ETV Bharat / city

ಹಿಂದೂ, ಮುಸ್ಲಿಂ ಸಂಘಟನೆ ಪ್ರಮುಖರ ಗೈರಿನಲ್ಲಿ ಶಾಂತಿ ಸಭೆ : ಹಲವು ವಿಚಾರಗಳ ಚರ್ಚೆ - ಜಿಲ್ಲಾಧಿಕಾರಿ ಕಚೇರಿಯಲ್ಲಿ ಶಾಂತಿ ಸಭೆ

ದ.ಕ. ಜಿಲ್ಲಾಡಳಿತದಿಂದ ಶಾಂತಿ ಸಭೆ- ಹಿಂದೂ-ಮುಸ್ಲಿಂ ಸಂಘಟನೆಗಳ ಪ್ರಮುಖರ ಅನುಪಸ್ಥಿತಿಯಲ್ಲೇ ನಡೆದ ಸಭೆ - ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರೂ ಗೈರು

Meeting under the chairmanship of the DC
ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.
author img

By

Published : Jul 30, 2022, 7:24 PM IST

Updated : Jul 30, 2022, 7:44 PM IST

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ದಿನದಲ್ಲಿ 3 ಹತ್ಯೆ ಬಳಿಕ ಉದ್ವಿಗ್ನತೆಯ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿಯವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ದ.ಕ. ಜಿಲ್ಲಾಡಳಿತ ಇಂದು ಜಿಲ್ಲೆಯ ಪ್ರಮುಖ ಸಂಘಟನೆಗಳ, ಪೊಲೀಸ್ ಅಧಿಕಾರಿಗಳ, ವಿವಿಧ ಧರ್ಮಗಳ, ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಂತಿಸಭೆ ಕರೆದಿತ್ತು. ಆದರೆ ಇಂದು ಸಭೆಯಲ್ಲಿ ಹಿಂದೂ ಸಂಘಟನೆಗಳ, ಮುಸ್ಲಿಂ ಸಂಘಟನೆಗಳ ಪ್ರಮುಖರೇ ದೂರ ಉಳಿದಿದ್ದರು. ಅಷ್ಟು ಮಾತ್ರವಲ್ಲದೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ದ.ಕ. ಜಿಲ್ಲಾ ಸಂಸದರು, ಶಾಸಕರು ಸಭೆಯಲ್ಲಿ ಹಾಜರಿರಲಿಲ್ಲ.

ಈ ಸಭೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್.,‌ ನಗರ ಪೊಲೀಸ್ ಇಲಾಖೆಯ ಡಿಸಿಪಿಗಳು, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಜೆ.ಆರ್. ಲೋಬೊ, ಮಿಥುನ್ ರೈ ಸೇರಿದಂತೆ ಕಾಂಗ್ರೆಸ್ ಪ್ರಮುಖರು, ಜೆಡಿಎಸ್ ಜಿಲ್ಲಾ ಯುವ ಅಧ್ಯಕ್ಷ ಅಕ್ಷಿತ್ ಸುವರ್ಣ ಸೇರಿದಂತೆ ಸರ್ಕಾರಿ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ಶಾಂತಿ ಸಮಿತಿ ಸಭೆಯ ಚರ್ಚೆಯಾದ ವಿಚಾರಗಳು: ಶಾಂತಿ ಸಭೆಗಳನ್ನು ಸುಳ್ಯ, ಪುತ್ತೂರು, ಬೆಳ್ಳಾರೆ ಮತ್ತು ಇತರ ಸ್ಥಳೀಯ ಸ್ಥಳಗಳಲ್ಲಿ ಮಾಡಬೇಕು. ಎಲ್ಲಾ 3 ಕೊಲೆ ಪ್ರಕರಣ ಸಂತ್ರಸ್ತರ ಕುಟುಂಬವನ್ನು ಸಿಎಂ ಭೇಟಿ ಮಾಡಬೇಕಿತ್ತು. ಮೃತ ಕುಟುಂಬಗಳಿಗೆ ಸಮಾನ ಪರಿಹಾರವನ್ನು ನೀಡಬೇಕು. ಯಾರು ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಾರೋ ಅವರನ್ನು ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಮಾಧ್ಯಮಗಳು ಅಸಂಬದ್ಧ ಸುದ್ದಿಗಳನ್ನು ಪ್ರಕಟಿಸದಂತೆ ತಿಳಿಸಬೇಕು.

ಎಲ್ಲಾ ಸಾಮಾಜಿಕ ವಿರೋಧಿ ಕೃತ್ಯ ಮಾಡುವವರಿಗೆ ಬೆಂಬಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಸಂಘಟನೆಗಳು ಮತ್ತು ಮುಖಂಡರು ಭಾಗವಹಿಸಿಲ್ಲ, ಆದ್ದರಿಂದ ಪ್ರತಿಯೊಬ್ಬರನ್ನು ಒಳಗೊಂಡ ಮತ್ತೊಂದು ಸಭೆಯನ್ನು ಏರ್ಪಡಿಸಬೇಕು. ಬೆಳ್ಳಾರೆಯಲ್ಲಿ ಲಾಠಿ ಚಾರ್ಜ್ ಮಾಡಿದ ಇಬ್ಬರು ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದ್ದು, ಇದು ಪೊಲೀಸ್ ಅಧಿಕಾರಿಗಳ ನೈತಿಕ ಸ್ಥೈರ್ಯ ಕುಗ್ಗಿಸಬಹುದು.

Meeting under the chairmanship of the DC
ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಯಿತು.

ಸ್ಥಳೀಯ ಮಾಧ್ಯಮಗಳು ಮತ್ತು ಕೆಲ ವೆಬ್ ಸೈಟ್ ಗಳು ಭಾವನೆಗಳನ್ನು ಹೆಚ್ಚಿಸುವುದನ್ನು ತಡೆಯಲು ಸಲಹೆ ನೀಡಬೇಕು. ಪೊಲೀಸ್ ನೇಮಕಾತಿಯಲ್ಲಿ ಉತ್ತರ ಕರ್ನಾಟಕ ಮತ್ತು ದಕ್ಷಿಣ ಕನ್ನಡದ ಹೊರಗಿನ ಜನರು ಹೆಚ್ಚಾಗಿ ಆಯ್ಕೆಯಾಗುತ್ತಿದ್ದಾರೆ. ಸ್ಥಳೀಯ ತುಳು ಬ್ಯಾರಿ ಕೊಂಕಣಿ ಮತ್ತು ಇತರ ಭಾಷೆಗಳನ್ನು ತಿಳಿಯದಿರುವುದು ಅವರಿಗೆ ಮಾಹಿತಿ ಸಂಗ್ರಹಿಸಲು ತೊಂದರೆಯಾಗಿದೆ.

ಆರೋಪಿಗಳ ಹೊರತಾಗಿ ಪಿತೂರಿಯಲ್ಲಿ ತೊಡಗಿರುವ ಮತ್ತು ಆರೋಪಿಗಳಿಗೆ ವಿವಿಧ ರೀತಿ ಬೆಂಬಲ ನೀಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುವ ಮೂಲಕ ಸ್ಥಳೀಯ ಪೊಲೀಸರ ಸಾಮರ್ಥ್ಯಗಳನ್ನು ಪ್ರಶ್ನಿಸಲಾಗುತ್ತಿದ್ದು, ತನಿಖೆಯನ್ನು ಮುಂದುವರಿಸಲು ಸ್ಥಳೀಯ ಪೊಲೀಸರಿಗೆ ಅವಕಾಶ ನೀಡಬೇಕು. ದಾರಿತಪ್ಪಿದ ಯುವಕರಲ್ಲಿ ಮದ್ಯ, ಮಾದಕ ದ್ರವ್ಯಗಳ ಪ್ರಭಾವವನ್ನು ಪರಿಹರಿಸಬೇಕು.

ಆರೋಪಿಗಳಿಗೆ ಜೈಲುಗಳಲ್ಲಿ ಸಿಗುವ ಸೌಲಭ್ಯಗಳನ್ನು ಬಿಗಿಗೊಳಿಸಬೇಕು. (ಉದಾ. ಹರ್ಷ ಪ್ರಕರಣದ ಆರೋಪಿಗೆ ಮೊಬೈಲ್ ಕೂಡ ಸಿಕ್ಕಿದೆ) ಕೋಮು ಘಟನೆಗಳಿಂದಾಗಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ಪ್ರವಾಸೋದ್ಯಮದ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತಿದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟಬೇಕು, ಪ್ರಚೋದನಕಾರಿ ಭಾಷಣಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸಿಆರ್‌ಪಿಸಿ 144 ನಿಷೇಧಾಜ್ಞೆಗಳನ್ನು ವಿಧಿಸುವಾಗ ಕನಿಷ್ಠ ರಾತ್ರಿ 8 ಗಂಟೆಯ ನಂತರ ಮಾಡಬೇಕು.

ಬಿಕ್ಕಟ್ಟಿನ ಸಮಯದಲ್ಲಿ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸುವುದು ಮತ್ತು ಯಾವುದೇ ಘಟನೆಗಳ ಸಂಚುಕೋರರ ಮೇಲೆ ಕ್ರಮ ತೆಗೆದುಕೊಳ್ಳಬೇಕು. 144 ಸಿಆರ್‌ಪಿಸಿ ವಿಧಿಸುವಾಗ ಖಾಸಗಿ ಬಸ್ ಮತ್ತು ಆಟೋ ಅಸೋಸಿಯೇಷನ್‌ಗಳ ಜೊತೆಗೆ ಚರ್ಚಿಸಬೇಕು. ಹುಕ್ಕಾ ಬಾರ್, ಪಬ್‌ಗಳು ಇತ್ಯಾದಿಗಳ ಚಟುವಟಿಕೆಯನ್ನು ನಿಯಂತ್ರಿಸಬೇಕು.

ಸಭೆಯ ಬಳಿಕ ಎಜಿಡಿಪಿ ಅಲೋಕ್ ಕುಮಾರ್ ಮಾತನಾಡಿ, ಮುಂದಿನ ದಿನಗಳಲ್ಲಿ ಸೂಕ್ಷ್ಮ ಪ್ರದೇಶಗಳಲ್ಲಿ ನಿರಂತರವಾಗಿ ಶಾಂತಿಸಭೆಯನ್ನು ನಡೆಸಲಾಗುತ್ತದೆ. ಬೀಟ್ ಕಮಿಟಿ, ಮೊಹಲ್ಲಾ ಸಮಿತಿ, ಯುವ ಸಮಿತಿ ರಚಿಸಿ ದ.ಕ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲಾಗುತ್ತದೆ‌. ಶಾಂತಿ ಸಭೆಯಲ್ಲಿ ಹಲವರಿಂದ ಬೇರೆ ಬೇರೆ ಅಭಿಪ್ರಾಯಗಳು ವ್ಯಕ್ತವಾಗಿವೆ. ಸಾಕಷ್ಟು ಸಲಹೆಗಳು ಬಂದಿವೆ‌‌. ಪ್ರಚೋದನಕಾರಿ ಭಾಷಣಗಳ ಬಗ್ಗೆ ದೂರು ಬಂದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು‌.

ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಮೊದಲ ಹಂತದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಮುಂದಿನ ಹಂತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಮುಂದಿನ ವಾರದಲ್ಲಿ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಯಲಿದೆ. ಇಂದು ಎಲ್ಲಾ ಸಮುದಾಯಗಳನ್ನು ಪ್ರತಿನಿಧಿಸುವವರು ಇದ್ದರು. ಸಭೆಗೆ ಬಾರದೆ ಇರುವವರನ್ನು ಮುಂದಿನ ಸಭೆಗಳಿಗೆ ಭಾಗವಹಿಸಲು ತಿಳಿಸಲಾಗುವುದು ಎಂದರು.

ಸಭೆಯ ಬಳಿಕ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಮಾತನಾಡಿ, ಸಭೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ನೀಡಿದ ಸಲಹೆಗಳನ್ನು ಆಲಿಸಲಾಗಿದೆ. ಅತಂಕದ ವಾತಾವರಣ ಮುಕ್ತಾಯ ಮಾಡಲು ಶಾಂತಿ ಸಭೆಯ ಮೂಲಕ ಪ್ರಯತ್ನ ಆಗಿದೆ. ಶಾಂತಿ ಸಭೆಗೆ ಮುಸ್ಲಿಂ ಮುಖಂಡರು ಬಹಿಷ್ಕರಿಸಿದ್ದಾರೆ ಎಂದು ಕೇಳಿಬರುತ್ತಿದೆ. ಆ ರೀತಿ ಆಗಿಲ್ಲ. ಸಾಕಷ್ಟು ಜನರು ಬಂದಿದ್ದಾರೆ. ಇವತ್ತು ‌ನಡೆದ ಸಭೆಯ ಸಮಯದಲ್ಲಿ ಅವರ ಸಮಿತಿ ಸಭೆ ನಡೆದಿದ್ದರಿಂದ ಕೆಲವರಿಗೆ ಭಾಗಿಯಾಗಲು ಸಾಧ್ಯವಿಲ್ಲ. ಇನ್ನೂ ಕೆಲವರು ಕೆಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ‌ಬಂದಿರಲಿಲ್ಲ. ಅದನ್ನು ಸಭೆಗೆ ಬಂದವರು ತಿಳಿಸಿದ್ದಾರೆ ಎಂದು ತಿಳಿಸಿದರು.

ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳು ಬ್ಯಾನ್ ಆಗಲಿ; ಮಿಥುನ್ ರೈ: ಶಾಂತಿ ಸಭೆಯಲ್ಲಿ ‌ಪಾಲ್ಗೊಂಡ ಬಳಿಕ ಮಾತನಾಡಿದ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಕಳೆದೆರಡು ವಾರಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವಾರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳು ಬ್ಯಾನ್ ಆಗಲಿ. ಮುಂಬರುವ ದಿನಗಳಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಸಲಹೆಯನ್ನು ಶಾಂತಿಸಭೆಯಲ್ಲಿ ನೀಡಿದ್ದೇವೆ. ದ.ಕ. ಜಿಲ್ಲೆ ಅಭಿವೃದ್ಧಿ, ಉದ್ಯೋಗವಂತರ, ಸೌಹಾರ್ದತೆಯ ಜಿಲ್ಲೆಯಾಗಬೇಕು. ಮುಂಬರುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕೆಂಬ ಸ್ಪಷ್ಟವಾದ ಮಾಹಿತಿ ನೀಡಿದ್ದೇವೆ‌ ಎಂದರು.

ಇದನ್ನೂ ಓದಿ : ರಾಜಕೀಯಕ್ಕೋಸ್ಕರ ಕೊಲೆಗಳು ನಡೆಯುತ್ತಿವೆ, ಇವುಗಳನ್ನು ಹತೋಟಿಗೆ ತರಬೇಕು: ಸಚಿವ ಮಾಧುಸ್ವಾಮಿ

Last Updated : Jul 30, 2022, 7:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.