ETV Bharat / city

ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಆರೋಪ ಸಾಬೀತು, ನಾಳೆ ಶಿಕ್ಷೆ ಪ್ರಕಟ - Mangalore rape case

ಖಾಸಗಿ ಬಸ್​ ನಿರ್ವಾಹಕನಾಗಿದ್ದ ಆರೋಪಿ ಬಾಲಕಿ ಶಾಲೆಗೆ ಹೋಗುವಾಗ ಪುಸಲಾಯಿಸಿದ್ದಾನೆ. ಇದೇ ವೇಳೆ, ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಇದನ್ನು ನಂಬಿದ ಆಕೆಯ ಜೊತೆ ಆರೋಪಿ ನಿತಿನ್​ ಹಲವು ಬಾರಿ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ.

rape case proved
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಆರೋಪ ಸಾಬೀತು
author img

By

Published : Nov 26, 2021, 6:22 PM IST

ಮಂಗಳೂರು: ವಿವಾಹವಾಗುವುದಾಗಿ ನಂಬಿಸಿ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಮಾಡಿದ ಘಟನೆ ಮಂಗಳೂರಿನಲ್ಲಿ ನಡೆದಿತ್ತು. ಈ ಕುರಿತ ವಿಚಾರಣೆ ಮುಗಿದು, ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಸೆಷನ್ಸ್​ ಕೋರ್ಟ್​ ನಾಳೆ(ಶನಿವಾರ)ಶಿಕ್ಷೆ ಪ್ರಕಟಿಸಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೇಪು ಗ್ರಾಮದ ನೀರ್ಕಜೆಯ ನಿತಿನ್ (27) ಎಂಬಾತ ವಿಟ್ಲ ಸಮೀಪದ 17 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ.

ಘಟನೆಯ ವಿವರ:

ಖಾಸಗಿ ಬಸ್​ ನಿರ್ವಾಹಕನಾಗಿದ್ದ ನಿತಿನ್​ 2014ರಿಂದ ಬಾಲಕಿಯ ಪರಿಚಯ ಬೆಳೆಸಿಕೊಂಡಿದ್ದಾನೆ. ಆಕೆ ಶಾಲೆಗೆ ಹೋಗುವಾಗ ಬಸ್​ನಲ್ಲಿ ಅವಳನ್ನು ಪುಸಲಾಯಿಸಿದ್ದಾನೆ. ಅಲ್ಲದೇ, ಮದುವೆಯಾಗುವುದಾಗಿಯೂ ನಂಬಿಸಿದ್ದ. ಇದನ್ನು ನಂಬಿದ ಬಾಲಕಿಯ ಜೊತೆ ಆರೋಪಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ.

ಇದಲ್ಲದೇ, ಬಾಲಕಿಯನ್ನು ರಹಸ್ಯವಾಗಿ ಬೆಂಗಳೂರಿಗೆ ಕರೆದೊಯ್ದು ಅಲ್ಲಿಯೂ ಅತ್ಯಾಚಾರ ನಡೆಸಿದ್ದಾನೆ. ಬೆಂಗಳೂರಿಗೆ ಕರೆದೊಯ್ಯಲು ಬಾಲಕಿಯ ಕಿವಿಯೋಲೆಯನ್ನೇ ಮಾರಾಟ ಮಾಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಬಾಲಕಿಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸರು ದೂರು ದಾಖಲಿಸಿಕೊಂಡು ನಿತಿನ್​ನನ್ನು ಬಂಧಿಸಿದ್ದರು. ಬಳಿಕ ತನಿಖೆ ನಡೆದು ನ್ಯಾಯಾಲಯಕ್ಕೆ ಪ್ರಕರಣದ ಚಾರ್ಜ್​ಶೀಟ್ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಒಂದನೇ ತ್ವರಿತಗತಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಸಾವಿತ್ರಿ ವಿ.ಭಟ್ ನಿತಿನ್​ ವಿರುದ್ಧ ಆರೋಪ ಸಾಬೀತಾದ ಕಾರಣ ಆತನನ್ನು ಅಪರಾಧಿ ಎಂದು ಘೋಷಿಸಿದ್ದಾರೆ. ನ.27ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದಾರೆ.

ವಿಶೇಷ ಸರಕಾರಿ ಅಭಿಯೋಜಕ ಸಿ.ವೆಂಕಟರಮಣ ಸ್ವಾಮಿ ಪ್ರಕರಣದಲ್ಲಿ ವಾದ ಮಂಡಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.