ಭಟ್ಕಳ: ಕೂಲಿ ಕೆಲಸಕ್ಕೆಂದು ತೆರಳಿದ್ದ ವ್ಯಕ್ತಿಯೋರ್ವ ಹಳ್ಳದ ಸಂಕ ದಾಟುವಾಗ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಶಿರಾಲಿಯ ಹೆಗಡೆ ಗ್ಯಾರೇಜ್ ಬಳಿ ನಡೆದಿದೆ.
ಶಿರಾಲಿಯ ಕೋಟೆಬಾಗಿಲು ನಿವಾಸಿ ಶಿವರಾಮ ಮಂಜಪ್ಪ ನಾಯ್ಕ(41) ಮೃತ ವ್ಯಕ್ತಿ. ಇಂದು ಬೆಳಗ್ಗೆ ಈ ದುರ್ಘಟನೆ ಸಂಭವಿಸಿದೆ.
ಈ ಕುರಿತು ಸಬಂಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.