ಬೆಳ್ತಂಗಡಿ : ಯುವಕನೊರ್ವ ಆಡುಗಳನ್ನು ಮೇಯಿಸುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಯತ್ನಿಸಿದ ಘಟನೆ ಉಜಿರೆ ಸಮೀಪದ ಕಡಂಬಿಲ ಎಂಬಲ್ಲಿ ನಡೆದಿದೆ.
ಆಡು ಮೇಯಿಸುತ್ತಿದ್ದ ಯುವತಿನ್ನು ತಡೆದು ನಿಲ್ಲಿಸಿದ ಕೊಯ್ಯೂರು ಸಮೀಪದ ಇಕ್ಬಾಲ್ ಸಾಧಿಕ್ (27) ಎಂಬ ವ್ಯಕ್ತಿ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದ. ಇದಕ್ಕೆ ಪ್ರತಿರೋಧ ತೋರಿ ಕಿರುಚಿದಾಗ ಆರೋಪಿ ಜೀವ ಬೆದರಿಕೆಯೊಡ್ಡಿದ್ದಾನೆ. ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯುವತಿ ನೀಡಿದ ದೂರಿನ ಅನ್ವಯ ಕಲಂ 341, 354, 354(A) 506 IPC ಹಾಗೂ ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.