ETV Bharat / city

ಮುಗಿಯದ ಪಂಪ್​ವೆಲ್​ ಮೇಲ್ಸೇತುವೆ ಕಾಮಗಾರಿ: ಟೋಲ್​ಗೇಟ್​ ಬಂದ್​ ಮಾಡಿ ಬಿಜೆಪಿ ಪ್ರತಿಭಟನೆ - ತಲಪಾಡಿ ಟೋಲ್​ ಗೇಟ್ ಬಂದ್​​

ಪಂಪ್​ವೆಲ್​ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಗುತ್ತಿಗೆ ಪಡೆದ ಸಂಸ್ಥೆಯ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

bjp protest
ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ
author img

By

Published : Jan 1, 2020, 10:51 AM IST

ಮಂಗಳೂರು: ಇಲ್ಲಿನ ಪಂಪ್​​ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆ ವಿರುದ್ಧ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್​​​ ಶೆಟ್ಟಿ ನೇತೃತ್ವದಲ್ಲಿ ತಲಪಾಡಿಯ ಟೋಲ್​​​ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ತಲಪಾಡಿಯಲ್ಲಿರುವ ನವಯುಗ ಉಡುಪಿ ಪ್ರೈವೇಟ್ ಲಿಮಿಟೆಡ್​​​ನ ಟೋಲ್ ಗೇಟ್ ಅನ್ನು ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಜನವರಿ 1ಕ್ಕೆ ಈ ಸೇತುವೆ ಉದ್ಘಾಟನೆ ಆಗಲಿದೆ ಎಂದು ಸಂಸ್ಥೆ ಮಾತು ಕೊಟ್ಟಿತ್ತು. ಆದರೆ, ಇನ್ನೂ ಸಹ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿನ್ನೆ ತಲಪಾಡಿ ಟೋಲ್​ ಗೇಟ್ ಅನ್ನು ಒಂದು ತಿಂಗಳು ಬಂದ್​ ಮಾಡುವ ಎಚ್ಚರಿಕೆ ನೀಡಿದ್ದರು. ಆದರೆ, ಇಂದು ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ಒಂದು ದಿನ ಬಂದ್ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್​ ಕಾಮತ್​ ಅವರು, ಜನವರಿ 31ರೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ, ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇಂದು ಸಂಜೆ 6 ಗಂಟೆಯವರೆಗೆ ಟೋಲ್​​ ಗೇಟ್ ಬಂದ್ ಇರಲಿದೆ. ವಾಹನಗಳಿಂದ ಯಾವುದೇ ಸುಂಕ ಸಂಗ್ರಹಿಸಲಾಗುತ್ತಿಲ್ಲ.

Intro:ಮಂಗಳೂರು: ಮಂಗಳೂರಿನ ಪಂಪ್ ವೆಲ್ ನಲ್ಲಿ ಪ್ಲೈ ಓವರ್ ನಿರ್ಮಾಣ ಕಾಮಾಗಾರಿ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರುಗಳಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ನೇತೃತ್ವದಲ್ಲಿ ತಲಪಾಡಿಯ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟಿಸಲಾಯಿತು.

Body:ಮಂಗಳೂರಿನ ನಂತೂರಿನಿಂದ ತಲಪಾಡಿಯ ವರೆಗೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಸಂಸ್ಥೆಯು ಪಂಪ್ವೆಲ್ ಪ್ಲೈ ಓವರ್ ನಿರ್ಮಾಣವನ್ನು ಪೂರ್ಣಗೊಳಿಸದೆ ಇರುವುದನ್ನು ವಿರೋಧಿಸಿ ಮಂಗಳೂರಿನ ತಲಪಾಡಿಯಲ್ಲಿ ಇರುವ ನವಯುಗ ಉಡುಪಿ ಪ್ರೈವೇಟ್ ಲಿಮಿಟೆಡ್ ನ ಟೋಲ್ ಗೇಟ್ ಅನ್ನು ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿದರು. ಈ ಹಿಂದೆ ಪಂಪ್ವೆಲ್ ಫ್ಲೈಓವರ್ ಜನವರಿ 1ಕ್ಕೆ ಉದ್ಘಾಟನೆಯಾಗಲಿದೆ ಎಂದು ಹೇಳಲಾಗಿತ್ತು ಆದರೆ ಗುತ್ತಿಗೆ ತೆಗೆದುಕೊಂಡಿರುವ ನವಯುಗ ಸಂಸ್ಥೆ ಅದನ್ನು ಪೂರ್ಣಗೊಳಿಸಿರಲಿಲ್ಲ. ಇದರಿಂದ ಆಕ್ರೋಶಗೊಂಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ನಿನ್ನೆ ತಲಪಾಡಿ ಟೋಲ್ಗೇಟ್ ಅನ್ನು ಒಂದು ತಿಂಗಳು ಮಾಡುವ ಎಚ್ಚರಿಕೆಯನ್ನು ನೀಡಿದ್ದರು. ಆದರೆ ಇಂದು ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ಒಂದು ದಿನ ಟೋಲ್ಗೇಟನ್ನು ಬಂದ್ ಮಾಡಿದ್ದು ಜನವರಿ 31ಕ್ಕೆ ಪಂಪ್ವೆಲ್ ಪ್ಲೈ ಓವರ್ ಕಾಮಗಾರಿ ಪೂರ್ಣ ವಾಗದಿದ್ದರೆ ಜನವರಿ 31ರಿಂದ ಉಗ್ರ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ. ಇಂದು ಮುಂಜಾನೆಯಿಂದ ಸಂಜೆ 6 ಗಂಟೆಯವರೆಗೆ ಟೋಲ್ಗೇಟ್ ಬಂದ್ ಇರಲಿದ್ದು ವಾಹನಗಳಿಂದ ಯಾವುದೇ ಸುಂಕವನ್ನು ಸಂಗ್ರಹಿಸಲಾಗುತ್ತಿಲ್ಲ.. ಬಿಜೆಪಿ ಕಾರ್ಯಕರ್ತರು ಟೋಲ್ ಗೇಟ್ ಬಂದ್ ಮಾಡುವ ವೇಳೆ ಟೋಲ್ಗೇಟ್ ನಲ್ಲಿರುವ ಗೇಟನ್ನು ತೆರವು ಮಾಡಿದ್ದಾರೆ. ಬೈಟ್- ವೇದವ್ಯಾಸ ಕಾಮತ್, ಬಿಜೆಪಿ ಶಾಸಕ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.