ದಕ್ಷಿಣ ಕನ್ನಡ: ರಾಜ್ಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಇದರಿಂದಾಗಿ ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಎಂಬಲ್ಲಿ ರಸ್ತೆ ಕುಸಿತ ಉಂಟಾಗಿದ್ದು, ಸಂಚಾರಕ್ಕೆ ತೊಡಕಾಗಿದೆ.
ಸಕಲೇಶಪುರ ಸಮೀಪದ ದೋಣಿಗಲ್ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಕುಸಿಯುತ್ತಿದ್ದು, ಮಂಗಳೂರಿನಿಂದ ಗುಂಡ್ಯ ಮಾರ್ಗವಾಗಿ ಬೆಂಗಳೂರು ಸಂಚಾರಕ್ಕೆ ತಡೆ ಉಂಟಾಗಿದೆ. ಪ್ರಸ್ತುತ ಗುಂಡ್ಯ ಚೆಕ್ಪೋಸ್ಟ್ನಲ್ಲಿ ವಾಹನಗಳನ್ನು ತಡೆ ಹಿಡಿಯಲಾಗಿದ್ದು, ಬದಲಿ ಮಾರ್ಗವಾಗಿ ಸಂಚರಿಸುವ ಸ್ಥಿತಿ ಇದೆ.
ಮಡಿಕೇರಿ - ಸಂಪಾಜೆ ರಸ್ತೆಯೂ ಪೂರ್ಣ ಪ್ರಮಾಣದಲ್ಲಿ ಸರಿಯಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನುಳಿದಂತೆ ಚಾರ್ಮಾಡಿ ಘಾಟ್ ಮೂಲಕ ಹೆಚ್ಚಿನ ವಾಹನಗಳು ಸಂಚಾರ ಮಾಡಿದಲ್ಲಿ ವಾಹನ ದಟ್ಟಣೆ ಎದುರಾಗಿ, ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ನಾಗರ ಹಾವನ್ನೇ ನುಂಗಿದ ಕಾಳಿಂಗ ಸರ್ಪ: ಫೋಟೊ ವೈರಲ್