ಮಂಗಳೂರು: ಕೊರೊನಾ ಭಯ ನಾನಾ ರಂಗದ ಮೇಲೆ ದುಷ್ಪರಿಣಾಮ ಬೀರಿದೆ. ಅದೇ ರೀತಿ ಅಗತ್ಯ ವಸ್ತುಗಳ ಬೆಲೆಗಳ ಮೇಲೆಯೂ ಆಗಬಹುದು ಎಂದುಕೊಳ್ಳಲಾಗಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನಸಿ ವಸ್ತುಗಳ ಬೆಲೆ ಏರುಪೇರಾಗಲಿಲ್ಲ.
ಕೋವಿಡ್ ಆರಂಭಕ್ಕೂ ಮುನ್ನ ಇದ್ದ ಬೆಲೆಯೇ ಈಗಲೂ ಇದೆ. ಅಕ್ಕಿ, ಎಣ್ಣೆ, ಧವಸ ಧಾನ್ಯ, ನಿತ್ಯ ಬಳಕೆಯ ವಸ್ತುಗಳಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎನ್ನುತ್ತಾರೆ ಮಂಗಳೂರಿನ ಪಾಂಡೇಶ್ವರದ ದುರ್ಗಾ ಜನರಲ್ ಸ್ಟೋರ್ ಮಾಲೀಕ.
ದಿನಸಿ ಸಾಮಗ್ರಿಗಳ ಬೆಲೆಯಲ್ಲಿ ಹೆಚ್ಚಳವಾಗದಿದ್ದರೂ ತರಕಾರಿಗಳ ಬೆಲೆ ತುಸು ಹೆಚ್ಚಾಗಿದೆ. ಕೋಳಿ ಮೊಟ್ಟೆಯ ದರ ಸ್ವಲ್ಪ ಏರಿದೆ. ಇಷ್ಟು ಹೊರತುಪಡಿಸಿದರೆ ಬೇರೆ ಯಾವು ಬೆಲೆ ಹೆಚ್ಚಳವಾಗಿಲ್ಲ. ಇದು ಗ್ರಾಹಕರಿಗೆ ತುಸು ನೆಮ್ಮದಿ ತಂದಿದೆ. ಆದರೆ, ಮುಂದೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.