ETV Bharat / city

ಹೆಚ್‌ಡಿಕೆ-ಸುಮಾಲತಾ ನಡುವಿನ ಟಾಕ್​ವಾರ್​ ನಿಲ್ಲಿಸಲು ಸ್ವಾಮೀಜಿ ಮಧ್ಯ ಪ್ರವೇಶಿಸಲಿ: ಸಚಿವ ನಿರಾಣಿ - KRS crack issue

ಮಾಜಿ ಸಿಎಂ ಹೆಚ್‌ಡಿಕೆ ಮತ್ತು ಸಂಸದೆ ಸುಮಾಲತಾ ನಡುವಿನ ಜಗಳದಲ್ಲಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಲಿದೆ. ಹೀಗಾಗಿ, ಇಬ್ಬರು ತಮ್ಮ ಫೈಟ್ ಇಲ್ಲಿಗೆ ನಿಲ್ಲಿಸುವುದು ಉತ್ತಮ ಎಂದು ಸಚಿವ ಮುರುಗೇಶ್​ ನಿರಾಣಿ ಹೇಳಿದರು.

Murugesh Nirani
ಮುರುಗೇಶ್​ ನಿರಾಣಿ
author img

By

Published : Jul 10, 2021, 1:03 PM IST

ಕಲಬುರಗಿ: ಹೆಚ್‌ಡಿಕೆ ಮತ್ತು ಸಂಸದೆ ಸುಮಾಲತಾ ನಡುವಿನ ಟಾಕ್​ವಾರ್​ ಇಲ್ಲಿಗೆ ನಿಲ್ಲಿಸಬೇಕು. ಯಾರಾದ್ರೂ ಒಬ್ಬರು ಹಿರಿಯ ಸ್ವಾಮೀಜಿ ಅವರನ್ನು ಕರೆದು ಒಗ್ಗೂಡಿಸುವ ಕೆಲಸ ಮಾಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್​ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಹೆಚ್‌ಡಿಕೆ-ಸುಮಾಲತಾ ನಡುವಿನ ಕೋಲ್ಡ್‌ವಾರ್ ನಿಲ್ಲಿಸಲು ಸ್ವಾಮೀಜಿಯ ಮಧ್ಯವೇಶವಾಗಲಿ: ಮುರುಗೇಶ್​ ನಿರಾಣಿ

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಬ್ಬರು ಹಿರಿಯ ರಾಜಕೀಯ ಧುರೀಣರಿದ್ದಾರೆ. ಇಬ್ಬರ ಜಗಳದಲ್ಲಿ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಲಿದೆ. ಹೀಗಾಗಿ, ಹೆಚ್‌ಡಿಕೆ ಮತ್ತು ಸಂಸದೆ ಸುಮಾಲತಾ ತಮ್ಮ ಫೈಟ್ ಇಲ್ಲಿಗೆ ನಿಲ್ಲಿಸುವುದು ಉತ್ತಮ ಎಂದರು.

ಯತ್ನಾಳ್​ ಬಗ್ಗೆ ಮಾತನಾಡುವುದಿಲ್ಲ:

ಬಸನಗೌಡ ಯತ್ನಾಳ್​ ಹಿರಿಯರು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನಿಂದ ಏನಾದ್ರೂ ತಪ್ಪಾಗಿದ್ರೆ, ತಿದ್ದಿ ಹೇಳಲಿ. ನಾನು ತಿದ್ದಿಕೊಳ್ಳುತ್ತೇನೆ. ಅವರ ಬಗ್ಗೆ ಹೆಚ್ಚು ಮಾತನಾಡೋವಷ್ಟು ನಾನು ದೊಡ್ಡವನಲ್ಲ ಎಂದು ಯತ್ನಾಳ್​ಗೆ ತೀರುಗೆಟು ನೀಡಿದರು.

ಸದ್ಯ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿದ್ದಾರೆ. ಎರಡು ವರ್ಷ ಆ ಬಗ್ಗೆ ಯಾವುದೇ ಚರ್ಚೆ ಮಾಡುವುದು ಸರಿಯಲ್ಲ. ಸಿಎಂ ಆಗಲಿಕ್ಕೆ ರಾಜ್ಯದಲ್ಲಿ ಸಾಕಷ್ಟು ಜನ ಇದ್ದಾರೆ. ಮುಂದೆಯೂ ನಮ್ಮ ಸರ್ಕಾರ ಬಂದ ಮೇಲೆ ಮುಖ್ಯಮಂತ್ರಿ ಯಾರಾಗ್ತಾರೆ? ನೋಡೋಣ ಎಂದರು.

ಇದನ್ನೂ ಓದಿ: ರೌಡಿ ಕೊತ್ವಾಲನೊಂದಿಗಿದ್ದ ಗತಕಾಲದ ನೆನಪು ಕಾಡಿತೇ?.. ಡಿಕೆಶಿ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.