ETV Bharat / city

ದೇಶದಲ್ಲಿ ಇಂದು ತೆರಿಗೆ ಭಯೋತ್ಪಾದನೆ ನಡೆಯುತ್ತಿದೆ: ಐವನ್ ಡಿಸೋಜ ಆತಂಕ - Mangalore news

ಐಟಿ ಮತ್ತು ಇಡಿ ಡಿಪಾರ್ಟ್​ಮೆಂಟ್​ನವರು ತಮ್ಮ ಮೇಲೆ ಸವಾರಿ ಮಾಡಿದ್ದೇ ತಾನು ಆತ್ಮಹತ್ಯೆ ಮಾಡಲು ಕಾರಣ ಎಂದು ಸಿದ್ಧಾರ್ಥ್ ಅವರೇ ಪತ್ರ ಬರೆದಿದ್ದಾರೆ. ತೆರಿಗೆ ಸಂಗ್ರಹ ಮಾಡುವುದೊಂದೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಸರಕಾರದ ಉದ್ದೇಶ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆತಂಕ ವ್ಯಕ್ತಪಡಿಸಿದರು.

ಐವನ್ ಡಿಸೋಜ
author img

By

Published : Aug 3, 2019, 7:57 PM IST

ಮಂಗಳೂರು: ಇಂದು ದೇಶದಲ್ಲಿ ತೆರಿಗೆಯ ಮೇಲೆ ಭಯೋತ್ಪಾದನೆ ನಡೆಯುತ್ತಿದೆ. ಅದೇ ಕಾರಣಕ್ಕಾಗಿ ಕೆಫೆ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡರು. 50 ಸಾವಿರ ಮಂದಿಗೆ ಉದ್ಯೋಗ ನೀಡಿದವರು, 30 ಸಾವಿರ ಕೋಟಿ ರೂ. ಆಸ್ತಿ ಹೊಂದಿದವರು ಆತ್ಮಹತ್ಯೆ ಮಾಡಲು ಈ ಒತ್ತಡಗಳೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದ್ರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಐಟಿ ಮತ್ತು ಇಡಿ ಡಿಪಾರ್ಟ್​ಮೆಂಟ್​ ಅಧಿಕಾರಿಗಳು ತಮ್ಮ ಮೇಲೆ ಸವಾರಿ ಮಾಡಿದ್ದೇ ತಾನು ಆತ್ಮಹತ್ಯೆ ಮಾಡಲು ಕಾರಣ ಎಂದು ಸಿದ್ಧಾರ್ಥ್ ಪತ್ರ ಬರೆದಿದ್ದಾರೆ. ತೆರಿಗೆ ಸಂಗ್ರಹ ಮಾಡುವುದೊಂದೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಸರಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಐವನ್ ಡಿಸೋಜ ಮಾತು

ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ದೇಶದಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ. ಭಾರತದ ಆರ್ಥಿಕ ಮಟ್ಟದಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ.‌ ಅಮೆರಿಕಾ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿದೆ. ಕರೆನ್ಸಿಯಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಈ ರೀತಿಯ ಆರ್ಥಿಕ ಕುಸಿತ ಉಂಟಾಗಿದೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ಹೇಳಿದೆ. ಐಬಿಎಂ ಕಂಪೆನಿಯಿಂದ ಒಂದು ಲಕ್ಷ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ. ರೈಲ್ವೇನಲ್ಲಿ ಮೂರು ಲಕ್ಷ ಮಂದಿ ಹಾಗೂ ಬಿಎಸ್​ಎನ್​ಎಲ್​ನಿಂದ 54 ಸಾವಿರ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ. ಅಲ್ಲದೆ ಬಿಎಸ್​ಎನ್​ಎಲ್​ನಲ್ಲಿ 2 ಲಕ್ಷ ಮಂದಿಗೆ ಸಂಬಳವೇ ಆಗಿಲ್ಲ. ಆಟೊ ಮೊಬೈಲ್ ನಲ್ಲಿ 18% ವ್ಯಾಪಾರ ಕುಸಿತಗೊಂಡಿದೆ ಎಂದರು‌.

ಹೊಸ ಅಭಿವೃದ್ಧಿಗಳಿಲ್ಲ. ಕಂಪನಿಗಳಲ್ಲಿ ಉದ್ಯೋಗ ಸೃಷ್ಟಿ ಇಲ್ಲವೇ ಇಲ್ಲ. ಉತ್ಪಾದನೆ ಕುಸಿತಗೊಂಡಿದೆ. ಅಲ್ಲದೆ ಉತ್ಪಾದನೆಗೆ ಬೇಡಿಕೆಯಿಲ್ಲ. ಹಾಗಾಗಿ ಯುಪಿಎ ಸರಕಾರ ಇರುವಾಗ ಆರ್ಥಿಕತೆಯಲ್ಲಿ ಪ್ರಪಂಚದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತ, ಇಂದು‌ ಈಗ ಏಳನೇ ಸ್ಥಾನಕ್ಕೆ ಕುಸಿದಿದೆ. ಇದು ಬಹಳ ಆತಂಕದ ವಿಚಾರ ಎಂದು ಐವನ್ ಡಿಸೋಜ ಖೇದ ವ್ಯಕ್ತಪಡಿಸಿದರು.

Intro:ಮಂಗಳೂರು: ಇಂದು ದೇಶದಲ್ಲಿ ತೆರಿಗೆಯ ಮೇಲೆ ಭಯೋತ್ಪಾದನೆ ನಡೆಯುತ್ತಿದೆ. ಅದೇ ಕಾರಣಕ್ಕಾಗಿ ಕೆಫೆ ಕಾಫಿ ಡೇ ಮಾಲಕ ಸಿದ್ದಾರ್ಥ್ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡರು. 50 ಸಾವಿರ ಮಂದಿಗೆ ಉದ್ಯೋಗ ನೀಡಿದವರು, 30ಸಾವಿರ ಕೋಟಿ ರೂ. ಆಸ್ತಿ ಹೊಂದಿದವರು ಆತ್ಮಹತ್ಯೆ ಮಾಡಲು ಈ ಒತ್ತಡಗಳೇ ಕಾರಣ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಐಟಿ ಮತ್ತು ಇಡಿ ಡಿಪಾರ್ಟ್ ಮೆಂಟ್ ನವರು ತಮ್ಮ ಮೇಲೆ ಸವಾರಿ ಮಾಡಿದ್ದೇ ತಾನು ಆತ್ಮಹತ್ಯೆ ಮಾಡಲು ಕಾರಣ ಎಂದು ಸಿದ್ದಾರ್ಥ್ ಅವರೇ ಪತ್ರ ಬರೆದಿದ್ದಾರೆ. ತೆರಿಗೆ ಸಂಗ್ರಹ ಮಾಡುವುದೊಂದೇ ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಸರಕಾರದ ಉದ್ದೇಶವಾಗಿದೆ ಎಂದು ಅವರು ಹೇಳಿದರು.

Body:ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುವ ದೇಶದಲ್ಲಿ ಭಾರತಕ್ಕೆ ಮೊದಲ ಸ್ಥಾನವಿದೆ. ಭಾರತದ ಆರ್ಥಿಕ ಮಟ್ಟದಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ.‌ ಅಮೇರಿಕಾ ಪ್ರಪಂಚದಲ್ಲೇ ಮೊದಲ ಸ್ಥಾನದಲ್ಲಿದೆ. ಕರೆನ್ಸಿಯಲ್ಲಿ ವ್ಯತ್ಯಾಸವಾದ ಹಿನ್ನೆಲೆಯಲ್ಲಿ ಈ ರೀತಿಯ ಆರ್ಥಿಕ ಕುಸಿತ ಉಂಟಾಗಿದೆ ಎಂದು ವಿಶ್ವಬ್ಯಾಂಕ್ ವರದಿಯಲ್ಲಿ ಹೇಳಿದೆ. ಐಬಿಎಂ ಕಂಪೆನಿಯಿಂದ ಒಂದು ಲಕ್ಷ ಮಂದಿ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ. ರೈಲ್ವೇನಲ್ಲಿ ಮೂರು ಲಕ್ಷ ಮಂದಿ ಹಾಗೂ ಬಿಎಸ್ ಎನ್ ಎಲ್ ನಿಂದ 54 ಸಾವಿರ ಮಂದಿ ಉದ್ಯೋಗಿಗಳನ್ನು ತೆಗೆಯಲಾಗುತ್ತಿದೆ. ಅಲ್ಲದೆ ಬಿಎಸ್ ಎನ್ ಎಲ್ ನಲ್ಲಿ 2 ಲಕ್ಷ ಮಂದಿಗೆ ಸಂಬಳವೇ ಆಗಿಲ್ಲ. ಆಟೊ ಮೊಬೈಲ್ ನಲ್ಲಿ 18% ವ್ಯಾಪಾರ ಕುಸಿತಗೊಂಡಿದೆ‌. ಹೊಸ ಅಭಿವೃದ್ಧಿಗಳಿಲ್ಲ. ಕಂಪೆನಿಗಳಲ್ಲಿ ಉದ್ಯೋಗ ಸೃಷ್ಟಿ ಇಲ್ಲವೇ ಇಲ್ಲ. ಉತ್ಪಾದನೆ ಕುಸಿತಗೊಂಡಿದೆ. ಅಲ್ಲದೆ ಉತ್ಪಾದನೆಗೆ ಬೇಡಿಕೆಯಿಲ್ಲ. ಹಾಗಾಗಿ ಯುಪಿಎ ಸರಕಾರ ಇರುವಾಗ ಆರ್ಥಿಕತೆಯಲ್ಲಿ ಪ್ರಪಂಚದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಭಾರತ ಇಂದು‌ ಈಗ ಏಳಸ್ಥಾನಕ್ಕೆ ಕುಸಿದಿದೆ. ಇದು ಬಹಳ ಆತಂಕದ ವಿಚಾರ ಎಂದು ಐವನ್ ಡಿಸೋಜ ಖೇದ ವ್ಯಕ್ತಪಡಿಸಿದರು.

ಜಿಡಿಪಿ ಮೂರು ವರ್ಷಕ್ಕೆ 3 ಲಕ್ಷ ಕೋಟಿ ರೂ. ನಷ್ಟ ಅನುಭವಿಸುತ್ತಿದ್ದೇವೆ. ಷೇರ್ ಮಾರ್ಕೇಟ್ 12 ಲಕ್ಷ ಕೋಟಿ ರೂ.‌ ಕುಸಿತವಾಗಿದೆ. ಜಿಎಸ್ ಟಿ ಬಂದಮೇಲೆ ಈ ತೊಂದರೆಗಳಾಗಿವೆ ಎಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಜಿಎಸ್ ಟಿಯನ್ನು ಸರಿಯಾದ ಕ್ರಮದಲ್ಲಿ ಅನುಷ್ಠಾನ ಮಾಡಿಲ್ಲ. ಇದೊಂದು ಅವಸರದ ತೀರ್ಮಾನ. ಜಿ ಎಸ್ ಟಿ ಸಂಗ್ರಹ ಮತ್ತು ಟಾರ್ಗೆಟ್ ಮಾಡುವುದರಿಂದ ಐಟಿ ಹಾಗೂ ಇಡಿ ಡಿಪಾರ್ಟ್ ಮೆಂಟ್ ಮೇಲೆ ಒತ್ತಡಗಳಿವೆ. ಪರಿಣಾಮ ಸಣ್ಣ ಉದ್ಯಮ ನೆಲಕಚ್ಚಿವೆ. ಈಗ ಆರ್ ಬಿಐ ಯಲ್ಲಿರುವ ಹಣವನ್ನು ಖರ್ಚು ಮಾಡಲು ಕೇಂದ್ರ ಸರಕಾರ ಆಲೋಚನೆ ಮಾಡುತ್ತಿದೆ ಎಂಬುವುದು ಇನ್ನೊಂದು ಆತಂಕದ ಸಂಗತಿ ಎಂದು ಐವನ್ ಡಿಸೋಜ ಹೇಳಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.