ETV Bharat / city

ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ 'ಅಪ್ಪು': ಪುನೀತ್ ಅಪ್ಪಟ ಅಭಿಮಾನಿಯ ಕೈಚಳಕ - ಮಂಗಳೂರಿನ ಪುನೀತ್ ಅಭಿಮಾನಿ

ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಅವರು ಲೈಫ್ ಬಾಯ್ ಸೋಪ್​​ನಲ್ಲಿ ಪುನೀತ್ ರಾಜ್‍ಕುಮಾರ್ ಚಿತ್ರ ರಚಿಸಿ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

puneet-rajkumar-art-in-lifebuoy-soap
ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ 'ಅಪ್ಪು': ಪುನೀತ್ ಅಪ್ಪಟ ಅಭಿಮಾನಿಯ ಕೈಚಳಕ
author img

By

Published : Mar 16, 2022, 6:05 PM IST

Updated : Mar 16, 2022, 6:50 PM IST

ಮಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿದ್ದರೂ ಅಭಿಮಾನಿಗಳು ಮಾತ್ರ ಇನ್ನೂ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಇದೀಗ ಮಂಗಳೂರಿನಲ್ಲೊಬ್ಬ ಅಪ್ಪಟ ಅಪ್ಪು ಅಭಿಮಾನಿಯೊಬ್ಬರು ಲೈಫ್ ಬಾಯ್ ಸೋಪ್​​ನಲ್ಲಿ ಪುನೀತ್ ರಾಜ್‍ಕುಮಾರ್ ಅವರ ಚಿತ್ರ ರಚಿಸಿ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ.

ನಾಳೆ ಅಪ್ಪು ಹುಟ್ಟುಹಬ್ಬವಿದ್ದು, ಅವರ ಜೇಮ್ಸ್ ಸಿನಿಮಾ ಕೂಡಾ ಬಿಡುಗಡೆ ಆಗಲಿದೆ. ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಮಂಗಳೂರಿನ ಗಣೇಶಪುರ ನಿವಾಸಿಯಾದ ಕಲಾವಿದ ದೇವಿಕಿರಣ್ ಸೋಪ್​ನಲ್ಲಿ ಅಪ್ಪು ಚಿತ್ರ ಬಿಡಿಸಿದ್ದಾರೆ. ಕೇವಲ ಎರಡು ಗಂಟೆಗಳಲ್ಲಿ ಸೋಪ್ ಅನ್ನು ಗುಂಡು ಪಿನ್ ಮೂಲಕ ಕೊರೆದು ಪುನೀತ್ ರಾಜ್‍ಕುಮಾರ್ ಅವರ ಚಿತ್ರ ಅರಳಿಸಿದ್ದಾರೆ.

ಲೈಫ್ ಬಾಯ್ ಸೋಪ್​​ನಲ್ಲಿ ಮೂಡಿದ ಅಪ್ಪು

ಬೇರೆ ಸೋಪ್​ಗಳಲ್ಲಿ ಅಪ್ಪು ಚಿತ್ರ ರಚಿಸಲು‌ ಕಲಾವಿದ ದೇವಿಕಿರಣ್ ಯತ್ನಿಸಿದರೂ, ಅದು ಸಾಧ್ಯವಾಗಿರಲಿಲ್ಲ. ಆ ಬಳಿಕ ಅವರು ಲೈಫ್ ಬಾಯ್ ಸೋಪ್​ನಲ್ಲಿ ಚಿತ್ರ ರಚನೆಗೆ ತೊಡಗಿದ್ದಾರೆ. ಮೊದಲನೇ ಬಾರಿ ಸರಿಯಾಗಿ ಬಂದಿರಲಿಲ್ಲ. ಎರಡನೇ ಬಾರಿ ಚೆನ್ನಾಗಿ ಬಂದಿದ್ದು, ಆ ಚಿತ್ರ ರಚನೆಯ ವಿಡಿಯೋವನ್ನು ದೇವಿಕಿರಣ್ ಅವರು ಫೇಸ್​ಬುಕ್​ನಲ್ಲಿ ಮಂಗಳವಾರ ಅಪ್ಲೋಡ್ ಮಾಡಿದ್ದರು. ಇದೀಗ ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ:ಪವರ್ ಸ್ಟಾರ್ ಮಾಡಿರೋ ಒಳ್ಳೆ ಕೆಲಸಗಳು ಬೇರೆಯವರಿಗೆ ಸ್ಫೂರ್ತಿ: ತೆಲುಗು ನಟ ಶ್ರೀಕಾಂತ್

Last Updated : Mar 16, 2022, 6:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.