ETV Bharat / city

ನನ್ನ ಮತ ಮಾರಾಟಕ್ಕಿಲ್ಲ, ಜನಾಂದೋಲನದ ಅಗತ್ಯವಿದೆ: ಸ್ಪೀಕರ್​ ಕಾಗೇರಿ

ಮಂಗಳೂರಿನಲ್ಲಿ ನಡೆದ 'ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ' ಕಾರ್ಯಕ್ರಮದಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ, ಇಂದು ಮತ ಮಾರಾಟಕ್ಕಿಲ್ಲ ಆಂದೋಲನ ನಡೆಯಬೇಕು ಎಂದು ಹೇಳಿದ್ದಾರೆ.

speaker-kageri
ಸ್ಪೀಕರ್​ ಕಾಗೇರಿ
author img

By

Published : Apr 1, 2022, 5:37 PM IST

Updated : Apr 1, 2022, 8:00 PM IST

ಮಂಗಳೂರು: ಹಣಬಲ, ತೋಳ್ಬಲ, ಜಾತಿ ಬಲಕ್ಕೆ ಬಗ್ಗದೇ ಚುನಾವಣೆಯಲ್ಲಿ ಮತ ಚಲಾಯಿಸುತ್ತೇನೆ ಎಂಬ ನೈತಿಕ ಶಕ್ತಿಯನ್ನು ಸಮಾಜ ರೂಢಿಸಿಕೊಳ್ಳಬೇಕಿದೆ. ಇದೆಲ್ಲವನ್ನೂ ಬೆಳೆಸಲು 'ನನ್ನ ಮತ ಮಾರಾಟಕ್ಕಿಲ್ಲ ಎಂಬ ಜನಾಂದೋಲನ' ಆಗಬೇಕು ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾಡಳಿತದಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಹಮ್ಮಿಕೊಂಡಿರುವ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹುಮುಖ್ಯವಾಗಿ ಯುವಕರು ಈ ವ್ಯವಸ್ಥೆಯ ಕಾವಲುಗಾರರಾಗಬೇಕು. ಪೊಲೀಸರು ವ್ಯವಸ್ಥೆಗಳ ಕಾವಲುಗಾರರೆಂದು ಬಿಡೋದು ನಮ್ಮ ಜವಾಬ್ದಾರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರಾಷ್ಟ್ರದ ಭವಿಷ್ಯ ನಿರ್ಮಿಸುವಲ್ಲಿ ಯುವಕರ ಪಾತ್ರ ಮಹತ್ವದ್ದು ಎಂದು ಹೇಳಿದರು.

ನನ್ನ ಮತ ಮಾರಾಟಕ್ಕಿಲ್ಲ, ಜನಾಂದೋಲನದ ಅಗತ್ಯವಿದೆ: ಸ್ಪೀಕರ್​ ಕಾಗೇರಿ

ರಾಜಕಾರಣಿಗಳೇ ಇದಕ್ಕೆ ನೀವೇ ಹೊಣೆ ಎನ್ನುವಂತಿಲ್ಲ: ನಾವೆಲ್ಲರೂ ವಿಷ ವರ್ತುಲದಲ್ಲಿ ಸಿಲುಕಿಕೊಂಡಿದ್ದೇವೆ. ಇದಕ್ಕೆ ರಾಜಕಾರಣಿಗಳೇ ನೀವೇ ಹೊಣೆ ಎಂದು ಬೊಟ್ಟು ಮಾಡಿ ತೋರಿಸುವಂತಿಲ್ಲ. ಮೌಲ್ಯಗಳ ಅಧಃಪತನದ ವರ್ತುಲದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ಸಮಾಜದ ವ್ಯವಸ್ಥೆಗಳೂ ಇದರಲ್ಲಿ ಭಾಗಿಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಸಂಭ್ರಮದ ಹಬ್ಬ. ಆದರೆ, ಇಂದು ಚುನಾವಣೆಗಳು ಎಲ್ಲ ವ್ಯವಸ್ಥೆಗಳ ಭ್ರಷ್ಟತೆಗೆ, ಮೌಲ್ಯ, ಆದರ್ಶಗಳ ಅಧಃಪತನಕ್ಕೆ ಕಾರಣವಾಗುತ್ತಿದೆ ಎಂದರು.

ಇವುಗಳ ಸುಧಾರಣೆಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸಿದಲ್ಲಿ ಮಾತ್ರ ಅದಕ್ಕೆ ಪರಿಹಾರ ದೊರಕುವುದಿಲ್ಲ. ಜನಸಮೂಹದಲ್ಲಿ ಚುನಾವಣೆ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯತೆಯಿದೆ. ಈ ಜವಾಬ್ದಾರಿಯನ್ನು ಅರಿತು ಜನರು ವ್ಯವಹರಿಸಿ ಚುನಾವಣೆ ವ್ಯವಸ್ಥೆಯನ್ನು ಸುಧಾರಣೆಗೆ ತರಬೇಕಾಗಿದೆ. ಹಣಬಲ, ಜಾತಿಬಲ, ತೋಳ್ಬಲ, ಪಕ್ಷಾಂತರದ ಬಲ ಇತ್ಯಾದಿಗಳಲ್ಲಿಯೇ ಮುಳುಗಿರುವಂತಹ ಚುನಾವಣೆಗಳನ್ನು ನಾವು ಕಾಣುತ್ತಿದ್ದೇವೆ ಎಂದರು.

ಓದಿ: ಮಧ್ಯಪ್ರದೇಶದ ವಿವಿಯಲ್ಲಿ ವಿದ್ಯಾರ್ಥಿನಿ ನಮಾಜ್: ತನಿಖಾ ಸಮಿತಿ ಮುಂದೆ ತಪ್ಪೊಪ್ಪಿಗೆ

Last Updated : Apr 1, 2022, 8:00 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.