ETV Bharat / city

ಬಸ್​ನಲ್ಲಿ ಯುವತಿಯರ ವಿಡಿಯೋ ಚಿತ್ರೀಕರಿಸಿದ್ದವನಿಗೆ ಧರ್ಮದೇಟು - people slap a man

ಸಹೋದರಿಯರ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿರುವಾಗ ಪ್ರಯಾಣಿಕರು ಈ ವಿಕೃತನನ್ನು ತರಾಟೆಗೆ ತೆಗೆದುಕೊಂಡು ಬಸ್​ನಿಂದ ಇಳಿಸಿ ಗೂಸಾ ಕೊಟ್ಟಿದ್ದಾರೆ.

people slaped a man in manglore by Sexual Harassment
ಬಸ್​ನಲ್ಲಿ ಯುವತಿಯರ ವಿಡಿಯೋ ಚಿತ್ರೀಕರಿಸಿದ್ದವನಿಗೆ ಧರ್ಮದೇಟು
author img

By

Published : Nov 3, 2021, 7:11 PM IST

ಮಂಗಳೂರು: ಬಸ್​ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯರ ವಿಡಿಯೋವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸುತ್ತಿದ್ದ ವ್ಯಕ್ತಿಯನ್ನು ಪ್ರಯಾಣಿಕರು ಹಿಡಿದು ಥಳಿಸಿದ್ದಲ್ಲದೇ ಆತನನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನ ಜಪ್ಪಿನಮೊಗರುವಿನಲ್ಲಿ ಬುಧವಾರ ನಡೆದಿದೆ.

ಮಡಿಕೇರಿ ಮೂಲದ ಮಹಮ್ಮದ್ ಯೂಸುಫ್ ಧರ್ಮದೇಟು ತಿಂದ ಕೀಚಕ. ಯುವತಿಯರಿಬ್ಬರು ತಲಪಾಡಿಯ ಸಿಟಿ ಬಸ್​ನಲ್ಲಿ ಪ್ರಯಾಣಿಸುತ್ತಿದ್ದರು‌. ಈ ವೇಳೆ ಕೀಚಕ ಯೂಸುಫ್ ತೊಕ್ಕೊಟ್ಟಿನಲ್ಲಿ ಬಸ್ ಹತ್ತಿದ್ದಾನೆ. ಬಳಿಕ ಬಸ್ಸಿನಲ್ಲಿದ್ದ ಯುವತಿಯರ ವಿಡಿಯೋವನ್ನು ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾನೆ. ಇದನ್ನು ಕಂಡ ಪ್ರಯಾಣಿಕರೊಬ್ಬರು ಅನುಮಾನಗೊಂಡು ವಿಚಾರಿಸಿದ್ದಾರೆ. ಅಲ್ಲದೇ ಈ ವಿಷಯವನ್ನು ಸಹೋದರಿಯರ ಗಮನಕ್ಕೂ ತಂದಿದ್ದಾರೆ.

ತಕ್ಷಣ ಪ್ರಯಾಣಿಕರು ಈ ವಿಕೃತನನ್ನು ತರಾಟೆಗೆ ತೆಗೆದುಕೊಂಡು ಬಸ್​ನಿಂದ ಇಳಿಸಿ ಗೂಸಾ ಕೊಟ್ಟಿದ್ದಾರೆ. ಅಲ್ಲದೇ, ಪೊಲೀಸರಿಗೆ ವಿಷಯ ಮುಟ್ಟಿಸಿ ವಶಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.