ETV Bharat / city

ದೇವಸ್ಥಾನದ ಅರ್ಚಕ - ಸಿಬ್ಬಂದಿಗೆ ಇಸ್ಕಾನ್ ಮೂಲಕ ಕಿಟ್ ವಿತರಣೆ - ಸಚಿವ ಕೋಟ ಶ್ರೀನಿವಾಸ ಪೂಜಾರಿ

ತಾಲೂಕಿನ ತುಂಬೆಯಲ್ಲಿ ದೇವಸ್ಥಾನದ ಅರ್ಚಕರು, ಚಾಕರಿ ವರ್ಗದವರಿಗೆ ಇಸ್ಕಾನ್ ನೀಡಿದ ಆಹಾರ ಕಿಟ್ ಗಳನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿತರಿಸಿದರು.

Kota Srinivasa Poojary distributed kit temple staff
ದೇವಸ್ಥಾನದ ಅರ್ಚಕ-ಸಿಬ್ಬಂದಿಗೆ ಇಸ್ಕಾನ್ ಮೂಲಕ ಕಿಟ್ ವಿತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ..!
author img

By

Published : May 16, 2020, 9:58 PM IST

ಬಂಟ್ವಾಳ: ತುಂಬೆಯಲ್ಲಿ ದೇವಸ್ಥಾನದ ಅರ್ಚಕರು, ಚಾಕರಿ ವರ್ಗದವರಿಗೆ ಆಹಾರ ಕಿಟ್ ಗಳನ್ನು ಇಸ್ಕಾನ್ ನೀಡಿದ್ದು, ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿತರಿಸಿದರು.

ಲಾಕ್ ಡೌನ್ ನಿಂದ ಸಂಕಷ್ಟದಲ್ಲಿರುವ ತುಂಬೆ, ಕೊಡ್ಮಾಣ್, ನೆತ್ತರಕೆರೆ ಪರಿಸರದ ದೇವಸ್ಥಾನಗಳ ಅರ್ಚಕ ವರ್ಗ ಹಾಗೂ ಚಾಕರಿ ವರ್ಗದವರಿಗೆ ಇಸ್ಕಾನ್ ನ ಅಕ್ಷಯ ಪಾತ್ರೆ ಫೌಂಡೇಶನ್ ಅವರು ಕೊಡಮಾಡಿದ ಜೀವನಾವಶ್ಯಕ ಆಹಾರ ವಸ್ತುಗಳ ಕಿಟ್ ಅನ್ನು ನೀಡಲಾಯಿತು.

ಅಕ್ಷಯ ಪಾತ್ರೆ ಫೌಂಡೇಶನ್ ನ ಕಾರುಣ್ಯಾದಾಸ್ ಸ್ವಾಮೀಜಿ, ರಾಧಾದಾಸ್ ಸ್ವಾಮೀಜಿ , ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸತೀಶ್ ಕುಂಪಲ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.