ಮಂಗಳೂರು: ನಗರದಲ್ಲಿ ಹಾಡಹಗಲೇ ಮಾದಕ ವಸ್ತು ಕೊಕೇನ್ನ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ)ಪೊಲೀಸರು ಹಾಗೂ ಇಕಾನಾಮಿಕ್ ಅಂಡ್ ನಾರ್ಕೋಟಿಕ್ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಮಂಗಳೂರು ಫಳ್ನೀರ್ನ ಫಾಸೀಮ್ ನೌಶಿಬ್ (25), ಕೇರಳ ಮಂಜೇಶ್ವರದ ಅಪ್ಜಲ್ ಹುಸೈನ್ (28), ಫಳ್ನೀರ್ನ ಮಹಮ್ಮದ್ ಝಾಹಿದ್ (26) ಬಂಧಿತರು. ಮಂಗಳೂರು ನಗರದ ಪಡೀಲ್ ಕಂಕನಾಡಿ ಜಂಕ್ಷನ್ ರೈಲ್ವೆ ಸಿಬ್ಬಂದಿ ಸ್ಟಾಪ್ ಕ್ವಾಟ್ರಸ್ ಬಳಿ ಕೊಕೇನ್ ಮಾರುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಆರೋಪಿಗಳಿಂದ ₹2.40 ಲಕ್ಷ ಮೌಲ್ಯದ 30 ಗ್ರಾಂ. ತೂಕದ ಕೊಕೇನ್, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 4 ಮೊಬೈಲ್ನ ವಶಕ್ಕೆ ಪಡೆಯಲಾಗಿದೆ.