ಖಾದರ್ ಅವರಿದ್ದರು. ಇಂದು ನೀರಿನ ದರ ಏರಿಕೆಯನ್ನು ಎಪ್ರಿಲ್ 1ರಿಂದಲೇ ಜಾರಿ ಮಾಡಿದ್ದು, ಇವರ ಆದೇಶದಲ್ಲಿ ನೀರಿನ ಬಿಲ್ ಅನ್ನು ಏಕಾಏಕಿ ಏರಿಕೆ ಮಾಡಿದ್ದಾರೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲದೆ 24 ಸಾವಿರ ಲೀಟರ್ ಗೃಹ ಬಳಕೆಯ ನೀರನ್ನು 8 ಸಾವಿರ ಲೀಟರ್​ಗೆ ಇಳಿಸಿದ್ದು ಖಂಡನೀಯ. ಇನ್ನು ಮಾಜಿ ಶಾಸಕರ ಮೇಲೆ ನಡೆದ ಹಲ್ಲೆಯನ್ನು ನೂರಕ್ಕೆ ನೂರು ಪ್ರತಿ ಶತ ನಾನು ಖಂಡಿಸುತ್ತೇನೆ ಎಂದು ವೇದವ್ಯಾಸ ಕಾಮತ್ ಹೇಳಿದರು‌.

Intro:ಮಂಗಳೂರು: ಮಹಾನಗರ ಪಾಲಿಕೆಯ ನೀರಿನ ದರ ಏರಿಕೆಗೆ ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಆಡಳಿತ ಮಾಡುತ್ತಿರುವ ಸಂದರ್ಭ ನೀರಿನ ದರ ಏರಿಕೆ ಯಾಗಿದ್ದು ನೂರಕ್ಕೆ ನೂರು ಸತ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬಿಜೆಪಿ ಸರಕಾರ ನೀರಿನ ದರ ಏರಿಕೆ ಮಾಡಿದೆ ಎಂದು ಗೂಬೆ ಕೂರಿಸುತ್ತಿದೆ ಎಂದು ಹೇಳಿದರು.

ಕಳೆದ ಜೂನ್ 15ರಂದು ನೀರಿನ ದರ ಪರಿಷ್ಕರಣೆ ಮಾಡಲು ಅನುಮೋದನೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರಕಾರ ಆಡಳಿತದಲ್ಲಿತ್ತು. ಅಂದು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಕಾಂಗ್ರೆಸ್ ನ ಯು.ಟಿ.ಖಾದರ್ ಅವರಿದ್ದರು. ಇಂದು ನೀರಿನ ದರ ಏರಿಕೆಯನ್ನು ಎಪ್ರಿಲ್ 1ರಿಂದಲೇ ಜಾರಿ ಮಾಡಿದ್ದು, ಇವರ ಆದೇಶದಲ್ಲಿ ನೀರಿನ ಬಿಲ್ ಅನ್ನು ಏಕಾಏಕಿ ಏರಿಕೆ ಮಾಡಿದ್ದಾರೆ. ಇದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲದೆ 24 ಸಾವಿರ ಲೀಟರ್ ಗೃಹಬಳಕೆಯ ನೀರನ್ನು 8 ಸಾವಿರ ಲೀಟರ್ ಗೆ ಇಳಿಸಿದ್ದು ಖಂಡನೀಯ ಎಂದು ವೇದವ್ಯಾಸ ಕಾಮತ್ ಹೇಳಿದರು‌.

Body:ಕಾಂಗ್ರೆಸ್ ಮಾಜಿ ಶಾಸಕರಿಗೆ ಹಲ್ಲೆ ನಡೆಸಿದ ಆರೋಪಿಗಳ ಪರವಾಗಿ ಮಾತನಾಡಿ ಕೇಸ್ ವಾಪಾಸ್ ತೆಗೆಯಲು ನೀವು ಒತ್ತಡ ಹೇರಿದ್ದೀರೆಂದು ಮೊಯ್ದಿನ್ ಬಾವಾ ಹೇಳಿದ್ದಾರೆ ಎಂಬ ಪ್ರಶ್ನೆ ಗೆ ಶಾಸಕ ವೇದವ್ಯಾಸ ಕಾಮತ್ ಪ್ರತಿಕ್ರಿಯಿಸಿ, ಮಾಜಿ ಶಾಸಕರ ಮೇಲೆ ನಡೆದ ಈ ಹಲ್ಲೆಯನ್ನು ನೂರಕ್ಕೆ ನೂರು ಪ್ರತಿಶತ ನಾನು ಖಂಡಿಸುತ್ತೇನೆ. ಹಲ್ಲೆ ನಡೆಸಿದ ಆರೋಪಿಗಳು ನನ್ನಲ್ಲಿ ಬಂದು ತಾವು ಕ್ಷಮೆ ಯಾಚನೆ ನಡೆಸುತ್ತೇವೆ. ಒಂದು ಸಲ ನೀವು ಮೊಯ್ದಿನ್ ಬಾವಾ ರಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ನಾನು ಶಾಸಕ ನಾಗಿ ಅವರಲ್ಲಿ ಈ ಬಗ್ಗೆ ಮಾತನಾಡಿದ್ದೇನೆಯೇ ಹೊರತು, ನಾನಾಗಿ ಕೇಸ್ ವಾಪಸ್ ಪಡೆಯಿರಿ ಎಂದು ಎಲ್ಲೂ ಹೇಳಿಲ್ಲ. ನಾಳೆ ನನಗೂ ಇದೇ ರೀತಿಯ ಘಟನೆ ಸಂಭವಿಸಿದಲ್ಲಿ ನನಗೂ ಬೇಸರ ಆಗಬಹುದು. ಆದರೆ ರಾಜ್ಯ, ರಾಷ್ಟ್ರಮಟ್ಟದ ರಾಜಕೀಯದಲ್ಲಿ ಇಂತಹ ಎಷ್ಟೋ ಘಟನೆಗಳು ನಡೆದಿವೆ‌. ನಾನು ಮೊಯ್ದಿನ್ ಬಾವರಲ್ಲಿ ಈ ರೀತಿಯ ವ್ಯಕ್ತಿಗಳು ನನ್ನಲ್ಲಿ ಬಂದಿದ್ದಾರೆ ಅವರು ತಮ್ಮಲ್ಲಿ ಕ್ಷಮೆ ಯಾಚನೆ ಮಾಡುತ್ತಾರೆಂದು ಹೇಳುತ್ತಿದ್ದಾರಂತೆ ಎಂದು ಹೇಳಿದ್ದೇನೆಯೇ ಹೊರತು ಯಾವುದೇ ರೀತಿಯಲ್ಲಿ ಕೇಸ್ ವಾಪಸ್ ಮಾಡಿ ಎಂದು ಒತ್ತಡ ಹೇರಿಲ್ಲ ಎಂದು ಸ್ಪಷ್ಟನೆ ನೀಡಿದರು.

Reporter_Vishwanath Panjimogaru

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.