ETV Bharat / city

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ.. - laksha deepotsava 2021

ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಹಳ ಸಂಭ್ರಮದಿಂದ ಜರುಗಿತು..

laksha deepotsava at putturu
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ
author img

By

Published : Dec 4, 2021, 12:44 PM IST

ಪುತ್ತೂರು : ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷ ದೀಪೋತ್ಸವ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ಶ್ರೀಧರ್ ತಂತ್ರಿಯವರ ನೇತೃತ್ವದಲ್ಲಿ ದೇವಳದ ಪ್ರಧಾನ ಅರ್ಚಕ ವಿ.ಎಸ್. ಭಟ್ ಅವರ ವೈದಿಕತ್ವದಲ್ಲಿ ನಿನ್ನೆ ಸಂಜೆ ಶ್ರೀ ದೇವರ ವಿಶೇಷ ಉತ್ಸವದೊಂದಿಗೆ ಆರಂಭಗೊಂಡಿತು. ದೇವಸ್ಥಾನದ ಒಳಗಾಂಗಣ, ಹೊರಾಂಗಣ, ರಥ ಬೀದಿಯಲ್ಲಿ ಸಾವಿರಾರು ಭಕ್ತರು ಹಣತೆ ಬೆಳಗಿಸಿ ದೀಪೋತ್ಸವದಲ್ಲಿ ಸಂಭ್ರಮಿಸಿದರು.

ಪುತ್ತೂರು ಲಕ್ಷ ದೀಪೋತ್ಸವ ಸಂಭ್ರಮ..

ದೀಪಾಲಂಕಾರ : ದೇವಸ್ಥಾನದ ದ್ವಾರ ಪ್ರಾಕಾರ ಗುಡಿಗಳಲ್ಲಿ ಮಾವಿನ ಎಲೆಯ ತೋರಣ, ದೇವಸ್ಥಾನದ ಸುತ್ತಮುತ್ತ ರಾಜಗೋಪುರವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿತ್ತು. ಇದರೊಂದಿಗೆ ಭಕ್ತರು ರಥ ಬೀದಿಯಲ್ಲಿ ಬೆಳಗಿಸಿದ ಹಣತೆಗಳ ಬೆಳಕು ಕಂಗೊಳಿಸುತ್ತಿತ್ತು. ಲಕ್ಷ ದೀಪೋತ್ಸವ ಪ್ರಯುಕ್ತ ನೂರಾರು ಮಂದಿ ಸ್ವಚ್ಛತಾ ಸೇನಾನಿಗಳು, ನಿತ್ಯ ಕರಸೇವಕರು, ಎಲ್ಲಾ ಕೆಲಸಗಾರರು ಕ್ಷೇತ್ರದ ಸ್ವಚ್ಛತೆ ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ದೇವಸ್ಥಾನದ ಮುಂಭಾಗ ನಿತ್ಯ ಕರಸೇವಕರು ಹಣತೆ ದೀಪಗಳನ್ನು ಜೋಡಿಸುವಲ್ಲಿ ಸಹಕರಿಸಿದರು.

ರಂಗೋಲಿ ನಡುವೆ ಕಂಗೊಳಿಸಿದ ಹಣತೆ : ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ರೋಹಿಣಿ ಆಚಾರ್ಯ ಅವರ ನೇತೃತ್ವದಲ್ಲಿ ಶೋಭಾ, ಸುಪ್ರಿಯ, ಪವಿತ್ರ, ಯಮುನಾ, ಪುಷ್ಪಾ, ಸಹನಾ ಮತ್ತು ಬಳಗದವರಿಂದ ರಥಬೀದಿಯಲ್ಲಿ ಬಣ್ಣದ ಹುಡಿಯ ರಂಗೋಲಿ ಮತ್ತು ಹೂವಿನ ರಂಗೋಲಿಯನ್ನು ಬಿಡಿಸಲಾಗಿತ್ತು. ಅದರ ಮಧ್ಯೆ ಹಣತೆಯ ಬೆಳಕು ನೋಡಲು ಆಕರ್ಷಣಿಯವಾಗಿತ್ತು. ದೇವಳದ ಒಳಾಂಗಣದಲ್ಲಿ ಮಹಾಲಿಂಗೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಿತು.

ದೀಪೋತ್ಸವ : ಸಂಜೆ ದೀವಟಿಕೆ ಸಲಾಂ ಆದ ಬಳಿಕ ದೇವಳದ ಬ್ರಹ್ಮಶ್ರೀ ವೇ ಮೂ ಶ್ರೀಧರ್ ತಂತ್ರಿ ಅವರು ಗರ್ಭಗುಡಿಯ ಭದ್ರ ದೀಪದಿಂದ ಏಕಾರತಿ ಮೂಲಕ ದೇವಳದ ರಥ ಬೀದಿಯಲ್ಲಿರುವ ಹಣತೆಗೆ ದೀಪ ಪ್ರಜ್ವಲಿಸಿದರು. ಬಳಿಕ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರವೀಂದ್ರನಾಥ ರೈ ಬಳ್ಳಮಜಲು, ಶೇಖರ್ ನಾರಾವಿ, ರಾಮಚಂದ್ರ ಕಾಮತ್, ರಾಮ್‌ದಾಸ್ ಗೌಡ, ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿಯವರು ದೀಪ ಪ್ರಜ್ವಲಿಸುವ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಬಲಿ ಉತ್ಸವ : ದೀವಟಿಗೆ ಸಲಾಂ ನಂತರ ರಾತ್ರಿಯ ಮಹಾಪೂಜೆಯ ಬಳಿಕ ಬಲಿ ಹೊರಟು ರುದ್ರವಾದ್ಯಗಳಾದ ತಿಮಲೆ (ಶಿವಲಿ) ಚಂಡೆ, ಡೋಲುಘಂಟೆಯ ತಾಂತ್ರಿಕವಾದನದೊಂದಿಗೆ ತಂತ್ರಸುತ್ತು, ಸರ್ವವಾದ್ಯ ಸುತ್ತಿನಲ್ಲಿ ರಾಜಾಂಗಣದಲ್ಲಿ ಉಡಕೆ, ಚಂಡೆ, ಭಜನೆ, ವಾದ್ಯ ಸುತ್ತುಗಳು ಜರುಗಿ ಚಂದ್ರಮಂಡಲ ರಥೋತ್ಸವ, ಕೆರೆ ಉತ್ಸವ ತೆಪ್ಪೋತ್ಸವದೊಂದಿಗೆ ದೇವರು ಒಳಗಾದರು. ತೆಪ್ರೋತ್ಸವದ ವೇಳೆ ಕೆರೆಯ ಸುತ್ತಲೂ ಹಣತೆ ದೀಪ ಬೆಳಗಿಸಲಾಯಿತು.

ನಿತ್ಯ ಕರಸೇವಕ ಗೌರವಾಧ್ಯಕ್ಷ ವೇಣಗೋಪಾಲ್ ಅವರ ನೇತೃತ್ವದಲ್ಲಿ ಹಲವಾರು ಮಂದಿ ಹಣತೆ ಬೆಳಗಿಸುವಲ್ಲಿ ಸಹಕರಿಸಿದರು. ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್ ವೈದಿಕ ಕಾರ್ಯ ನೆರವೇರಿಸಿದರು.

ಇದನ್ನೂ ಓದಿ: ಕ್ಲಸ್ಟರ್‌ಗಳನ್ನು ಸರಿಯಾಗಿ ನಿರ್ವಹಿಸುವಂತೆ ಸೂಚನೆ ನೀಡಲಾಗಿದೆ : ಸಿಎಂ ಬೊಮ್ಮಾಯಿ

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರಾದ ರಾಮ್‌ದಾಸ್ ಗೌಡ, ರಾಮಚಂದ್ರ ಕಾಮತ್, ರವೀಂದ್ರ ರೈ ಬಳ್ಳಮಜಲು, ಶೇಖರ್ ನಾರಾವಿ, ವೀಣಾ ಬಿ.ಕೆ, ಡಾ. ಸುಧಾ ಎಸ್ ರಾವ್, ಐತ್ತಪ್ಪ ನಾಯ್ಕ್, ಮಾಜಿ ಆಡಳಿತ ಮೊಕ್ತೇಸರ ಎನ್.ಕೆ. ಜಗನ್ನಿವಾಸ ರಾವ್ ಸೇರಿದಂತೆ ಸಾವಿರಾರು ಮಂದಿ ಭಕ್ತರು ಉತ್ಸವದಲ್ಲಿ ಪಾಲ್ಗೊಂಡರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.