ETV Bharat / city

'ಕಾಂಗ್ರೆಸ್ ಉಪಕಾರವನ್ನು ಜೆಡಿಎಸ್ ಯಾವತ್ತಿಗೂ ಮರೆಯೋಲ್ಲವೆಂಬ ವಿಶ್ವಾಸವಿದೆ'

'ಹಿಂದೆ ನಾವು 80 ಶಾಸಕರಿದ್ದಾಗ ಅವರು 30 ಶಾಸಕರಿದ್ದರೂ ಅವರಿಗೆ ಸಿಎಂ ಸ್ಥಾನ ನೀಡಿದ್ದೆವು. ಆದ್ದರಿಂದ ಕಾಂಗ್ರೆಸ್ ಮಾಡಿರುವ ಉಪಕಾರವನ್ನು ಜೆಡಿಎಸ್‌ ಮರೆಯೋದಿಲ್ಲ ಎಂಬ ವಿಶ್ವಾಸ ನಮಗಿದೆ'- ಶಾಸಕ ಯು.ಟಿ.ಖಾದರ್

ಯು‌.ಟಿ.ಖಾದರ್
ಯು‌.ಟಿ.ಖಾದರ್
author img

By

Published : Sep 12, 2021, 7:08 PM IST

Updated : Sep 12, 2021, 7:39 PM IST

ಮಂಗಳೂರು: ಕಲಬುರಗಿಯ ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರೇ ಮೇಯರ್ ಆಗುತ್ತಾರೆಂಬ ವಿಶ್ವಾಸವಿದೆ. ಜೆಡಿಎಸ್ ತತ್ವದ ಪ್ರಕಾರ, ಕಾಂಗ್ರೆಸ್​ಗೆ ಬೆಂಬಲ ನೀಡಬೇಕು.‌ ಕಾಂಗ್ರೆಸ್ ಮಾಡಿರುವ ಉಪಕಾರವನ್ನು ಜೆಡಿಎಸ್ ಯಾವತ್ತಿಗೂ ಮರೆಯಬಾರದು. ಅವರು ಮರೆಯುವುದು ಕೂಡಾ ಇಲ್ಲವೆಂಬ ವಿಶ್ವಾಸವಿದೆ‌ ಎಂದು ಶಾಸಕ ಯು.ಟಿ.ಖಾದರ್ ಹೇಳಿದರು.

ಶಾಸಕ ಯು.ಟಿ.ಖಾದರ್ ಹೇಳಿಕೆ

ನಗರದ ಸರ್ಕ್ಯೂಟ್ ಹೌಸ್​ನಲ್ಲಿ ಮಾತನಾಡಿದ ಅವರು, ಹಿಂದೆ ನಾವು 80 ಶಾಸಕರಿದ್ದಾಗ ಅವರು 30 ಶಾಸಕರಿದ್ದರೂ ಅವರಿಗೆ ಸಿಎಂ ಸ್ಥಾನ ನೀಡಿದ್ದೆವು. ಆದ್ದರಿಂದ ಕಾಂಗ್ರೆಸ್ ಮಾಡಿರುವ ಉಪಕಾರವನ್ನು ಜೆಡಿಎಸ್‌ ಮರೆಯೋದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.

ಜನಸಾಮಾನ್ಯರು ಬಹಳ ಸ್ಪಷ್ಟವಾಗಿ ತಮ್ಮ ಬಹುಮತ ನೀಡಿದ್ದಾರೆ. ಬಿಜೆಪಿಯಲ್ಲಿ ಒಂದು ಎಂಪಿ, ಎರಡು ಎಂಎಲ್ಎ, ಎರಡು ಎಂಎಲ್‌ಸಿ ಇದ್ದ ಕಾರಣ ಕಾಂಗ್ರೆಸ್‌ಗೆ ಸ್ವಲ್ಪ ತೊಡಕಾಗಿದೆ. ರಾಜ್ಯಸಭೆಗೆ ಚುನಾವಣೆ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ಗೆ ಎರಡು ಅಭ್ಯರ್ಥಿಯಾಗಿ ಪ್ರಯತ್ನಪಡುವ ಎಲ್ಲಾ ಅವಕಾಶಗಳಿದ್ದಲ್ಲಿಯೂ ದೇವೇಗೌಡರನ್ನು ತುಮಕೂರಿನಲ್ಲಿ ಇಲ್ಲಸಲ್ಲದ ಅಪಪ್ರಚಾರ ಮಾಡಿ ಸೋಲಿಸಿದ್ದರು. ಆದರೂ ನಮಗೆ ಜೆಡಿಎಸ್ ಬೆಂಬಲ ನೀಡುತ್ತದೆ ಎಂಬ ವಿಶ್ವಾಸವಿದೆ.

ಕೋವಿಡ್ ಸಮಯದಲ್ಲಿ ಕಟ್ಟಡ ಕಾರ್ಮಿಕರಿಗೆ ರಾಜ್ಯದ ಕಾರ್ಮಿಕ ಇಲಾಖೆ ನೀಡಿರುವ ಕಿಟ್ ಅಸಮರ್ಪಕವಾಗಿದ್ದು, ಅಗತ್ಯವಿಲ್ಲದ ವಸ್ತುಗಳನ್ನು ನೀಡಲಾಗಿದೆ. ಈ ಮೂಲಕ ಕಟ್ಟಡ ಕಾರ್ಮಿಕರ ಕಲ್ಯಾಣದ ಅನುದಾನದ ಸಂಪೂರ್ಣ ದುರುಪಯೋಗವಾಗಿದೆ. ಅದರ ಜೊತೆಗೆ ಹ್ಯುಮಿನಿಟಿ ಕಿಟ್ ನೀಡಲಾಗಿದ್ದು, ಹೇಗೆ ಬಳಸುವುದು, ಯಾರು ಅದನ್ನು ಶಿಫಾರಸು ಮಾಡಿದ್ದಾರೆಂದು ಸ್ಪಷ್ಟತೆಯಿಲ್ಲ ಎಂದರು.

ಸೇಫ್ಟಿ ಕಿಟ್ ನೀಡಲಾಗಿದ್ದು, ಇದು ಸಮರ್ಪಕವಾಗಿಲ್ಲ. ಒಂದು ಕಿಟ್‌ಗೆ 2,500-3,000 ರೂ. ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದರೆ ಅಷ್ಟೊಂದು ಮೊತ್ತದ ವಸ್ತುಗಳು ಈ ಕಿಟ್ ನಲ್ಲಿ‌ ಇಲ್ಲ. ಆದ್ದರಿಂದ ಈ ಬಗ್ಗೆ ಸರಿಯಾಗಿ ತನಿಖೆಯಾಗಲಿ ಎಂದು ಹೇಳಿದರು.

ರಾಜ್ಯ ಸರಕಾರ ಜನರಿಗೆ ಒಂದೇ ಒಂದು ಮನೆಯನ್ನು ಕೊಟ್ಟಿಲ್ಲ. ಕಾಂಗ್ರೆಸ್ ಅಧಿಕಾರದಲ್ಲಿರುವಾಗ 20 ಮನೆಗಳನ್ನು ನೀಡಿದ್ದೆವು‌. ನಮ್ಮ ಅಧಿಕಾರ ಹೋದ ಬಳಿಕ ಕೊಟ್ಟ ಆದೇಶವನ್ನು ಬದಲಿಸಿದರು. ಎಂಪಿ ಚುನಾವಣೆ ಸಂದರ್ಭ ಎಲ್ಲಾ ಪಂಚಾಯತ್​ಗಳಿಗೆ ಮನೆ ನಿರ್ಮಾಣ ಮಾಡುವ ಆದೇಶ ನೀಡಿ ಸರ್ವೇ ಮಾಡಲು ತಿಳಿಸಿದರು. ಆದರೆ ಚುನಾವಣೆ ಬಳಿಕ ಯಾವುದೇ ಮನೆ ನಿರ್ಮಾಣ ಆಗಿಲ್ಲ ಎಂದು ಹೇಳಿದರು.

ರೇಷನ್ ಕಾರ್ಡ್ ಕೊಡುತ್ತಿಲ್ಲ. ಅಂತ್ಯಸಂಸ್ಕಾರದ ಹಣಕ್ಕೆ ಆನ್ಲೈನ್ ಆರಂಭವಾಗಿಲ್ಲ. ಪಿಂಚಣಿ ಸಮರ್ಪಕವಾಗಿ ಬರುತ್ತಿಲ್ಲ. ಎನ್ಇಪಿ ಬಗ್ಗೆ ಸಮರ್ಪಕವಾಗಿ ಚರ್ಚೆಯಾಗದೆ ಜಾರಿಗೊಳಿಸಲಾಗುತ್ತದೆ ಎಂದು ಯು.ಟಿ.ಖಾದರ್ ದೂರಿದರು.

Last Updated : Sep 12, 2021, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.