ETV Bharat / city

ಎಂಆರ್​ಪಿಎಲ್ ನೇಮಕಾತಿಗೆ ತಡೆಹಿಡಿಯಲು ಅಧಿಕಾರಿಗಳ ಒಪ್ಪಿಗೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ - ಮಂಗಳೂರು ಲೇಟೆಸ್ಟ್ ನ್ಯೂಸ್

ಎಂಆರ್​ಪಿಎಲ್​​ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಹೋರಾಟ ಮಾಡಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ‌ ಮುನೀರ್ ಕಾಟಿಪಳ್ಳ ಮತ್ತು ಸ್ಥಳೀಯರು ಈ ನೇಮಕಾತಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

stay-on-mrpl-recruitment
ಎಂಆರ್​ಪಿಎಲ್ ನೇಮಕಾತಿಗೆ ತಡೆಹಿಡಿಯಲು ಅಧಿಕಾರಿಗಳ ಒಪ್ಪಿಗೆ
author img

By

Published : May 23, 2021, 12:09 AM IST

ಮಂಗಳೂರು: ಸ್ಥಳೀಯರನ್ನು ಮತ್ತು ಕನ್ನಡಿಗರನ್ನು ಕಡೆಗಣಿಸಿ ಎಂಆರ್​ಪಿಎಲ್ (ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್​ ಲಿಮಿಟೆಡ್​​​​) ನೇಮಕಾತಿ ನಡೆದಿರುವ ಹಿನ್ನೆಲೆಯಲ್ಲಿ ಸಂಸದರ ಸೂಚನೆ ಮೇರೆಗೆ ನೇಮಕಾತಿ ತಡೆಹಿಡಿಯಲು ಅಧಿಕಾರಿಗಳು ಒಪ್ಪಿದ್ದಾರೆ ಎಂದು ದಕ್ಷಿಣ ವರ್ಷದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಭಾರತ ಸರಕಾರ ಉದ್ಯಮವಾದ ಎಂಆರ್​ಪಿಎಲ್​​ನಲ್ಲಿ 224 ಹುದ್ದೆಗಳಿಗೆ ಇತ್ತೀಚೆಗೆ ನೇಮಕಾತಿ ನಡೆದಿತ್ತು. ಇದರಲ್ಲಿ ಇಬ್ಬರು ದಕ್ಷಿಣ ಕನ್ನಡ, ಇಬ್ಬರು ಉಡುಪಿ ಜಿಲ್ಲೆಯವರು ಮಾತ್ರ ಆಯ್ಕೆಯಾಗಿದ್ದರು. ಕರ್ನಾಟಕದಿಂದ ಕೇವಲ 13 ಮಂದಿ ಮಾತ್ರ ಆಯ್ಕೆಯಾಗಿದ್ದರು. ನೇಮಕಾತಿಯಲ್ಲಿ ಉತ್ತರ ಭಾರತದವರು ಅಧಿಕ ಸಂಖ್ಯೆಯಲ್ಲಿದ್ದರು.

ಎಂಆರ್​ಪಿಎಲ್​​ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂದು ಹೋರಾಟ ಮಾಡಿದ್ದ ಡಿವೈಎಫ್ಐ ರಾಜ್ಯಾಧ್ಯಕ್ಷ‌ ಮುನೀರ್ ಕಾಟಿಪಳ್ಳ ಮತ್ತು ಸ್ಥಳೀಯರು ಈ ನೇಮಕಾತಿ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಕೊರೊನಾ ಲಾಕ್​ಡೌನ್​​ ನಡುವೆ ಅನಗತ್ಯವಾಗಿ ಓಡಾಡಿದವರಿಗೆ ಬಿಸಿ ಮುಟ್ಟಿಸಿ ಖಾಕಿ!

ಸಾಮಾಜಿಕ ಜಾಲತಾಣದಲ್ಲಿಯು ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದರ ನಡುವೆ ಶನಿವಾರ ಎಂಆರ್​ಪಿಎಲ್​​ ಅಧಿಕಾರಿಗಳೊಂದಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಸಭೆ ಕರೆದು ನೇಮಕಾತಿ ಪ್ರಕ್ರಿಯೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್ ಭಾಗವಹಿಸಿದ್ದರು.

ಈ ಸಭೆಯಲ್ಲಿ ಎಂಆರ್​ಪಿಎಲ್​​ ನೇಮಕಾತಿಯನ್ನು ತಡೆಹಿಡಿಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದಕ್ಕೆ ಎಂಆರ್​ಪಿಎಲ್​​ ಅಧಿಕಾರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.