ETV Bharat / city

ಕಾಸರಗೋಡು - ಮಂಗಳೂರು ಗಡಿ ಪ್ರವೇಶದ ಪಾಸ್ ಸೆ.8ರವರೆಗೆ ಮಾನ್ಯ: ಡಿಸಿ ಆದೇಶ - kasaragodu mangaluru border pass

ಕಾಸರಗೋಡು - ಮಂಗಳೂರು ಗಡಿ ಪ್ರವೇಶದ ಪಾಸ್​​ಅನ್ನು​​ ಸೆಪ್ಟೆಂಬರ್ 8ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ
author img

By

Published : Aug 8, 2020, 11:19 PM IST

ಮಂಗಳೂರು: ಕಾಸರಗೋಡು - ಮಂಗಳೂರು ಗಡಿ ಪ್ರವೇಶದ ಪಾಸ್​​ಅನ್ನು​​ ಸೆಪ್ಟೆಂಬರ್ 8ರವರೆಗೆ ಮಾನ್ಯ ಮಾಡಲಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.

ಕೊರೊನಾ ಸೋಂಕನ್ನು ತಡೆಗಟ್ಟುವ ಉದ್ದೇಶದಿಂದ ಗಡಿ ಪ್ರವೇಶ ಮಾಡಲು ಪಾಸ್ ಬಳಕೆ ಕಡ್ಡಾಯಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಾಸ್ ಅನ್ನು ಜುಲೈ 11ರವರೆಗೆ ನೀಡಲಾಗಿತ್ತು. ಇದೀಗ ಅದರ ಅವಧಿಯನ್ನು ಸೆಪ್ಟೆಂಬರ್ 8ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ.

ಪಾಸ್ ಹೊಂದಿರುವ ಎಲ್ಲರೂ ಗಡಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಗೃಹ ಸಚಿವಾಲಯದ ಅನ್ ಲಾಕ್ - 3 ಆದೇಶದಲ್ಲಿ ತಿಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.