ETV Bharat / city

ಮಂಗಳೂರು: ನಾಪತ್ತೆ ಪ್ರಕರಣ ಭೇದಿಸುವ ವೇಳೆ ಬಯಲಾಯ್ತು ಮಹಿಳೆಯ ಲಿವಿಂಗ್ ಟುಗೆದರ್ ರಿಲೇಷನ್​ಶಿಪ್ - Man Living Together Relationship with 2 children mother

ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಪ್ರಕರಣವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಈ ವೇಳೆ ಪ್ರಕರಣಕ್ಕೊಂದು ಟ್ವಿಸ್ಟ್​ ಸಿಕ್ಕಿದೆ. ನಾಪತ್ತೆಯಾಗಿದ್ದ ಮಹಿಳೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಹಜೀವನ ನಡೆಸುತ್ತಿರುವುದು ತಿಳಿದುಬಂದಿದೆ.

Mangalore
ಮಂಗಳೂರು
author img

By

Published : Sep 22, 2021, 4:42 PM IST

ಮಂಗಳೂರು: ನಗರದಲ್ಲಿ ಗದಗ ಮೂಲದ ಮಹಿಳೆಯೊಬ್ಬರು ತನ್ನಿಬ್ಬರು ಮಕ್ಕಳೊಂದಿಗೆ‌ ನಾಪತ್ತೆಯಾದ ಪ್ರಕರಣ ಭೇದಿಸುವ ವೇಳೆ ಆಕೆ ಇನ್ನೋರ್ವ ವ್ಯಕ್ತಿ ಜೊತೆ ಲಿವಿಂಗ್ ಟುಗೆದರ್(ಸಹಜೀವನ) ರಿಲೇಷನ್​ಶಿಪ್​ನಲ್ಲಿರುವ ವಿಚಾರ ಬಯಲಾಗಿದೆ.

ಗದಗ ಮೂಲದ ಮಹಿಳೆ ಮತ್ತು ಇಬ್ಬರು ಮಕ್ಕಳು ಮಂಗಳೂರಿನ ಅಶೋಕ ನಗರದಿಂದ ನಾಪತ್ತೆಯಾಗಿದ್ದಾರೆ ಎಂದು ಆಕೆಯ ಪತಿ ಎಂದು ಹೇಳಿಕೊಂಡ ನಾಗರಾಜ ಹಾಲಪ್ಪ ಎಂಬಾತ ಮಂಗಳೂರಿನ ಉರ್ವ ಠಾಣೆಯಲ್ಲಿ ದೂರು ನೀಡಿದ್ದ.

ನಾಗರಾಜ ಹಾಲಪ್ಪ ಕೂಡ ಗದಗ ಮೂಲದವನಾಗಿದ್ದು, ಸೆ.17 ರಂದು ಗದಗ ಜಿಲ್ಲೆಯ ಹೆಬ್ಬಾಳಕ್ಕೆ ಹೋಗಿ ಸೆ.20 ರಂದು ಮಂಗಳೂರಿಗೆ ಬಂದಿದ್ದ. ಸೆ. 20 ರಂದು ಮನೆಗೆ ಬಂದ ವೇಳೆ ಹೆಂಡತಿ ಮತ್ತು ಮಕ್ಕಳು ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿದ್ದ ಮಹಿಳೆ ಮತ್ತು ಮಕ್ಕಳನ್ನು ಗದಗ ಜಿಲ್ಲೆಯಲ್ಲಿ ಪತ್ತೆ ಮಾಡಿದ್ದರು. ಈ ಸಂದರ್ಭದಲ್ಲಿ ‌ಮಹಿಳೆಯನ್ನು ವಿಚಾರಣೆ ಮಾಡಿದ ವೇಳೆ ನಾಗರಾಜ ಹಾಲಪ್ಪ ಪತಿಯಲ್ಲ. ತಾವಿಬ್ಬರು ಲಿವಿಂಗ್ ಟುಗೆದರ್ ರಿಲೇಷನ್ ಶಿಪ್​​ನಲ್ಲಿ ಇದ್ದೆವು ಎಂದು ಮಹಿಳೆ ತಿಳಿಸಿದ್ದಾಳೆ.

ಮಹಿಳೆಗೆ ಈ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದರು. ಬಳಿಕ ಪತಿ ನಿಧನರಾಗಿದ್ದರು. ಗದಗದಲ್ಲಿ ನಾಗರಾಜ ಹಾಲಪ್ಪ ಜತೆಗೆ ಪ್ರೇಮಾಂಕುರವಾಗಿ ಮಂಗಳೂರಿಗೆ ಮಕ್ಕಳೊಂದಿಗೆ ಬಂದು ನೆಲೆಸಿದ್ದಾರೆ. ಸುಮಾರು 6 ವರ್ಷಗಳಿಗೂ ಅಧಿಕ ವರ್ಷ ಇವರು ಜೊತೆಯಾಗಿ ನೆಲೆಸಿದ್ದು, ನಾಗರಾಜ ಹಾಲಪ್ಪನ ಹಿಂಸೆಯಿಂದ ಈ ಮಹಿಳೆ ನೊಂದಿದ್ದಳು. ನಾಗರಾಜ ಹಾಲಪ್ಪ ಊರಿಗೆಂದು ಹೋದ ಬೆನ್ನಲ್ಲೇ ಈಕೆ ಕೂಡ ಆತನಿಗೆ ತಿಳಿಯದಂತೆ ಗದಗಕ್ಕೆ ಹೋಗಿದ್ದಾಳೆ.

ಊರಿಗೆ‌ ಹೋದ ನಾಗರಾಜ ಹಾಲಪ್ಪ ಮರಳಿ ಬರುವಾಗ ಇವರು ನಾಪತ್ತೆಯಾಗಿರುವುದನ್ನು ಕಂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ನಾಪತ್ತೆ ಪ್ರಕರಣ ಪತ್ತೆ ಹಚ್ಚುವ ವೇಳೆ ಈ ಜೋಡಿಯ ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ವಿಚಾರ ಬಯಲಾಗಿದೆ.

ಇದನ್ನೂ ಓದಿ: ರಾಯಚೂರಲ್ಲಿ ಅನಾರೋಗ್ಯದಿಂದ ಅಣ್ಣ ಮೃತ; ಸಹೋದರನ ಸಾವಿನ ಸುದ್ದಿ ಬೆನ್ನಲ್ಲೇ ತಂಗಿ ನಿಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.